{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/india/aarushi-talwar-hemraj-double-murder-timeline-what-happened-since-2008-079605.html" }, "headline": "ಆರುಷಿ-ಹೇಮರಾಜ್ ಡಬ್ಬಲ್ ಮರ್ಡರ್ ಟೈಮ್ ಲೈನ್", "url":"http://kannada.oneindia.com/news/india/aarushi-talwar-hemraj-double-murder-timeline-what-happened-since-2008-079605.html", "image": { "@type": "ImageObject", "url": "https://kannada.oneindia.com/img/1200x60x675/2013/11/25-aarushi-talwar-case-600.jpg", "width": "1200", "height":"675" }, "thumbnailUrl":"https://kannada.oneindia.com/img/128x50/2013/11/25-aarushi-talwar-case-600.jpg", "datePublished": "2013-11-25T17:49:26+05:30", "dateModified": "2017-10-12T20:28:54+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"India", "description": "Who killed Aarushi and Hemraj? In a landmark judgement today at the special CBI court in Ghaziabad, the Talwar couple have been found guilty under 302, 201, 34 and 203 (IPC). Here is what happened since 2008 when 14-year-old Aarushi and their domestic help Hemraj were found killed inside Jalvayu Vihar.", "keywords": "Aarushi Talwar Murder Case Timeline: What happened since 2008, ಆರುಷಿ-ಹೇಮರಾಜ್ ಡಬ್ಬಲ್ ಮರ್ಡರ್ ಟೈಮ್ ಲೈನ್", "articleBody":"ನವದೆಹಲಿ, ನ.25: ಆರುಷಿ ತಲ್ವಾರ್ - ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರು ಅಪರಾಧಿಗಳು ಎಂದು ಗಾಜಿಯಾಬಾದ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆದರೆ, 2008 ರಲ್ಲಿ ನಡೆದ ಈ ಕೊಲೆ ಕೇಸ್ ಬಗ್ಗೆ ಇಡೀ ದೇಶದಲ್ಲಿ ಭಾರಿ ಚರ್ಚೆ ನಡೆದಿತ್ತು. ಮರ್ಯಾದಾ ಹತ್ಯೆ, ಪೋಷಕರೇ ಪಾತಕಿಗಳು, ಕೊಲೆಯ ಕಾರಣ, ಸಾಕ್ಷಿ ನಾಶ, ತನಿಖಾ ತಂಡದ ವಿಳಂಬ, ಮಾಧ್ಯಮಗಳಲ್ಲಿ ಜೀವಂತವಾಗಿದ್ದ ಕೇಸ್ ಬಗ್ಗೆ ತೀರ್ಪು ನೀಡಲು ಇಷ್ಟು ವರ್ಷ ವಿಳಂಬವಾಗಿದ್ದು ಏಕೆ ಎಂಬ ಅನೇಕ ಪ್ರಶ್ನೆಗಳು ಹಾಗೇ ಉಳಿದಿದೆ.2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದರು. ನಂತರ ಯಾವುದೇ ಸಾಕ್ಷಿ ಸಿಗದಂತೆ ಸ್ವಚ್ಛಗೊಳಿಸಿದ್ದರು. ಮೇ 16ರಂದು ಆರುಷಿ ಮೃತದೇಹ ಮಹಡಿಯ ಬೆಡ್ ರೂಮಿನಲ್ಲಿ ಪತ್ತೆಯಾಗಿತ್ತು. ಮರುದಿನ ಹೇಮರಾಜ್ ಶವ ಮನೆ ಟೆರೇಸ್ ಮೇಲೆ ಸಿಕ್ಕಿತ್ತು. 2008 ರಿಂದ 2013ರ ತನಕ ಘಟನಾವಳಿಗಳ ಟೈಮ್ ಲೈನ್ ಇಲ್ಲಿದೆ...ಮೇ 16, 2008: ನೋಯ್ಡಾದ ಜಲವಿಹಾರ ಮನೆಯ ಬೆಡ್ ರೂಮಲ್ಲಿ ಡಾ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಪುತ್ರಿ ಆರುಷಿ ತಲ್ವಾರ್ ಮೃತ ದೇಹ ಪತ್ತೆ. ಆರುಷಿಯ ಕುತ್ತಿಗೆ ಕುಯ್ದು ಕೊಲೆ ಮಾಡಲಾಗಿತ್ತು. ಮನೆಗೆಲಸದಾಳು ನೇಪಾಳಿ ಹೇಮರಾಜ್ ವಿರುದ್ಧ ತಕ್ಷಣಕ್ಕೆ ಶಂಕೆ.ಮೇ 17: ತಲ್ವಾರ್ ಮನೆ ಟೆರೇಸ್ನಲ್ಲಿ ಮನೆಗೆಲಸಗಾರ ಹೇಮರಾಜ್ ಮೃತದೇಹ ಪತ್ತೆಮೇ 18: ಪೊಲೀಸರ ಪ್ರಕಾರ ಆಸ್ಪತ್ರೆಯಲ್ಲಿ ವೈದ್ಯರು ಆಪರೇಶನ್ ಮಾಡುವಂತೆ(surgical precision) ಎರಡೂ ಕೊಲೆಗಳ ನ್ನು ತುಂಬಾ ನಾಜೂಕಾಗಿ ಕ್ರಮಬದ್ಧವಾಗಿ ಮಾಡಲಾಗಿದ್ದು, ಪರಿಚಿತರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು.ಮೇ 23: ಜೋಡಿ ಕೊಲೆ ಪ್ರಕರಣದಲ್ಲಿ ಆರುಷಿ ತಂದೆ ಡಾ. ರಾಜೇಶ್ ತಲ್ವಾರ್ ಬಂಧನಮೇ 31: ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ. ಸಿಬಿಐನಿಂದ ಕೊಲೆ ಪ್ರಕರಣದ ತನಿಖೆ ಆರಂಭ.ಜೂನ್ 13: ರಾಜೇಶ್ ತಲ್ವಾರ್ ಕ್ಲಿನಿಕ್ನ ಕಾಂಪೌಂಡರ್ ಕೃಷ್ಣ ಎಂಬ ವ್ಯಕ್ತಿ ಬಂಧನ.ಜೂನ್ 23: ತಲ್ವಾರ್ ಕುಟುಂಬಕ್ಕೆ ಪರಿಚಿಯವಿದ್ದ ವೈದ್ಯರೊಬ್ಬರ ನೌಕರ ರಾಜ್ ಕುಮಾರ್ ಹಾಗೂ ಪಕ್ಕದ ಮನೆ ಕೆಲಸಗಾರ ವಿಜಯ್ ಮಂಡಲ್ ಎಂಬುವರ ಬಂಧನ, ವಿಚರಣೆ.ಜುಲೈ 12: ಗಾಜಿಯಾಬಾದ್ ಸಿಬಿಐ ಕೋರ್ಟ್ ನಿಂದ ಡಾ .ರಾಜೇಶ್ ತಲ್ವಾರ್ ಗೆ ಜಾಮೀನು. ಸಿಬಿಐ ತಂಡ ಸಾಕ್ಷ್ಯಾಧಾರ ಒದಗಿಸಲು ವಿಫಲ.ಜ. 5,2010 : ತಲ್ವಾರ್ ದಂಪತಿ ಮೇಲೆ ಸುಳ್ಳುಪತ್ತೆ ಪರೀಕ್ಷೆ(narco test) ನಡೆಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸಿಬಿಐ. ತಂಡ.ಡಿ. 