ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Positive News: ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡ ಭಾರತ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಶೇ 70 ಪಟ್ಟು ಹೆಚ್ಚು ವೇಗವಾಗಿ ಹರಡುವ ರೂಪಾಂತರ ತಳಿಯ ಭೀತಿಯ ನಡುವೆಯೂ ಭಾರತದಲ್ಲಿನ ಕೊರೊನಾ ವೈರಸ್ ನಿಯಂತ್ರಣ ಸಮಾಧಾನಕರ ಸ್ಥಿತಿಯಲ್ಲಿದೆ. ಮುಖ್ಯವಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.

ಕಳೆದ 11 ದಿನಗಳಿಂದ ದೇಶದಲ್ಲಿ ದಿನವೂ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳು 30 ಸಾವಿರಕ್ಕಿಂತ ಕಡಿಮೆಯಿದ್ದು, ಮರಣ ಪ್ರಮಾಣ ಕಳೆದ 12 ದಿನಗಳಿಂದ 400ಕ್ಕಿಂತ ಕಡಿಮೆ ವರದಿಯಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.83 ಲಕ್ಷಕ್ಕೆ ಇಳಿದಿರುವುದು ಗಮನಾರ್ಹ.

'ಕೊರೊನಾ' ವೈರಸ್ ಇನ್ನೂ 10 ವರ್ಷ ಭೂಮಿ ಬಿಟ್ಟು ತೊಲಗುವುದಿಲ್ಲ!'ಕೊರೊನಾ' ವೈರಸ್ ಇನ್ನೂ 10 ವರ್ಷ ಭೂಮಿ ಬಿಟ್ಟು ತೊಲಗುವುದಿಲ್ಲ!

ಗುರುವಾರ ಬೆಳಗಿನ ಆರೋಗ್ಯ ಇಲಾಖೆಯ ವರದಿಯಂತೆ ಭಾರತದಲ್ಲಿ 2,83,849 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯ ಪಾಲು ಗಣನೀಯವಾಗಿ ತಗ್ಗುತ್ತಿದ್ದು, ಪ್ರಸ್ತುತ ಶೇ 2.80ರಷ್ಟಿದೆ. ಬುಧವಾರದಿಂದ ಗುರುವಾರದವರೆಗೆ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 5,391ರಷ್ಟು ಕಡಿಮೆಯಾಗಿದೆ. ಮುಂದೆ ಓದಿ.

ನವೆಂಬರ್‌ನಿಂದ ಇಳಿಕೆ

ನವೆಂಬರ್‌ನಿಂದ ಇಳಿಕೆ

ಕಳೆದ 27 ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆಗಸ್ಟ್‌ನಿಂದ ತೀವ್ರ ಹೆಚ್ಚಾಗಿ ಕೋವಿಡ್ ಪ್ರಕರಣಗಳು, ಸೆ 16 ರಿಂದ ಅ. 8ರವರೆಗೆ ಅತ್ಯಧಿಕವಾಗಿದ್ದರಿಂದ ಸಕ್ರಿಯ ಪ್ರಕರಣಗಳು ಗರಿಷ್ಠ ಅಂದರೆ, 9,95,933ಕ್ಕೆ ತಲುಪಿತ್ತು. ಆದರೆ ಅಕ್ಟೋಬರ್ ಬಳಿಕ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ನವೆಂಬರ್ ತಿಂಗಳ ಬಳಿಕ ಸಕ್ರಿಯ ಪ್ರಕರಣಗಳಲ್ಲಿ ತೀವ್ರ ಇಳಿಕೆಯಾಗಿದೆ.

ಶೇ 95ರಷ್ಟು ಗುಣಮುಖ

ಶೇ 95ರಷ್ಟು ಗುಣಮುಖ

ಇದುವರೆಗೂ 96,93,173 ಮಂದಿ ವೈರಸ್‌ನಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ 95.75ಕ್ಕೆ ಏರಿಕೆಯಾಗಿದೆ. ಚೇತರಿಕೆ ಕಂಡ ಹೊಸ ಪ್ರಕರಣಗಳಲ್ಲಿ ಶೇ 79.56ರಷ್ಟು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ.

ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?

350ಕ್ಕಿಂತ ಕಡಿಮೆ

350ಕ್ಕಿಂತ ಕಡಿಮೆ

ಹೊಸ ಸಾವುಗಳಲ್ಲಿ ಶೇ 79.81ರಷ್ಟು ಸಾವುಗಳು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ. ಡಿಸೆಂಬರ್ 13ರಂದು 391 ಪ್ರಕರಣಗಳು ವರದಿಯಾಗಿದ್ದವು. ಡಿ. 18ರಿಂದ ಸತತವಾಗಿ 350ಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಸಾವು

ಮಹಾರಾಷ್ಟ್ರದಲ್ಲಿ ಹೆಚ್ಚು ಸಾವು

ಬುಧವಾರದಂದು 312 ಸಾವುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 93 ಸಾವುಗಳು ವರದಯಾಗಿವೆ. ಪಶ್ಚಿಮ ಬಂಗಾಳದಲ್ಲಿ 34 ಮತ್ತು ಕೇರಳದಲ್ಲಿ 22 ಸಾವುಗಳು ವರದಿಯಾಗಿವೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 6,169 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

English summary
Active coronavirus cases in India continue to decline and now decreased to 2.83 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X