ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ

|
Google Oneindia Kannada News

ನವದೆಹಲಿ, ನವೆಂಬರ್ 1: ಈ ದಿನವೇ ಚುನಾವಣೆ ನಡೆದರೆ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯು 29 ಲೋಕಸಭಾ ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿವೆ ಎಂದು ಎಬಿಪಿ ನ್ಯೂಸ್ ಚಾನಲ್ ನ ದೇಶ್ ಕಾ ಮೂಡ್ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ರಾಜಸ್ತಾನದಲ್ಲಿ ಬಿಜೆಪಿ 17 ಲೋಕಸಭೆ ಸ್ಥಾನಗಳನ್ನು ಹಾಗೂ ಕಾಂಗ್ರೆಸ್ 8ರಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಇನ್ನು ದೇಶದಪೂರ್ವ ಭಾಗದ ಪಶ್ಚಿಮ ಬಂಗಾಲದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರವಿದ್ದು, ತೃಣಮೂಲ ಕಾಂಗ್ರೆಸ್ 32, ಬಿಜೆಪಿ 9 ಹಾಗೂ ಕಾಂಗ್ರೆಸ್ 1 ಸ್ಥಾನ ಗಳಿಸಬಹುದು.

BJP

ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರಗಳಿದ್ದು, ಬಿಜೆಪಿಯು 12ರಲ್ಲಿ, ಬಿಜೆಡಿ 6 ಹಾಗೂ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯ ಗಳಿಸಬಹುದು. ಇನ್ನು ದಕ್ಷಿಣ ಭಾರತದಲ್ಲಿ ಒಟ್ಟಾರೆ 129 ಸ್ಥಾನಗಳ ಪೈಕಿ ಎನ್ ಡಿಎ ಮಿತ್ರ ಪಕ್ಷಗಳಿಗೆ 20, ಯುಪಿಎ ಮಿತ್ರ ಪಕ್ಷಗಳಿಗೆ 34, ಇತರರು 75 ಸ್ಥಾನಗಳನ್ನು ಜಯ ಗಳಿಸಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಲ್ಲ ಕಿಮ್ಮತ್ತುಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಲ್ಲ ಕಿಮ್ಮತ್ತು

ಇನ್ನೇನು ಲೋಕಸಭೆ ಚುನಾವಣೆಗೆ ಆರು ತಿಂಗಳಿದ್ದು, ಎಬಿಪಿ ನ್ಯೂಸ್ ಸಮೀಕ್ಷೆ ಮಹತ್ವದ್ದಾಗಿದೆ.

English summary
The ruling BJP is predicted to win 22 seats in Congress likely to bag 7 seats out of 29 seats in Madhya Pradesh if Lok Sabha elections were held today, as per DeshKaMood survey carried by ABP news channel. In another BJP ruled state, 17 seats pegged for the BJP and Congress may get 8 in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X