29: ರಾಜೇಶ್ ತಲ್ವಾರ್ ಮುಖ್ಯ ಆರೋಪಿಯಾದರೂ ಸರಿಯಾದ ಸಾಕ್ಷ್ಯಾಧಾರ ಇಲ್ಲವೆಂದು ಸಿಬಿಐನಿಂದ closure report(ಎಫ್ಐಆರ್ ಮುಕ್ತಾಯ ವರದಿ)ಜ.25, 2011: ಗಾಜಿಯಾಬಾದ್ ನ್ಯಾಯಾಲಯದ ಆವರಣದಲ್ಲಿ ರಾಜೇಶ್ ತಲ್ವಾರ್ ಮೇಲೆ ಹಲ್ಲೆ.ಫೆ. 9: ಸಿಬಿಐನ ಕ್ಲೋಷರ್ ರಿಪೋರ್ಟ್ ಅನ್ನ ತಿರಸ್ಕರಿಸಿತು ಗಾಜಿಯಾಬಾದ್ ನ್ಯಾಯಾಲಯ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ವಿಚಾರಣೆ ನಡೆಸಲು ಆದೇಶ... ಸಾಕ್ಷಿಗಳನ್ನ ನಾಶಪಡಿಸಿದ ಆರೋಪವೂ ಅವರ ಮೇಲೆ ಬಂತು. ನ್ಯಾಯಾಲಯದಲ್ಲಿ ಹಾಜರಾಗದ ಕಾರಣ ತಲ್ವಾರ್ ದಂಪತಿ ವಿರುದ್ಧ ವಾರೆಂಟ್ ನೀಡಿದ ಕೋರ್ಟ್ಮಾ.14, 2012: ರಾಜೇಶ್ ತಲ್ವಾರ್ ಜಾಮೀನು ರದ್ದುಗೊಳಿಸುವಂತೆ ಸಿಬಿಐ ಮನವಿಏ.30: ಆರುಷಿ ತಾಯಿ ನೂಪುರ್ ತಲ್ವಾರ್ ಬಂಧನಮೇ 3: ಸೆಷೆನ್ಸ್ ಕೋರ್ಟಲ್ಲಿ ನೂಪುರ್ ತಲ್ವಾರ್ ಅರ್ಜಿ ತಿರಸ್ಕಾರಮೇ 25: ಕೊಲೆ, ಸಾಕ್ಷಿ ನಾಶ ಮತ್ತು ಸಂಚು ಮಾಡಿದ ಆರೋಪ ತಲ್ವಾರ್ ದಂಪತಿಗಳ ವಿರುದ್ಧ...ಸೆ.25: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನೂಪುರ್ ತಲ್ವಾರ್ಗೆ ಜಾಮೀನುಏಪ್ರಿಲ್, 2013: ಆರುಷಿ ಮತ್ತು ಹೇಮರಾಜ್ ಇಬ್ಬರನ್ನೂ ಕೊಲೆ ಮಾಡಿದ್ದ ತಲ್ವಾರ್ ದಂಪತಿಯೇ, ಆರುಷಿ ಮತ್ತು ಹೇಮರಾಜ್ ಇಬ್ಬರೂ ಅಶ್ಲೀಲ ಭಂಗಿಯಲ್ಲಿ ಪತ್ತೆಯಾಗಿದ್ದರು ಎಂದು ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿ ಹೇಳಿಕೆ.ಮೇ 3: ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಸಾಕ್ಷಿಗಳಾಗಿ 14 ಜನರನ್ನ ಕರೆಸುವಂತೆ ತಲ್ವಾರ್ ಪರ ವಕೀಲರ ಮನವಿ. ಇದಕ್ಕೆ ಸಿಬಿಐ ವಿರೋಧ...ಮೇ 6: 14 ಜನರ ಸಾಕ್ಷಿಗಳ ಹಾಜರಾತಿಗೆ ತಲ್ವಾರ್ ಪರ ವಕೀಲರು ಮಾಡಿಕೊಂಡ ಮನವಿಯ ನ್ಯಾಯಾಲಯದಲ್ಲಿ ತಿರಸ್ಕಾರ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಹೇಳಿಕೆಗಳನ್ನ ದಾಖಲಿಸುವಂತೆ ಟ್ರಯಲ್ ಕೋರ್ಟ್ ಆದೇಶ.ಅ.18: ತಲ್ವಾರ್ ದಂಪತಿ ತನಿಖೆಯ ದಿಕ್ಕುತಪ್ಪಿಸಿದರು ಎಂದು ಸಿಬಿಐ ಕೊನೆ ಆರೋಪ.ನ.12: ನ.25ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯನ.25, 2013: ಆರುಷಿ ಮತ್ತು ಹೇಮರಾಜ್ ಜೋಡಿ ಕೊಲೆ ಮಾಡಿದ್ದು ತಲ್ವಾರ್ ದಂಪತಿಯೇ ಎಂದು ಗಾಜಿಯಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿ-ಹೇಮರಾಜ್ ಡಬ್ಬಲ್ ಮರ್ಡರ್ ಟೈಮ್ ಲೈನ್

