ಆಧಾರ್ ಕಾರ್ಡ್: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಫಿಂಗರ್‌ಪ್ರಿಂಟ್, ಕಣ್ಣಿನ ಸ್ಕ್ಯಾನ್
ನವದೆಹಲಿ, ಜು.27: ''ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಫಿಂಗರ್‌ಪ್ರಿಂಟ್‌ಗಳು ಮತ್ತು ಕಣ್ಣಿನ ಸ್ಕ್ಯಾನ್ ಅಗತ್ಯವಿಲ್ಲ,'' ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಹೇಳಿದೆ.
ಹಾಗೆಯೇ '' ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್ ಪಡೆಯಬಹುದು,'' ಎಂದು ಯುಐಡಿಎಐ ತಿಳಿಸಿದೆ. ಆದರೆ, '' ಮಕ್ಕಳು ಐದು ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ನವೀಕರಣ ಕಡ್ಡಾಯ,'' ಎಂದು ಕೂಡಾ ಪ್ರಾಧಿಕಾರ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮಾಹಿತಿ ನೀಡಿದೆ. "ಆಧಾರ್‌ನಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲಿಸುವಾಗ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್‌ಗಳನ್ನು ಮಾಡಲಾಗುವುದಿಲ್ಲ. ಕೇವಲ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ. ಮಗುವು 5 ವರ್ಷವನ್ನು ತಲುಪಿದ ನಂತರ, ಬಯೋಮೆಟ್ರಿಕ್ಸ್ ಅನ್ನು ಕಡ್ಡಾಯವಾಗಿ ನವೀಕರಿಸಬೇಕಾಗಿದೆ," ಎಂದು ಉಲ್ಲೇಖಿಸಿದೆ.

ಒಂದು ಮಗು 5 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದು ಆದ್ದಲ್ಲಿ, ಪೋಷಕರು ಅಥವಾ ಪೋಷಕರಲ್ಲಿ ಒಬ್ಬರು ಮಗುವಿನ ಪರವಾಗಿ ದೃಢೀಕರಿಸಬೇಕು ಮತ್ತು ದಾಖಲಾತಿ ನಮೂನೆಯಲ್ಲಿ ಸಹಿ ಮಾಡುವ ಮೂಲಕ ಅಪ್ರಾಪ್ತ ವಯಸ್ಕರ ದಾಖಲಾತಿಗೆ ಒಪ್ಪಿಗೆ ನೀಡಬೇಕು ಎಂದು ಯುಐಡಿಎಐ ತಿಳಿಸಿದೆ.
ಇನ್ನು ಮಗುವಿನ ಹೆಸರಿನಲ್ಲಿ ಆಧಾರ್ ಮಾಡುವಾಗ, ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್, ಅಥವಾ ಮಗುವಿನ ಶಾಲೆಯ ಐಡಿ ಹಾಗೂ ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್ ಮಾತ್ರ ಬೇಕಾಗುತ್ತದೆ ಎಂದು ಕೂಡಾ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.
'' ಮಗು ಎನ್‌ಆರ್‌ಐ ಆಗಿದ್ದರೆ, ಮಗುವಿನ ಮಾನ್ಯ ಭಾರತೀಯ ಪಾಸ್‌ಪೋರ್ಟ್ ಪ್ರೂಫ್ ಆಫ್ ಐಡೆಂಟಿಟಿ (ಪಿಒಐ) ಎಂದು ಕಡ್ಡಾಯವಾಗಿದೆ. ಮಗು ಭಾರತೀಯ ನಿವಾಸಿಯಾಗಿದ್ದರೆ, ಜನನ ಪ್ರಮಾಣಪತ್ರದಂತಹ ಸಂಬಂಧದ ದಾಖಲೆಗಳ ಯಾವುದೇ ಮಾನ್ಯ ಪುರಾವೆ, ಜೊತೆಗೆ ಪೋಷಕರು ಅಥವಾ ಪೋಷಕರ ಆಧಾರ್ ಅನ್ನು ದಾಖಲಾತಿಗೆ ಬಳಸಬಹುದು,'' ಎಂದು ಹೇಳಿದೆ.
ಮಗುವಿಗೆ 5 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ, ಪೋಷಕರು ಅಥವಾ ಪಾಲಕರಲ್ಲಿ ಒಬ್ಬರು ದಾಖಲಾತಿ ನಮೂನೆಯಲ್ಲಿ ಸಹಿ ಮಾಡುವ ಮೂಲಕ ಅಪ್ರಾಪ್ತ ವಯಸ್ಕರ ದಾಖಲಾತಿಗೆ ಒಪ್ಪಿಗೆ ನೀಡಬೇಕು ಎಂದು ತಿಳಿಸಿದೆ.
#AadhaarChildEnrolment
— Aadhaar (@UIDAI) July 26, 2021
In #Aadhaar, fingerprints and iris scans are not captured while enrolling the children below 5 years of age, only a photograph is taken. Once the child attains the age of 5, biometrics need to be updated mandatorily. #AadhaarEnrolment #BiometricUpdate pic.twitter.com/Fn6mHSW1Ui
ಆಧಾರ್ ಯುಐಡಿಎಐ ಎಲ್ಲಾ ಭಾರತೀಯ ನಿವಾಸಿಗಳಿಗೆ ನೀಡಿದ 12-ಅಂಕಿಯ ಸಂಖ್ಯೆಯಾಗಿದೆ. ಇದನ್ನು ಪ್ರಮುಖ ಗುರುತಿನ ಪುರಾವೆಯಾಗಿ ಪರಿಗಣಿಸಲಾಗುತ್ತಿದೆ. ಈ ಕಾರ್ಡ್ ದಾಖಲಾತಿ ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿದೆ. ಈ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ.
(ಒನ್‌ಇಂಡಿಯಾ ಸುದ್ದಿ)
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications