• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೇಶ್ಯಾವೃತ್ತಿ ಕಾನೂನುಬದ್ಧವಾದರೆ ಕ್ರೈಂ ಇಳಿಕೆ?

By ತುರುವೇಕೆರೆ ಪ್ರಸಾದ್
|

ಜಗತ್ತಿನ ಅತ್ಯಂತ ಪ್ರಾಚೀನ ಕಸುಬಾದ ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕೇ? ಬೇಡವೇ? ಕಾನೂನಿನ ಚೌಕಟ್ಟಿಗೆ ಒಳಪಟ್ಟರೆ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ, ಮಾನವ ಕಳ್ಳಸಾಗಣೆ ಕಡಿಮೆಯಾಗುತ್ತದೆಯೆ? ಒಂದೊಂದು ದೇಶದಲ್ಲಿ ಒಂದೊಂದು ರೀತಿ ಕಾನೂನಿನಿದೆ. ವೇಶ್ಯಾವಾಟಿಕೆಗೆ ಕಾನೂನಿನ ರಕ್ಷಣೆ ಸಿಕ್ಕಿರುವ ರಾಷ್ಟ್ರಗಳಲ್ಲಿ ಕ್ರೈಂ ಇಳಿಮುಖವಾಗಿದೆಯೇ? ಎಂಬೆಲ್ಲಾ ವಿಷಯಗಳ ಮೇಲೆ ಅಂಕಿ ಅಂಶ ಸಮೇತ ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಲೇಖನ ಈಗಾಗಲೇ ನಿಲುಮೆ.ನೆಟ್ ನಲ್ಲಿ ಪ್ರಕಟವಾಗಿದ್ದು, ಸ್ನೇಹಸೇತುವಾಗಿ ಇಲ್ಲಿ ಪುನರ್ ಪ್ರಕಟಿಸಲಾಗುತ್ತಿದೆ-ಸಂಪಾದಕ

ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕು. ಇದರಿಂದ ಸ್ವಲ್ಪ ಮಟ್ಟಿಗೆ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಹಾಗೂ ಅತ್ಯಾಚಾರಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಪ್ರಪಂಚದ ಹಲವು ಕಡೆ ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನಗಳಲ್ಲಿ ಇದಕ್ಕೆ ಪೂರಕವಾದ ಅಂಕಿ ಅಂಶಗಳು ಸಿಕ್ಕಿವೆ.

ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ ಎನ್ ಬಿಇಎಲ್ ಅಧ್ಯಯನದ ಪ್ರಕಾರ ರೋಡ್ ದ್ವೀಪದಲ್ಲಿ 2003-2009ರ ಅವಧಿಯಲ್ಲಿ ವೇಶ್ಯಾ ವೃತ್ತಿಯನ್ನು ಕಾನೂನುಬದ್ಧಗೊಳಿಸಿದಾಗ ಶೇ.39 ರಷ್ಟು ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿದ್ದವು.

ಗೊನೇರಿಯಾ ಕಾಯಿಲೆಯ ಹರಡುವಿಕೆ ಪ್ರಮಾಣ ಶೇ.45ರಷ್ಟು ಕಡಿಮೆಯಾಗಿತ್ತು. ಬೈಲಾರ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳಾದ ಸ್ಕಾಟ್ ಕನ್ನಿಂಗ್ ಹ್ಯಾಮ್ ಮತ್ತು ಮಾನಿಷಾ ಶಾ ವೇಶ್ಯೆಯರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದೆ ತೆಗೆದ ಪರಿಣಾಮ ಹೆಂಗಸರ ಮೇಲಿನ ಅಪರಾಧ ಹಾಗೂ ದೌರ್ಜನ್ಯಗಳ ಸಂಖ್ಯೆ ಇಳಿಮುಖವಾಗಿತ್ತು ಎಂಬುದನ್ನು ಗುರುತಿಸಿದ್ದಾರೆ. [ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ : ಮಾತೆ ಮಹಾದೇವಿ]

ನಾರ್ತ್ ಈಸ್ಟರ್ನ್ ಸ್ಟೇಟ್ ಯೂನಿವಸಿಟಿಯ ಕಿರ್ಬಿ ಆರ್. ಕಂಡೀಫ್ ಅಮೇರಿಕದಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿದರೆ ಶೇ.25ರಷ್ಟು ಅಂದರೆ 25 ಸಾವಿರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದೆಂದು ಬಹಳ ಹಿಂದೆಯೇ ಸಲಹೆ ನೀಡಿದ್ದರು. ಕ್ವೀನ್ಸ್ ಲ್ಯಾಂಡಿನಲ್ಲಿ ಕಾನೂನುಬದ್ಧವಾಗಿ ನಡೆಸುತ್ತಿದ್ದ ವೇಶ್ಯಾಗೃಹಗಳನ್ನು ಮುಚ್ಚಿದಾಗ ಅಲ್ಲಿನ ಅತ್ಯಾಚಾರ ಪ್ರಕರಣಗಳ ಪ್ರಮಾಣ ಶೇ.149ಕ್ಕೆ ಏರಿತು ಎಂದು ಲಿಂಡಾ ರಿಚ್ಮ ಯಾನ್ ಅಭಿಪ್ರಾಯ ಪಡುತ್ತಾರೆ. [ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ: ಐಪಿಎಸ್ ದಂಪತಿ]