By Mahesh
|
Google Oneindia Kannada News

ನವದೆಹಲಿ, ನ.25: ಆರುಷಿ ತಲ್ವಾರ್ - ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರು ಅಪರಾಧಿಗಳು ಎಂದು ಗಾಜಿಯಾಬಾದ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಆದರೆ, 2008 ರಲ್ಲಿ ನಡೆದ ಈ ಕೊಲೆ ಕೇಸ್ ಬಗ್ಗೆ ಇಡೀ ದೇಶದಲ್ಲಿ ಭಾರಿ ಚರ್ಚೆ ನಡೆದಿತ್ತು. ಮರ್ಯಾದಾ ಹತ್ಯೆ, ಪೋಷಕರೇ ಪಾತಕಿಗಳು, ಕೊಲೆಯ ಕಾರಣ, ಸಾಕ್ಷಿ ನಾಶ, ತನಿಖಾ ತಂಡದ ವಿಳಂಬ, ಮಾಧ್ಯಮಗಳಲ್ಲಿ ಜೀವಂತವಾಗಿದ್ದ ಕೇಸ್ ಬಗ್ಗೆ ತೀರ್ಪು ನೀಡಲು ಇಷ್ಟು ವರ್ಷ ವಿಳಂಬವಾಗಿದ್ದು ಏಕೆ ಎಂಬ ಅನೇಕ ಪ್ರಶ್ನೆಗಳು ಹಾಗೇ ಉಳಿದಿದೆ.

2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದರು. ನಂತರ ಯಾವುದೇ ಸಾಕ್ಷಿ ಸಿಗದಂತೆ ಸ್ವಚ್ಛಗೊಳಿಸಿದ್ದರು. ಮೇ 16ರಂದು ಆರುಷಿ ಮೃತದೇಹ ಮಹಡಿಯ ಬೆಡ್ ರೂಮಿನಲ್ಲಿ ಪತ್ತೆಯಾಗಿತ್ತು. ಮರುದಿನ ಹೇಮರಾಜ್ ಶವ ಮನೆ ಟೆರೇಸ್ ಮೇಲೆ ಸಿಕ್ಕಿತ್ತು. 2008 ರಿಂದ 2013ರ ತನಕ ಘಟನಾವಳಿಗಳ ಟೈಮ್ ಲೈನ್ ಇಲ್ಲಿದೆ...

Aarushi Talwar Murder Case Timeline: What happened since 2008

ಮೇ 16, 2008: ನೋಯ್ಡಾದ ಜಲವಿಹಾರ ಮನೆಯ ಬೆಡ್ ರೂಮಲ್ಲಿ ಡಾ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಪುತ್ರಿ ಆರುಷಿ ತಲ್ವಾರ್ ಮೃತ ದೇಹ ಪತ್ತೆ. ಆರುಷಿಯ ಕುತ್ತಿಗೆ ಕುಯ್ದು ಕೊಲೆ ಮಾಡಲಾಗಿತ್ತು. ಮನೆಗೆಲಸದಾಳು ನೇಪಾಳಿ ಹೇಮರಾಜ್ ವಿರುದ್ಧ ತಕ್ಷಣಕ್ಕೆ ಶಂಕೆ.

