ಎಬಿಪಿ ಸಮೀಕ್ಷೆ: ಮೋದಿ ನೇತೃತ್ವದ ಎನ್ಡಿಎಗೆ ಸರಳ ಬಹುಮತ
ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನಲೆಯಲ್ಲಿ ಎಬಿಪಿ ಸಿಎಸ್ ಡಿಎಸ್ ಸಂಸ್ಥೆ ಭಾರತದ ವಿವಿಧೆಡೆ ನಡೆಸಿದ ಸಮೀಕ್ಷೆಗಳ ಸಮಗ್ರ ವರದಿ ಇಲ್ಲಿದೆ. ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎಗೆ ಸರಳ ಬಹುಮತ ಲಭಿಸಲಿದೆ ಎಂದು ವರದಿ ಬಂದಿದೆ.
ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ ಬಾರಿಸಲಿದ್ದು, ಉಳಿದೆಡೆಗಳಲ್ಲಿ ಎನ್ಡಿಎ ಜಯ ದಾಖಲಿಸಲಿದ್ದು, ಕಳೆದ ಚುನಾವಣೆಗಿಂತ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಮ್ಯಾಜಿಕ್ ನಂಬರ್ 272 ದಾಟಬಹುದು ಎಂಬ ನಿರೀಕ್ಷೆಯಿದೆ.

543 ಲೋಕಸಭಾ ಸ್ಥಾನಗಳ ಪೈಕಿ ಭಾರತದಲ್ಲಿರುವ 274 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 274 ಸ್ಥಾನಗಳು ಸಿಕ್ಕರೆ, ಯುಪಿಎಗೆ 164, ಇತರೆ 105 ಸ್ಥಾನಗಳು ಸಿಗಲಿವೆ.
2018ರಲ್ಲಿ ಮತ ಗಳಿಕೆ ಎನ್ಡಿಎ ಶೇ 37, ಯುಪಿಎ ಶೇ31, ಇತರೆ ಶೇ 32
2014ರಲ್ಲಿ ಗಳಿಸಿದ್ದು ಎನ್ಡಿಎ ಶೇ36, ಯುಪಿಎ ಶೇ25, ಇತರೆ ಶೇ 39
2014ರ ಲೋಕಸಭೆ ಚುನಾವಣೆಯಲ್ಲಿ ಭಾರತದಲ್ಲಿ ಎನ್ಡಿಎಗೆ 323, ಯುಪಿಎಗೆ 60 ಹಾಗೂ ಇತರೆ 153 ಸ್ಥಾನಗಳು ಸಿಕ್ಕಿತ್ತು.
ಜನಪ್ರಿಯತೆ ಕುಗ್ಗಿದರೂ ಭಾರತ ಇನ್ನೂ ಬಿಜೆಪಿಯ ಬಿಗಿ ಹಿಡಿತದಲ್ಲಿ!
ದಕ್ಷಿಣ ಭಾರತ: 132 ಸ್ಥಾನ
* ಎನ್ ಡಿಎ : 18-22
* ಯುಪಿಎ : 67-75
* ಇತರೆ : 38-44
ಉತ್ತರ ಭಾರತ: 151 ಸ್ಥಾನ
* ಎನ್ ಡಿಎ : 86-94
* ಯುಪಿಎ : 23-27
* ಇತರೆ : 33-39
ಪೂರ್ವ ಭಾರತ : 142
* ಎನ್ ಡಿಎ : 86-94
* ಯುಪಿಎ : 22-26
* ಇತರೆ : 26-30
ಪಶ್ಚಿಮ -ಕೇಂದ್ರ ಭಾರತ: 118
* ಎನ್ ಡಿಎ : 70-78
* ಯುಪಿಎ : 41-47
* ಇತರೆ : 0-2












Click it and Unblock the Notifications