ಮೂಗು ಕತ್ತರಿಸಬೇಕು, ತಲೆ ಕಡಿಯಬೇಕು ಅಂದರೆ ಅಸಹಿಷ್ಣುತೆ ಅಲ್ಲವೆ?: ರೈ
"ಒಬ್ಬರು ಮೂಗು ಕತ್ತರಿಸಬೇಕು, ಮತ್ತೊಬ್ಬರು ಕತ್ತು ಕತ್ತರಿಸಬೇಕು, ಇನ್ನೊಬ್ಬರಿಗೆ ನಟನನ್ನು ಗುಂಡಿಕ್ಕಿ ಕೊಲ್ಲಬೇಕು... ಮತ್ತು ವ್ಯವಸ್ಥೆಯೇ ಚಲನಚಿತ್ರೋತ್ಸವದಿಂದ ಕೆಲವು ಸಿನಿಮಾ ತೆಗೆದುಹಾಕಲು ಬಯಸುತ್ತದೆ. ಅದೂ ತೀರ್ಪುಗಾರರು ಆರಿಸಿಕೊಂಡ ನಂತರ ಇಂಥ ಪ್ರಯತ್ನ ಆಗುತ್ತದೆ" ಎಂದು ನಟ ಪ್ರಕಾಶ್ ರೈ ಮತ್ತೊಮ್ಮೆ ಕಿಡಿ ಕಾರಿದ್ದಾರೆ.
Who’s calling the shots.....#justasking pic.twitter.com/SWjk17bs31
— Prakash Raj (@prakashraaj) 16 November 2017
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ಎಂಬ ಒಕ್ಕಣೆಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಾಕಿರುವ ಬಹುಭಾಷಾ ನಟ ಪ್ರಕಾಶ್ ರೈ, ಆದರೂ ಅಸಹಿಷ್ಣುತೆ ಇಲ್ಲ, ಧ್ವನಿಯನ್ನು ಅಡಗಿಸುತ್ತಿಲ್ಲ, ಭಯ ಹುಟ್ಟಿಸುತ್ತಿಲ್ಲ ಎಂದು ಎಂದು ನಾವು ನಂಬಬೇಕು ಎಂದು ನೀವು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣ, ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಬಗ್ಗೆ ನೀಡಿದ ಹೇಳಿಕೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ಪ್ರಕಾಶ್ ರೈ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಈಚೆಗೆ ಕೂಡ ಅಪನಗದೀಕರಣದ ನಿರ್ಧಾರ ತಪ್ಪು. ಇದಕ್ಕಾಗಿಜನರ ಕ್ಷಮೆ ಯಾಚಿಸಬೇಕು ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು.












Click it and Unblock the Notifications