ಮೇ 17: ತಲ್ವಾರ್ ಮನೆ ಟೆರೇಸ್'ನಲ್ಲಿ ಮನೆಗೆಲಸಗಾರ ಹೇಮರಾಜ್ ಮೃತದೇಹ ಪತ್ತೆ

ಮೇ 18: ಪೊಲೀಸರ ಪ್ರಕಾರ ಆಸ್ಪತ್ರೆಯಲ್ಲಿ ವೈದ್ಯರು ಆಪರೇಶನ್ ಮಾಡುವಂತೆ(surgical precision) ಎರಡೂ ಕೊಲೆಗಳ ನ್ನು ತುಂಬಾ ನಾಜೂಕಾಗಿ ಕ್ರಮಬದ್ಧವಾಗಿ ಮಾಡಲಾಗಿದ್ದು, ಪರಿಚಿತರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು.

ಮೇ 23: ಜೋಡಿ ಕೊಲೆ ಪ್ರಕರಣದಲ್ಲಿ ಆರುಷಿ ತಂದೆ ಡಾ. ರಾಜೇಶ್ ತಲ್ವಾರ್ ಬಂಧನ

ಮೇ 31: ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ. ಸಿಬಿಐನಿಂದ ಕೊಲೆ ಪ್ರಕರಣದ ತನಿಖೆ ಆರಂಭ.

ಜೂನ್ 13: ರಾಜೇಶ್ ತಲ್ವಾರ್ ಕ್ಲಿನಿಕ್'ನ ಕಾಂಪೌಂಡರ್ ಕೃಷ್ಣ ಎಂಬ ವ್ಯಕ್ತಿ ಬಂಧನ.

ಜೂನ್ 23: ತಲ್ವಾರ್ ಕುಟುಂಬಕ್ಕೆ ಪರಿಚಿಯವಿದ್ದ ವೈದ್ಯರೊಬ್ಬರ ನೌಕರ ರಾಜ್ ಕುಮಾರ್ ಹಾಗೂ ಪಕ್ಕದ ಮನೆ ಕೆಲಸಗಾರ ವಿಜಯ್ ಮಂಡಲ್ ಎಂಬುವರ ಬಂಧನ, ವಿಚರಣೆ.

ಜುಲೈ 12: ಗಾಜಿಯಾಬಾದ್ ಸಿಬಿಐ ಕೋರ್ಟ್ ನಿಂದ ಡಾ .ರಾಜೇಶ್ ತಲ್ವಾರ್ ಗೆ ಜಾಮೀನು. ಸಿಬಿಐ ತಂಡ ಸಾಕ್ಷ್ಯಾಧಾರ ಒದಗಿಸಲು ವಿಫಲ.

Aarushi Talwar Murder Case Timeline: What happened since 2008
ಜ. 5,2010 : ತಲ್ವಾರ್ ದಂಪತಿ ಮೇಲೆ ಸುಳ್ಳುಪತ್ತೆ ಪರೀಕ್ಷೆ(narco test) ನಡೆಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸಿಬಿಐ. ತಂಡ.

ಡಿ. 29: ರಾಜೇಶ್ ತಲ್ವಾರ್ ಮುಖ್ಯ ಆರೋಪಿಯಾದರೂ ಸರಿಯಾದ ಸಾಕ್ಷ್ಯಾಧಾರ ಇಲ್ಲವೆಂದು ಸಿಬಿಐನಿಂದ closure report(ಎಫ್ಐಆರ್ ಮುಕ್ತಾಯ ವರದಿ)

ಜ.25, 2011: ಗಾಜಿಯಾಬಾದ್ ನ್ಯಾಯಾಲಯದ ಆವರಣದಲ್ಲಿ ರಾಜೇಶ್ ತಲ್ವಾರ್ ಮೇಲೆ ಹಲ್ಲೆ.

