Act of War: ಪಾಕಿಸ್ತಾನ್ ವಿರುದ್ಧ ಹೊಸ ನಿಯಮ: ಯಾವ ಕೃತ್ಯವೆಸಗಿದರೂ ಯುದ್ಧವೆಂದು ಪರಿಗಣನೆ ಪ್ರತಿದಾಳಿ: ಭಾರತ

ನವದೆಹಲಿ, ಮೇ 10: ಭಾರತ ಪಾಕಸ್ಥಾನ ಯುದ್ಧ ಮುಂದುವರಿದಿದೆ. ಮೂರನೇ ದಿನವೂ ದಾಳಿಗೆ ಪ್ರತಿದಾಳಿ ಮಾಡುತ್ತಿರುವ ಭಾರತ ಪಾಕ್ ವಿರುದ್ಧ ಹೊಸ ನಿಯಮ ಜಾರಿಗೆ ತಂದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವದ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕ್ ಅನ್ನು ಎಲ್ಲ ಕಡೆಗಳಿಂದ ಕಟ್ಟಿ ಹಾಕುತ್ತಾ ಬಂದಿದೆ.

ಇದೀಗ ಇಂಡೋ ಪಾಕ್ ಯುದ್ಧ ಮೂರನೇ ದಿನಕ್ಕೆ ಕಾಲಿಟ್ಟದೆ. ಒಂದೇ ವೇಳೆ ಭಾರತದ ಮೇಲೆ ಪಾಕಿಸ್ತಾನದಿಂದ ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲು ನಿರ್ಧರಿಸಿದೆ. ಯಾವ ಸಣ್ಣ ಕೃತ್ಯ ಪಾಕ್‌ನಿಂದ ನಡೆದರೂ ಸಹಿತ ಅದನ್ನು ಯುದ್ಧವೆಂದು ಪರಿಗಣಿಸಿ ಪ್ರತಿ ದಾಳಿ ನಡೆಸಲಾಗುವುದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಮಾಡಲಾಗುವುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

Act of War India Warns to Pakistan Future Terror Attacks Will Be Treated as Acts of War

ಭಾರತದ ಗಡಿ ಪಾಕ್‌ಗೆ ಹೊಂದಿಕೊಂಡ ಪಂಜಾಬ್, ರಾಜಸ್ಥಾನ, ಗುಜರಾತ್ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಯುದ್ಧ ನಡೆದಿದೆ. ಕಳೆದ ಮೂರು ರಾತ್ರಿಗಳಿಂದ ಉತ್ತರ ಭಾರತದ ಮಿಲಿಟರಿ ಪಡೆಗಳು ದೇಶದ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಡೆಸುತ್ತಿರುವ ಪಾಕಿಸ್ತಾನ ಮೇಲೆ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನ್ ಎಲ್ಲ ಕುತಂತ್ರಗಳನ್ನು, ದಾಳಿಗಳನ್ನು ಭಾರತ ಯಶಸ್ವಿಯಾಗಿ ತಡೆದಿದೆ. ಇಂತಹ ಸಂದರ್ಭದಲ್ಲಿ ಈ Acto of War ನಿಯಮ ಮಹತ್ವ ಪಡೆದಿದೆ.

Take a Poll

ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಎಚ್ಚರಿಕೆ

ಪಾಕಿಸ್ತಾನ ಉಗ್ರರು ಜಮ್ಮು ಕಾಶ್ಮೀಸರ ಪಹಲ್ಗಾಮ್‌ನಲ್ಲಿ ಭಾರತೀಯ 26 ಪ್ರವಾಸಿಗರನ್ನು ಹತ್ಯೆಗೈದು ದುಷ್ಟತನ ಮೆರೆದಿದ್ದರು. ಎರಡು ವಾರಗಳ ನಂತರ ಗಡಿಯಾಚೆಗಿನ ಸಂಪರ್ಕಗಳ ವಿರುದ್ಧ ಹೊಸ ನಿಯಮ ಮೊಳಗಿದೆ. ಇದು ಭವಿಷ್ಯದಲ್ಲಿ ಭಾರತಕ್ಕೆ ವರದಾನವಾಗಲಿದೆ. ಅಲ್ಲದೇ ಗಡಿಯೊಳಗೆ ನುಗ್ಗಿ ಪದೇ ಪದೇ ಖ್ಯಾತೆ ತೆಗೆಯುವ ಪಾಕ್‌ಗೆ ಸದಾ ಎಚ್ಚರಿಕೆ ಗಂಟೆಯಾಗಿರಲಿದೆ.