2004ರಲ್ಲಿ ಜರ್ಮನಿಯಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿ ನೊಂದಾಯಿಸಿದ ವೇಶ್ಯೆಯರಿಗೆ ಆರೋಗ್ಯವಿಮೆ, ನಿವೃತ್ತಿ ವೇತನ ಇತರೆ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮ ಬೃಹತ್ತಾಗಿ ಬೆಳೆಯಿತು. ಹೆಂಗಸರಿನ ಮೇಲಿನ ಅಪರಾಧ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾದವು. [ಬೆಳಗ್ಗೆ ಕಿರುತೆರೆ ನಟಿ, ರಾತ್ರಿಯಲ್ಲಿ ಕಾಲ್ ಗರ್ಲ್ಸ್]

ಅದರೆ ಕೇವಲ 44 ಮಂದಿ ವೃತ್ತಿನಿರತ ಮಹಿಳೆಯರು ಮಾತ್ರವೇ ಸರ್ಕಾರದ ಸವಲತ್ತು ಪಡೆದರು. ಇದೇ ಅವಧಿಯಲ್ಲಿ ಜರ್ಮನ್ ಧೋರಣೆಗೆ ವಿರುದ್ಧವಾಗಿ ಸ್ವೀಡನ್ ವೇಶ್ಯಾವೃತ್ತಿಯನ್ನು ಸಂಪೂರ್ಣ ನಿಯಂತ್ರಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಇದರ ಪರಿಣಾಮ ಸ್ವೀಡನ್‍ನಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಏರುಪ್ರಮಾಣ ದಾಖಲಿಸಿತು. [ವೇಶ್ಯೆಯರ ಡೈಲಿ ಬ್ರೆಡ್ ಕಿತ್ತುಕೊಂಡ ಒಲಿಂಪಿಕ್ಸ್]

ವೇಶ್ಯಾವೃತ್ತಿಯಲ್ಲಿ ತೊಡಗುವವರು ವಯಸ್ಕರಾಗಿರಬೇಕು ಮತ್ತು ಯಾವುದೇ ಒತ್ತಡಕ್ಕೆ ಬಲಿಯಾಗದಂತೆ ಈ ವೃತ್ತಿಯನ್ನು ಕಾನೂನು ಬದ್ಧಗೊಳಿಸಬಹುದು. ಇದರಿಂದ ಭಾರತದಲ್ಲಿ ಸಹ ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ ಎಂದು ಖ್ಯಾತ ಪತ್ರಕರ್ತ ದಿ. ಖುಷ್ವಂತ್ ಸಿಂಗ್ ಸಹ ಅಭಿಪ್ರಾಯಪಟ್ಟಿದ್ದರು.

ವೇಶ್ಯಾವೃತ್ತಿ ಕಾನೂನಾದರೆ ಸಮಸ್ಯೆ ಪರಿಹಾರ?: ಆದರೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸುವುದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸುವುದರಿಂದ ಅಪರಾಧ ಪ್ರಕರಣಗಳು ಮೇಲ್ನೋಟಕ್ಕೆ ಕಡಿಮೆಯಾದಂತೆನಿಸಿದರೂ ಕಾನೂನಿನ ಮರೆಯಲ್ಲಿ ಒಂದು ವರ್ಗದ ಮಹಿಳೆಯರನ್ನು ನಿರಂತರವಾಗಿ ಶೋಷಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯವಿದೆ.ರೋಡ್ ವಿಶ್ವವಿದ್ಯಾನಿಲಯದ ಡೊನ್ನಾಹಗ್ಸ್ ‘ವೇಶ್ಯೆಯರು ಕ್ರಿಮಿನಲ್ಸ್ ಅಲ್ಲ, ಅವರ ಗಿರಾಕಿಗಳು ಕ್ರಿಮಿನಲ್ ಗಳು, ವೇಶ್ಯೆಯರು ಕೇವಲ ಬಲಿಪಶುಗಳು ಎನ್ನುತ್ತಾರೆ. ವೇಶ್ಯಾವಾಟಿಕೆಗೆ ಕಾನೂನಿನ ಚೌಕಟ್ಟು ಸಿಕ್ಕರೆ ಅತ್ಯಾಚಾರ ಇಳಿಕೆ ಸಾಧ್ಯವೆ? ಮುಂದೆ ಓದಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A proper debate is needed on legalising sex work in India. can Legalisation curb violent crimes against sex workers and child trafficking. Prostitution law varies widely from country to country, and between jurisdictions within a country But, Statistics backs legalising is best idea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more