ಬಿಜೆಪಿ ಸಂಸದ ಸಾಕ್ಷಿ ಮುಂದೆ ಹುಡ್ಗಿ ಪ್ಯಾಂಟ್ ಬಿಚ್ಚಲು ಹೇಳಿದ್ದೇಕೆ?

Posted By:
Subscribe to Oneindia Kannada

ನವದೆಹಲಿ, ಮೇ06: ಹರಿತ ನಾಲಿಗೆ ಹುಚ್ಚು ಹೇಳಿಕೆ ನೀಡುವುದಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಬಾರಿ ಯಾವುದೇ ಹೇಳಿಕೆ ನೀಡದಿದ್ದರೂ ಸಾರ್ವಜನಿಕವಾಗಿ ಯುವತಿ ಬಟ್ಟೆ ಬಿಚ್ಚುವ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಈ ಖಂಡನಾರ್ಹ ಘಟನೆಯ ಕುರಿತಂತೆ ವಿಡಿಯೋ ಕ್ಲಿಪ್ಪಿಂಗ್ ಹರಿದಾಡುತ್ತಿದೆ. ವಿಡಿಯೋದಲ್ಲಿ ಸಾಕ್ಷಿ ಮಹಾರಾಜ್ ಅವರ ಅಕ್ಕ ಪಕ್ಕದಲ್ಲಿ ಸುಮಾರು ಮಂದಿ ಮಹಿಳೆಯರು ನಿಂತಿರುತ್ತಾರೆ.

A Girl asked to Unbutton her jeans Pant in front of BJP MP Sakshi Maharaj,

ಉತ್ತರ ಪ್ರದೇಶದ ಮೈದಾನ್ ಸಿಂಗ್ ಅವರ ಮನೆಯಲ್ಲಿ ಮಾತುಕತೆ ನಡೆಸಲು ಸಾಕ್ಷಿ ಅವರು ಬಂದಿರುತ್ತಾರೆ. ಒಂದು ಕುಟುಂಬದ ಹೆಣ್ಣುಮಗಳಿಗೆ ದೈಹಿಕವಾಗಿ ಹಲ್ಲೆ, ದೌರ್ಜನ್ಯವಾಗಿರುವುದರ ಬಗ್ಗೆ ಹೇಳಲಾಗುತ್ತದೆ.

ಈ ಸಂದರ್ಭದಲ್ಲಿ ಯುವತಿಗೆ ಉಂಟಾಗಿರುವ ಗಾಯವನ್ನು ತೋರಿಸುವಂತೆ ಹೇಳಲಾಗುತ್ತದೆ. ತೊಡೆಭಾಗದಲ್ಲಿ ಉಂಟಾಗಿದ್ದ ಗಾಯವನ್ನು ಸಾರ್ವಜನಿಕವಾಗಿ ತೋರಿಸಲು ಇಚ್ಛೆಪಡದ ಯುವತಿ ಹಿಂದೇಟು ಹಾಕುತ್ತಾರೆ.ಆದರೆ, ಬಲವಂತವಾಗಿ ಆಕೆಯ ಜೀನ್ಸ್ ಪ್ಯಾಂಟ್ ಕಳಚುವ ದೃಶ್ಯಕ್ಕೆ ಅಲ್ಲಿದ್ದ ಸಾಕ್ಷಿ ಮಹಾರಾಜ್ ಸೇರಿದಂತೆ ಕೆಲ ಪುರುಷರು ಸಾಕ್ಷಿಯಾಗುತ್ತಾರೆ.

ಇದಾದ ಬಳಿಕ ಪೊಲೀಸರ ದೌರ್ಜನ್ಯ ಖಂಡಿಸಿದ ಸಾಕ್ಷಿ ಮಹಾರಾಜ್ ಅವರು, ಪೊಲೀಸರನ್ನು ಶೂಟ್ ಮಾಡುವುದಾಗಿ ಬೆದರಿಕೆ ಅಹಕುತ್ತಾರೆ. ಮಹಿಳಾ ಪೇದೆಗಳಿಲ್ಲದೆ ಮನೆಗೆ ನುಗ್ಗಿ ಯುವತಿಯರ ಮೇಲೆ ಬಿಚ್ವಾದ ಪೊಲೀಸ್ ಠಾಣಾಧಿಕಾರಿ ಜಿತೇಂದ್ರ ಕುಮಾರ್ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MP Sakshi Maharaj once again landed himself in a controversy, a shocking video going rounds in social media showing a girl forced to unbutton her jeans pant in front of Sakshi Maharaj.
Please Wait while comments are loading...