ಸದ್ಯ ಪಾಕ್ ಪಹ್ಲಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಕೆ) ಭಯೋತ್ಪಾದಕ ಅಡಗುತಾಣಗಳು, ಶಿಬಿರಳ ಮೇಲೆ ಭಾರತ ನಿಖರವಾದ ಕ್ರೂಸ್ ಕ್ಷಿಪಣಿ ದಾಳಿ ನಡೆಸಿತು. ಹಲವು ಉಗ್ರರನ್ನು ಹೊಡೆದುರುಳಿಸಿತು. ಬಳಿಕ ಭಾರತದ ನಾಗರಿಕರು, ವಿಮಾನ ನಿಲ್ದಾಣ ಗುರಿಯಾಗಿ ಪಾಕ್ ಮಾಡಿದ ದಾಳಿಯನ್ನು ಭಾರತ ಹಿಮ್ಮೆಟ್ಟಿಸಿದೆ. ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿದೆ.

ಭಾರತದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನ ಸದಾ ಭಯೋತ್ಪಾದಕರನ್ನು ಬೆಂಬಲಿಸುತ್ತಲೇ ಬಂದಿದೆ. ಮೇ 7 ರಂದು ಆಪರೇಷನ್ ಸಿಂಧೂರ್‌ನ ಭಾಗವಾಗಿ ಭಾರತದವು ಮೂರು ಸೇನೆಗಳು ಪ್ರಬಲ ದಾಳಿ ನಡೆಸಿವೆ. ಉಗ್ರರ ಅಡಗುತಾಣ, ಪಾಕ್ ಸೈನಿಕ ನೆಲಗಳು ಅಲ್ಲದೇ ಎರಡು ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದೆ. ಲಾಹೋರ್ ಮೇಲೆ ಅಟ್ಯಾಕ್ ಮಾಡಿ ದಾಳಿ ಪ್ರತಿದಾಳಿ ಮಾಡಿದೆ.

ಪಿಒಜೆಕೆಯಲ್ಲಿನ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳಿಗೆ ಪಾಕ್ ಸೇನೆಯು ಲಾಜಿಸ್ಟಿಕಲ್ ಬೆಂಬಲ, ಸುರಕ್ಷಿತ ತಾಣ ಒದಗಿಸುವಿಕೆ, ತರಬೇತಿ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತಿರುವ ಬಗ್ಗೆ ಭಾರತೀಯ ಮಿಲಿಟರಿ ಹಾಗೂ ಗುಪ್ತಚರ ಮೂಲಗಳು ಒಂದಷ್ಟು ಪುರಾವೆ ನೀಡಿವೆ. ಇಲ್ಲಿನ ಉಗ್ರರ ಶಿಬಿರಗಳು ಕಂಟೋನ್ಮೆಂಟ್‌ಗಳಿಗೆ ಹತ್ತಿರದಲ್ಲಿರುವ ಕಾಣ ಅವುಗಳನ್ನು ಬೇಕಂತಲೇ ರಕ್ಷಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಭಾರತದಿಂದ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ

ಅನೇಕ ಸಂದರ್ಭಗಳಲ್ಲಿ ಭಯೋತ್ಪಾದಕರು ಪಾಕಿಸ್ತಾನ ಸೈನ್ಯದ ನೆರವು, ಮೂಲಸೌಕರ್ಯ ಪಡೆದಿರುವ ನಿದರ್ಶನಗಳು ಇವೆ. ಈ ಕಾರಣದಿಂದಲೇ ಭಾರತದ ಗಡಿಯಲ್ಲಿ ನಿರ್ಬಂಧಿತ ಪ್ರದೇಶಗಳಿಗೆ ಭಯೋತ್ಪಾದಕರು ಪ್ರವೇಶ ಪಡೆಯುತ್ತಿದ್ದಾರೆ. ಇದೆಲ್ಲ ಕಾರಣದಿಂದ ಭವಿಷ್ಯದಲ್ಲಿ ಹೀಗಾಗದಂತೆ ತಡೆಯಲು ಹೊಸ ನಿಯಮ ಜಾರಿಗೆ ತಂದಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯ ನೀಡಲು ಸಿದ್ಧವಾಗಿರುವ ಭಾರತದ Acto of War ನಿಯಮದಲ್ಲಿ ಭಯೋತ್ಪಾದಕ ಕೃತ್ಯವು ಬಾಂಬ್ ದಾಳಿಗಳು, ಗುಂಡಿನ ದಾಳಿ, ವಿಮಾನ ಅಪಹರಣ ಮತ್ತು ಸೈಬರ್, ಜೈವಿಕ ಇಲ್ಲವೇ ರಾಸಾಯನಿಕ ದಾಳಿ ಒಳಗೊಂಡಿದೆ. ಇದು ನಡೆದಿದ್ದೇ ಆದಲ್ಲಿ ಪ್ರತಿಕಾರವಾಗಿ ಭಾರತ ಯುದ್ಧ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+