ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀವಿ ಕಾರ್ಯಕ್ರಮದಲ್ಲಿ ಕುಸಿದು ಮೃತಪಟ್ಟ ರೀತಾ ಜೆತಿಂದರ್

|
Google Oneindia Kannada News

ಶ್ರೀನಗರ್, ಸೆಪ್ಟೆಂಬರ್ 10 : ಜಮ್ಮು-ಕಾಶ್ಮೀರದಲ್ಲಿ ಬಹಳ ಹೆಸರಾಂತ ವಿದ್ವಾಂಸರಾದ ರೀತಾ ಜೆತಿಂದರ್ ಟಿ.ವಿ. ಕಾರ್ಯಕ್ರಮವೊಂದು ನಡೆಯುವಾಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರೀತಾ ಜೆತಿಂದರ್ ಸಾಮಾಜಿಕ ಕಾರ್ಯಕರ್ತೆ ಹಾಗೂ ಡೋಗ್ರಿ ಭಾಷಾ ತಜ್ಞೆ. ಸರಕಾರಿ ಸ್ವಾಮ್ಯದ ದೂರದರ್ಶನ ನೇರಪ್ರಸಾರ ಕಾರ್ಯಕ್ರಮ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ರೀತಾ ಜೆತಿಂದರ್ ರ ಸಾವಿಗೆ ಹೃದಯ ಸ್ತಂಭನ ಕಾರಣ ಎಂದು ತಿಳಿದುಬಂದಿದೆ. ಸಂದರ್ಶಕರ ಜತೆಗೆ ಮಾತನಾಡುವಾಗಲೇ ರೀತಾ ಕುಸಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಕಾರ್ಯದರ್ಶಿಯಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ವಿಡಿಯೋ ನೋಡಿ ಹಲವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Activist Rita Jetinder collapses on Live TV during talk show In Srinagar, dies

ಈ ವರ್ಷದ ಜನವರಿಯಲ್ಲಿ ಕೇರಳದ ತ್ರಿಶ್ಶೂರ್ ಜಿಲ್ಲೆಯ ಇರಿಂಜಲಕ್ಕುಡ ದೇವಸ್ಥಾನದಲ್ಲಿ ಕಲಾ ಪ್ರದರ್ಶನ ನೀಡುವಾಗಲೇ ಕಲಾಮಂಡಲಂ ಗೀತಾನಂದನ್ ಸಾವನ್ನಪ್ಪಿದ್ದರು. ಆ ನೃತ್ಯ ಕಲಾವಿದರು ಪ್ರದರ್ಶನ ನೀಡುವಾಗಲೇ ಹೇಗೆ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

English summary
A prominent scholar in Jammu and Kashmir died in the middle of a TV show on Monday. Rita Jetinder, a social activist and a Dogri scholar, was on a show on state-run Doordarshan in Srinagar when she collapsed live on TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X