ಆರುಷಿ ಹತ್ಯೆ: ತಲ್ವಾರ್ ದಂಪತಿ ಖುಲಾಸೆ ಪ್ರಶ್ನಿಸಿದ ಸಿಬಿಐ

ನವದೆಹಲಿ, ಆಗಸ್ಟ್ 10: ಆರುಷಿ ತಲ್ವಾರ್ - ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರನ್ನು ಖುಲಾಸೆಗೊಳಿಸಿರುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸಿಬಿಐ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ನರಸಿಂಹ್ ಅವರ ಅಭಿಪ್ರಾಯದಂತೆ ಸಿಬಿಐ, ಅರ್ಜಿ ಸಲ್ಲಿಸಿದ್ದು, ಮರು ವಿಚಾರಣೆಗೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ.

Aarushi murder case: SC admits CBI appeal against acquittal of Talwar couple

2008ರಲ್ಲಿ 14 ವರ್ಷದ ಮಗಳು ಆರುಷಿ ತಲ್ವಾರ್ ಹಾಗೂ ಮನೆಗೆಲಸದವ ಹೇಮರಾಜ್ ಹತ್ಯೆ ಮಾಡಿ ತಪ್ಪಿತಸ್ಥರಾಗಿರುವ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರಿಗೆ ಗಾಜಿಯಾಬಾದ್ ವಿಶೇಷ ನ್ಯಾಯಾಲಯದ ಜಸ್ಟೀಸ್ ಎಸ್ ಲಾಲ್ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಐಪಿಸಿ ಸೆಕ್ಷನ್ 302 ಅನ್ವಯ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ, 5 ಸೆಕ್ಷನ್ 203 ಪ್ರಕಾರ ವರ್ಷ ಶಿಕ್ಷೆ; ಸೆಕ್ಷನ್ 201 ಪ್ರಕಾರ ರಾಜೇಶ್ ಗೆ 1 ವರ್ಷ ಶಿಕ್ಷೆ ಘೋಷಿಸಲಾಗಿತ್ತು.

ತಮ್ಮ ಪುತ್ರಿ ಮನೆ ಕೆಲಸಗಾರ ಹೇಮರಾಜ್ ಜತೆ ಸಂಬಂಧ ಹೊಂದಿದ್ದನ್ನು ಕಂಡ ಆರುಷಿ ತಲ್ವಾರ್ ಪೋಷಕರು, ಆಕ್ರೋಶದಿಂದ ಇಬ್ಬರನ್ನೂ ಹತ್ಯೆ ಮಾಡಿದ್ದರೆಂದು ಸಿಬಿಐ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿತ್ತು. 2013ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ರಾಜೇಶ್ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಆದರೆ, ಸಿಬಿಐ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಕೋರ್ಟಿನಲ್ಲಿ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಪ್ರಶ್ನಿಸಿದ್ದರು. ಇಬ್ಬರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ಜೊತೆಗೆ ಆರುಷಿಯೊಂದಿಗೆ ಹತ್ಯೆಗೀಡಾಗಿದ್ದ ಮನೆ ಕೆಲಸಗಾರ ಹೇಮರಾಜ್ ಪತ್ನಿ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಪರಿಗಣಿಸುವಂತೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+