ಫೆ. 9: ಸಿಬಿಐನ ಕ್ಲೋಷರ್ ರಿಪೋರ್ಟ್ ಅನ್ನ ತಿರಸ್ಕರಿಸಿತು ಗಾಜಿಯಾಬಾದ್ ನ್ಯಾಯಾಲಯ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ವಿಚಾರಣೆ ನಡೆಸಲು ಆದೇಶ... ಸಾಕ್ಷಿಗಳನ್ನ ನಾಶಪಡಿಸಿದ ಆರೋಪವೂ ಅವರ ಮೇಲೆ ಬಂತು. ನ್ಯಾಯಾಲಯದಲ್ಲಿ ಹಾಜರಾಗದ ಕಾರಣ ತಲ್ವಾರ್ ದಂಪತಿ ವಿರುದ್ಧ ವಾರೆಂಟ್ ನೀಡಿದ ಕೋರ್ಟ್

ಮಾ.14, 2012: ರಾಜೇಶ್ ತಲ್ವಾರ್ ಜಾಮೀನು ರದ್ದುಗೊಳಿಸುವಂತೆ ಸಿಬಿಐ ಮನವಿ
ಏ.30: ಆರುಷಿ ತಾಯಿ ನೂಪುರ್ ತಲ್ವಾರ್ ಬಂಧನ

ಮೇ 3: ಸೆಷೆನ್ಸ್ ಕೋರ್ಟಲ್ಲಿ ನೂಪುರ್ ತಲ್ವಾರ್ ಅರ್ಜಿ ತಿರಸ್ಕಾರ

ಮೇ 25: ಕೊಲೆ, ಸಾಕ್ಷಿ ನಾಶ ಮತ್ತು ಸಂಚು ಮಾಡಿದ ಆರೋಪ ತಲ್ವಾರ್ ದಂಪತಿಗಳ ವಿರುದ್ಧ...

ಸೆ.25: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನೂಪುರ್ ತಲ್ವಾರ್'ಗೆ ಜಾಮೀನು

ಏಪ್ರಿಲ್, 2013: ಆರುಷಿ ಮತ್ತು ಹೇಮರಾಜ್ ಇಬ್ಬರನ್ನೂ ಕೊಲೆ ಮಾಡಿದ್ದ ತಲ್ವಾರ್ ದಂಪತಿಯೇ, ಆರುಷಿ ಮತ್ತು ಹೇಮರಾಜ್ ಇಬ್ಬರೂ ಅಶ್ಲೀಲ ಭಂಗಿಯಲ್ಲಿ ಪತ್ತೆಯಾಗಿದ್ದರು ಎಂದು ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿ ಹೇಳಿಕೆ.

ಮೇ 3: ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಸಾಕ್ಷಿಗಳಾಗಿ 14 ಜನರನ್ನ ಕರೆಸುವಂತೆ ತಲ್ವಾರ್ ಪರ ವಕೀಲರ ಮನವಿ. ಇದಕ್ಕೆ ಸಿಬಿಐ ವಿರೋಧ...

ಮೇ 6: 14 ಜನರ ಸಾಕ್ಷಿಗಳ ಹಾಜರಾತಿಗೆ ತಲ್ವಾರ್ ಪರ ವಕೀಲರು ಮಾಡಿಕೊಂಡ ಮನವಿಯ ನ್ಯಾಯಾಲಯದಲ್ಲಿ ತಿರಸ್ಕಾರ. ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಹೇಳಿಕೆಗಳನ್ನ ದಾಖಲಿಸುವಂತೆ ಟ್ರಯಲ್ ಕೋರ್ಟ್ ಆದೇಶ.

ಅ.18: ತಲ್ವಾರ್ ದಂಪತಿ ತನಿಖೆಯ ದಿಕ್ಕುತಪ್ಪಿಸಿದರು ಎಂದು ಸಿಬಿಐ ಕೊನೆ ಆರೋಪ.

ನ.12: ನ.25ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ನ.25, 2013: ಆರುಷಿ ಮತ್ತು ಹೇಮರಾಜ್ ಜೋಡಿ ಕೊಲೆ ಮಾಡಿದ್ದು ತಲ್ವಾರ್ ದಂಪತಿಯೇ ಎಂದು ಗಾಜಿಯಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು.

English summary
Who killed Aarushi and Hemraj? In a landmark judgement today at the special CBI court in Ghaziabad, the Talwar couple have been found guilty under 302, 201, 34 and 203 (IPC). Here is what happened since 2008 when 14-year-old Aarushi and their domestic help Hemraj were found killed inside Jalvayu Vihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X