ಜಿಯೋ ಮಾಹಿತಿ ಸೋರಿಕೆಯ ಆರೋಪಿಗಿತ್ತು ಮಾಸ್ಟರ್ ಪ್ಲಾನ್
ಮುಂಬೈ, ಜುಲೈ 13: ರಿಲಯನ್ಸ್ ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಇಮ್ರಾನ್ ಚಿಂಪಾ ಎಂದು ಗುರುತಿಸಲಾಗಿದೆ. ಆತ ಜಿಯೋದ ಮಾಹಿತಿಗಳನ್ನು ವೆಬ್ಸೈಟ್ ಒಂದರಲ್ಲಿ ಬಹಿರಂಗಪಡಿಸಿದ್ದ ಎಂದು ಗೊತ್ತಾಗಿದೆ.
ಇದಕ್ಕಿಂತ ವಿಶೇಷವೆಂದರೆ ವಿಚಾರಣೆ ವೇಳೆ ಆತ ತಾನು ಸರ್ಚ್ ಇಂಜಿನ್ ಆರಂಭಿಸಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾನೆ. ಎಲ್ಲಾ ಟೆಲಿಕಾಂ ಕಂಪೆನಿಗಳ ಮಾಹಿತಿಗಳನ್ನು ಇಟ್ಟುಕೊಂಡು ಆತ ಸರ್ಜ್ ಇಂಜಿನ್ ಆರಂಭಿಸಲು ಯೋಚಿಸಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಚಿಂಪಾ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪಂಟನಾಗಿದ್ದು ರಾಜಸ್ಥಾನದಲ್ಲಿ ಆತನನ್ನು ಬಂಧಿಸಲಾಗಿದೆ. ನಂತರ ಮಹಾರಾಷ್ಟ್ರಕ್ಕೆ ಹೆಚ್ಚಿನ ವಿಚಾರಣೆಗಾಗಿ ಕರೆತರಲಾಗಿದೆ.
ವಿಚಾರಣೆ ವೇಳೆ ತಾನು ಡೇಟಾ ವರ್ಗಾವಣೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದಾಗಿ ಆತ ಹೇಳಿದ್ದಾನೆ. ವೆಬ್ಸೈಟ್ ನಲ್ಲಿರುವ ಅಪ್ಲಿಕೇಶನ್ ಮೂಲಕವೇ ತಾನು ಮಾಹಿತಿ ಕಲೆ ಹಾಕಿರುವುದಾಗಿಯೂ ಆತ ಒಪ್ಪಿಕೊಂಡಿದ್ದಾನೆ.
ನಾನು ಗ್ರಾಹಕರ ಫೋನ್ ನಂಬರ್, ಹೆಸರು ಮತ್ತು ಇಮೇಲ್ ಅಡ್ರೆಸ್ ಕಲೆ ಹಾಕಿದ್ದೇನಷ್ಟೆ. ಗ್ರಾಹಕರು ಹೆಸರು ಹಾಕಿ ಅವರ ನಂಬರ್ ಪಡೆಯುವಂತಹ ವೆಬ್ಸೈಟ್ ನಿರ್ಮಿಸುವಲ್ಲಿ ನಾನು ನಿರತನಾಗಿದ್ದೆ ಎಂದು ಆತ ಹೇಳಿದ್ದಾನೆ. ಆದರೆ ನನಗೆ ಬೇರೆ ಟೆಲಿಕಾಂ ಕಂಪೆನಿಗಳ ಮಾಹಿತಿಗಳು ಸಿಕ್ಕಿಲ್ಲ ಎಂದು ಒಪ್ಪಿಕೊಂಡಿದ್ದಾನೆ.












Click it and Unblock the Notifications