ಸಿಬಿಎಸ್ಇ ಪರೀಕ್ಷೆ ಬರೆಯಲು ಆಧಾರ್ ಕಾರ್ಡ್ ಬೇಕೇ ಬೇಕು
ನವದೆಹಲಿ, ಅಕ್ಟೋಬರ್ 2: 2017-18ನೇ ಸಾಲಿನ 8ನೇ ತರಗತಿ ಮತ್ತು 11 ನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಸಿಬಿಎಸ್ಇ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.
ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ.

9 ಮತ್ತು 11ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳ ಹೆಸರನ್ನು ಅಗತ್ಯ ದಾಖಲೆಗಳೊಂದಿಗೆ ಸಿಬಿಎಸ್ಇ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಈಗಾಗಲೇ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು ಒಂದೊಮ್ಮೆ ಆಧಾರ್ ಇಲ್ಲದೇ ಇದ್ದಲ್ಲಿ ಆಧಾರ್ ಎನ್ರೋಲ್ಮೆಂಟ್ ಸಂಖ್ಯೆ ನೀಡುವಂತೆ ಸೂಚಿಸಲಾಗಿದೆ
ಇದೇ ಮೊದಲ ಬಾರಿಗೆ ಸಿಬಿಎಸ್ಇ ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.












Click it and Unblock the Notifications