ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್

By Srinath
|
Google Oneindia Kannada News

ಅಹಮದಾಬಾದ್, ಮಾರ್ಚ್ 11: ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖತಃ ಭೇಟಿಯಾಗಲು ಗುಜರಾತಿಗೆ ಹೋಗಿದ್ದರಲ್ಲ. ಅದರ ಪ್ರಭಾವ/ ಪರಿಣಾಮ ಗೋಚರವಾಗಿದೆ. ಆದರೆ ಅದು ಅವರಿಗೇ ಮುಳುವಾಗಿದೆ.

ಕಳೆದ ವಾರ ನಾಲ್ಕು ದಿನಗಳ ಕಾಲ ಗುಜರಾತಿನಲ್ಲಿ ಅಡ್ಡಾಡಿದ ಅರವಿಂದ್ ಕೇಜ್ರಿವಾಲಾ ಭಾರಿ ಯಶಸ್ಸು ಸಾಧಿಸಿದರು ಎಂದು AAP ಬೆಂಬಲಿಗರು ಹೇಳಿಕೊಂಡಿದ್ದರೆ ಅವರ ಟೀಕಾಕಾರರು ಅದೊಂದು ದೊಡ್ಡ ಫ್ಲಾಪ್ ಷೋ ಎಂದು ಜರಿದಿದ್ದಾರೆ.

ಇನ್ನು, ಟ್ವಿಟ್ಟರ್ ಮೂಲಕ ನಡೆದಿರುವ ಸಮೀಕ್ಷೆಯ ಫಲಿತಾಂಶ ಗುಜರಾತಿನಲ್ಲಿ ಅರವಿಂದ್ ಕೇಜ್ರಿವಾಲಾ ನಡೆಸಿದ ರೋಡ್ ಷೋಗಳು ಅವರ ಜನಪ್ರಿಯತೆ ಧಕ್ಕೆ ತಂದಿವೆ ಅನ್ನುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿರುವ ಬುದ್ಧಿವಂತ ಜನರು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅರವಿಂದ್ ಕೇಜ್ರಿವಾಲಾ ನಡೆಸಿದ ರೋಡ್ ಷೋ ಬಗ್ಗೆ ಮೂಗುಮುರಿದಿದ್ದಾರೆ.

ಈ ಗ್ರಾಫ್ ನಲ್ಲಿ ಗುಜರಾತಿನಲ್ಲಿ ಅರವಿಂದ್ ಕೇಜ್ರಿವಾಲಾ ವಿರುದ್ಧ ಜನಪ್ರಿಯತೆ ಕುಗ್ಗುತ್ತಾ ಸಾಗಿರುವುದು (ಮೇ 5, 6 ಮತ್ತು 7ರ ನಂತರ) ಸ್ಪಷ್ಟವಾಗಿ ಗೋಚರಿಸುತ್ತಿದೆ.

ಶೇ. 84ರಷ್ಟು ಮಂದಿ ಕೇಜ್ರಿವಾಲಾ ಮತ್ತು ಆಪ್ ವಿರುದ್ಧ ಅಸಮಾಧಾನಗೊಂಡಿದ್ದರೆ ಶೇ. 17ರಷ್ಟು ಮಂದಿ ಮಾತ್ರ ಕೇಜ್ರಿವಾಲಾಗೆ ಜೈ ಅಂದಿದ್ದಾರೆ. ಕೇಜ್ರಿವಾಲಾರ ಗುಜರಾತ್ ಭೇಟಿಗೆ ಮುನ್ನ ಮತ್ತು ಆನಂತರ, ಸ್ಪಷ್ಟವಾಗಿ ಪರ ಮತ್ತು ವಿರೋಧ ಎಂದೇ ಬಿಂಬಿಸಿ, ಸಮೀಕ್ಷೆಯನ್ನು ನಡೆಸಲಾಗಿತ್ತು.

ಅರವಿಂದ್ ಕೇಜ್ರಿವಾಲಾ ಅವರು ಗುಜರಾತಿಗೆ ಭೇಟಿ ನೀಡುವುದಕ್ಕೂ ಮುನ್ನ ಮತ್ತು ಆನಂತರ ಜನಪ್ರಿಯತೆ ಅಳತೆ ಕುಸಿದಿರುವುದು ದಾಖಲಾಗಿದೆ.


Wright State University- Ohio Center of Excellence in Knowledge-enabled Computing (Kno.e.sis) ಸಂಸ್ಥೆಯ ಮುಖ್ಯಸ್ಥ ಪ್ರೊ. ಶ್ರೇಯಾಂಶ್ ಭಟ್ ಅವರು ಈ ಸಮೀಕ್ಷೆಯನ್ನು ನಡೆಸಿ, ವರದಿ ಬಹಿರಂಗ ಪಡಿಸಿದ್ದಾರೆ.
English summary
Aam Aadmi chief Arvind Kejriwal's visit to Gujarat yeilds negative popularity. Arvind Kejriwal concluded his four-day roadshow in Gujarat on Saturday, March 8. While AAP supporters claimed that it was a huge success, many of his critics asserted that it was nothing but a flop show. The survey result is a comparison between the two behaviours against and for Kejriwal in the state. It compared Kejriwal's popularity before and after his Gujarat visit. The data has been published by Shreyansh Bhatt, a researcher at the Ohio Center of Excellence in Knowledge-enabled Computing (Kno.e.sis).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X