ತನ್ನ ಗಾಯಗೊಂಡ ತಂದೆ ಚಿಕಿತ್ಸೆಗಾಗಿ 35 ಕಿಮೀ ಟ್ರಾಲಿ ತುಳಿದ ಬಾಲಕಿ!
ನವದೆಹಲಿ, ಅಕ್ಟೋಬರ್ 27: ಒಡಿಶಾದ ಭದ್ರಕ್‌ದಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಗಾಯಗೊಂಡ ತಂದೆಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲು ಟ್ರಾಲಿ ರಿಕ್ಷಾವನ್ನು 35 ಕಿ.ಮೀ. ತುಳಿದು ಕರೆದೊಯ್ದ ಘಟನೆ ಜರುಗಿದೆ.
ಘಟನೆ ಅಕ್ಟೋಬರ್ 23 ರಂದು ಸಂಭವಿಸಿದೆ. ಆದರೆ ಗುರುವಾರ ಟ್ರಾಲಿಯಲ್ಲಿ ತನ್ನ ತಂದೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕೆಲವು ಸ್ಥಳೀಯ ಜನರು ಮತ್ತು ಪತ್ರಕರ್ತರು ಭದ್ರಕ್ ಪಟ್ಟಣದ ಮೊಹತಾಬ್ ಛಾಕ್ ಬಳಿ ಬಾಲಕಿಯನ್ನು ನೋಡಿದಾಗ ಬೆಳಕಿಗೆ ಬಂದಿದೆ.

ನಾಡಿಗನ್ ಗ್ರಾಮದ ಬಾಲಕಿ ಸುಜಾತಾ ಸೇಥಿ (14) ತನ್ನ ತಂದೆಯ ಟ್ರಾಲಿಯನ್ನು ಪೆಡಲ್ ಮಾಡುತ್ತಾ ತನ್ನ ಗ್ರಾಮದಿಂದ ಸುಮಾರು 14 ಕಿಮೀ ದೂರದಲ್ಲಿರುವ ಧಮ್‌ನಗರ ಆಸ್ಪತ್ರೆಗೆ ಗಾಯಗೊಂಡ ತಂದೆಯನ್ನು ಕರೆದೊಯ್ದಳು. ಆದಾಗ್ಯೂ, ವೈದ್ಯರು ಆಕೆಯ ತಂದೆಯನ್ನು ಭದ್ರಕ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ತಿಳಿಸಿದರಯ.
ಅಕ್ಟೋಬರ್ 23 ರಂದು ತನ್ನ ತಂದೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲು ಅವಳು ಟ್ರಾಲಿಯನ್ನು 35 ಕಿಮೀ ಪೆಡಲ್ ಮಾಡಿಕೊಂಡೆ ಕರೆದೊಯ್ದಳು. ಅಕ್ಟೋಬರ್ 22 ರಂದು ನಡೆದ ಗುಂಪು ಘರ್ಷಣೆಯಲ್ಲಿ ಆಕೆಯ ತಂದೆ ಸಂಭುನಾಥ್ ಗಾಯಗೊಂಡಿದ್ದರು. ಬಳಿಕ ಭದ್ರಕ್ ಜಿಲ್ಲಾಸ್ಪತ್ರೆಯ ವೈದ್ಯರು ಅವಳನ್ನು ಹಿಂತಿರುಗಿ ಮತ್ತು ಒಂದು ವಾರದ ನಂತರ ಆಪರೇಷನ್‌ಗೆ ಬರುವಂತೆ ಸಲಹೆ ನೀಡಿದರು.
"ನನ್ನ ಬಳಿ ಖಾಸಗಿ ವಾಹನ ಅಥವಾ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಮೊಬೈಲ್ ಫೋನ್ ಬಾಡಿಗೆಗೆ ಹಣವಿಲ್ಲ. ಆದ್ದರಿಂದ, ನಾನು ಅವರನ್ನು (ಸಂಭುನಾಥ್) ಆಸ್ಪತ್ರೆಗೆ ಕರೆತರಲು ನನ್ನ ತಂದೆಯ ಟ್ರಾಲಿಯನ್ನು ಬಳಸಿದ್ದೇನೆ" ಎಂದು ಅವರು ಹೇಳಿದಳು.
ಘಟನೆಯ ಬಗ್ಗೆ ಮಾಹಿತಿ ಪಡೆದ ಭದ್ರಕ್ ಶಾಸಕ ಸಂಜಿಬ್ ಮಲ್ಲಿಕ್ ಮತ್ತು ಧಮ್‌ನಗರ ಮಾಜಿ ಶಾಸಕ ರಾಜೇಂದ್ರ ದಾಸ್ ಬಾಲಕಿಯನ್ನು ಭೇಟಿ ಮಾಡಿ ಸಹಾಯ ಮಾಡಿದರು. ಈ ಬಗ್ಗೆ ಭದ್ರಕ್ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಸಂತಾನು ಪಾತ್ರಾ ಮಾತನಾಡಿ, ರೋಗಿಯನ್ನು ಚಿಕಿತ್ಸೆಗಾಗಿ ಅಕ್ಟೋಬರ್ 23 ರಂದು ದಾಖಲಿಸಲಾಯಿತು. ಒಂದು ವಾರದ ನಂತರ ಅವರಿಗೆ ಆಪರೇಷನ್ ಮಾಡಲು ಸಲಹೆ ನೀಡಲಾಯಿತು ಎಂದು ತಿಳಿಸಿದರು.
ರೋಗಿಗಳನ್ನು ಮನೆಗೆ ಹಿಂದಿರುಗಿಸಲು ನಾವು ಯಾವುದೇ ಆಂಬ್ಯುಲೆನ್ಸ್ ಸೇವೆ ಹೊಂದಿಲ್ಲ. ಅವರು ಚಿಕಿತ್ಸೆ ಮುಗಿಯುವವರೆಗೂ ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದು ಪತ್ರಾ ಹೇಳಿದರು.












Click it and Unblock the Notifications