'ದ್ರೌಪದಿ' ಖ್ಯಾತಿಯ ರೂಪಾ ಗಂಗೂಲಿ ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ಕೋಲ್ಕತಾ, ಡಿಸೆಂಬರ್ 23: ನಟಿ, ರಾಜಕಾರಣಿ ರೂಪಾ ಗಂಗೂಲಿ ಅವರನ್ನು ಶುಕ್ರವಾರ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾಭಾರತ ಧಾರಾವಾಹಿಯ ದ್ರೌಪದಿ ಖ್ಯಾತಿಯ ರೂಪಾ ಅವರು ಬಿಜೆಪಿ ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ರೂಪಾ ಅವರು ತೀವ್ರವಾದ ತಲೆನೋವು, ಮಂದ ದೃಷ್ಟಿಯಿಂದ ಬಳಲುತ್ತಿದ್ದರು.[ಮಹಾಭಾರತದ ದ್ರೌಪದಿ ರೂಪಾ ಈಗ ಸಂಸದೆ]

Actor BJP MP Roopa Ganguly hospitalised

ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ರೂಪಾ ಅವರನ್ನು ಎಎಂಆರ್ ಐ ಆಸ್ಪತ್ರೆಗೆ ದಾಖಲಿಸಲಾಯಿತು. ರೂಪಾ ಅವರು ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಂಜುದಾರ್ ಹೇಳಿದ್ದಾರೆ.

ವಿಶ್ರಾಂತಿ ಅಗತ್ಯ: ರೂಪಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ದೇಹ ಸ್ಥಿತಿ ಈಗ ಸುಧಾರಿಸಿದೆ. ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.[ರಾಜಕೀಯ ಗಲಭೆ : ಬಿಜೆಪಿ ನಾಯಕಿ ರೂಪಾ ಗಂಗೂಲಿ ತಲೆಗೆ ಪೆಟ್ಟು]

1980ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿ.ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರ ನಿರ್ವಹಿಸಿ ಮನೆ ಮಾತಾಗಿದ್ದ ರೂಪಾ ಅವರು ಕಳೆದ ವರ್ಷ ಬಿಜೆಪಿ ಸೇರಿದ್ದರು.

ಕಳೆದ ವರ್ಷ ಅಕ್ಟೋಬರ್ ನಲ್ಲಿ ನವಜ್ಯೋತ್ ಸಿಂಗ್ ಸಿಧು ಅವರಿಂದ ತೆರವಾದ ರಾಜ್ಯ ಸಭಾ ಸ್ಥಾನಕ್ಕೆ ರೂಪಾ ಅವರನ್ನು ಬಿಜೆಪಿ ನಾಮಾಂಕಿತಗೊಳಿಸಿತ್ತು. ಪಶ್ಚಿಮ ಬಂಗಾಲದಲ್ಲಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MP Roopa Ganguly has been admitted to a private hospital in Kolkata with “blood clots” in the brain tissues on Friday.
Please Wait while comments are loading...