ಟೊಮೇಟೊ ಕಳ್ಳತನವಾಗುವ ಭಯದಿಂದ ಇಡೀ ಹೊಲಕ್ಕೆ ಸಿಸಿಟಿವಿ ಅಳವಡಿಸಿದ ರೈತ
ಔರಂಗಬಾದ್, ಆಗಸ್ಟ್ 8: ಟೊಮೇಟೊ ಬೆಲೆ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಅದರ ಕಳ್ಳತನವೂ ಆಗುತ್ತಿದೆ. ಈ ನಿಟ್ಟಿನಲ್ಲಿ ರೈತರೊಬ್ಬರು ತಾವು ಬೆಳೆದಿರುವ ಟೊಮೇಟೊ ರಕ್ಷಣೆಗಾಗಿ ಇಡೀ ಹೊಲಕ್ಕೆ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿರುವ ಘಟನೆ ನಡೆದಿದೆ.
ಭಾರೀ ಬೇಡಿಕೆ ಮತ್ತು ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಕಾರಣ ಮಹಾರಾಷ್ಟ್ರದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ದೇಶದಾದ್ಯಂತ ಟೊಮೇಟೊ ಹಣ್ಣುಗಳು ₹ 100 ರಿಂದ ₹ 200 ರವರೆಗೆ ಮಾರಾಟವಾಗುತ್ತಿದೆ.

ಔರಂಗಾಬಾದ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಶಹಪುರ್ ಬಂಜಾರ್‌ನಲ್ಲಿ ಟೊಮೇಟೊವನ್ನು ಕಳ್ಳರು ಕದ್ದೊಯ್ದ ನಂತರ ರೈತರೊಬ್ಬರು ತಮ್ಮ ಜಮೀನಿಗೆ ಸಿಸಿಟಿವಿ ಕಣ್ಗಾವಲು ಇರಿಸಿದ್ದಾಗಿ ಬೆಳೆಗಾರ ಹೇಳಿದರು.
ರೈತ ಶರದ್ ರಾವ್ಟೆ ಎಂಬುವವರು ಇಂದು ಹೆಚ್ಚು ಬೇಡಿಕೆಯಲ್ಲಿರುವ ತರಕಾರಿಯಾದ ಟೊಮೇಟೊಗಳನ್ನು ಕಳ್ಳತನವಾಗುವ ಭಯದಿಂದ ಸಿಸಿಟಿವಿ ಹಾಕಿಸಿದ್ದೇನೆ. ಈಗ 22-25 ಕೆಜಿ ಟೊಮೆಟೊ ಕ್ರೇಟ್ ಈಗ 3 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದರು.
ಎಮ್ಆರ್ ರಾವ್ಟೆ ಅವರ ತೋಟವು 5 ಎಕರೆಯಷ್ಟಿದೆ. ಅಲ್ಲಿ ಅವರು 1.5 ಎಕರೆಯಲ್ಲಿ ಟೊಮೇಟೊ ಬೆಳೆದಿದ್ದಾರೆ. ಇದರಿಂದ ಅವರಿಗೆ ಸುಲಭವಾಗಿ ₹ 6-7 ಲಕ್ಷ ಸಿಗುತ್ತಿದೆ. ''10 ದಿನಗಳ ಹಿಂದೆ ಗಂಗಾಪುರ ತಾಲೂಕಿನ ನನ್ನ ಜಮೀನಿನಲ್ಲಿ 20-25 ಕಿಲೋ ಟೊಮೇಟೊ ಕಳ್ಳತನವಾಗಿತ್ತು. ಇನ್ನೂ ಹಣ್ಣಾಗದ ಉಳಿದ ಬೆಳೆಯನ್ನು ರಕ್ಷಿಸಲು ₹ 22,000 ಮೌಲ್ಯದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇನೆ' ಎಂದು ಅವರು ಹೇಳಿದರು.
ಸೌರಶಕ್ತಿಯಿಂದ ಕ್ಯಾಮೆರಾ ಕಾರ್ಯನಿರ್ವಹಿಸುವುದರಿಂದ ಅದರ ವಿದ್ಯುತ್ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ನನ್ನ ಫೋನ್‌ನಲ್ಲಿ ಎಲ್ಲಿ ಕುಳಿತಾದರೂ ನಾನು ನನ್ನ ಹೊಲದ ದೃಶ್ಯಗಳನ್ನು ನೋಡಬಹುದು ಎಂದು ಅವರು ಹೇಳಿದರು.
ಇತ್ತೀಚೆಗೆ ಪುಣೆಯ ರೈತರೊಬ್ಬರ ಹೊಲದಿಂದ 400 ಕೆಜಿ ಟೊಮೇಟೊ ಕಳ್ಳತನವಾಗಿ ಸುಮಾರು 20 ಸಾವಿರ ರೂಪಾಯಿ ನಷ್ಟವಾಗಿತ್ತು. ಹಲವಾರು ರಾಜ್ಯಗಳಲ್ಲಿ ಟೊಮೇಟೊ ಕಿಲೋಗೆ 100 ರಿಂದ 200 ರೂಪಾಯಿಗಳವರೆಗೆ ಮಾರಾಟವಾಗುತ್ತಿತ್ತು. ತಮ್ಮ ಜಮೀನಿನಲ್ಲಿ ಟೊಮೇಟೊ ಕಟಾವು ಮಾಡಿ ತರಕಾರಿಯನ್ನು ಕೂಲಿಕಾರರ ಸಹಾಯದಿಂದ ವಾಹನದಲ್ಲಿ ಶಿರೂರು ತಹಶೀಲ್‌ನಲ್ಲಿರುವ ಮನೆಗೆ ತಂದಿದ್ದೇ. ಧೋಮ್ ಟೊಮೇಟೊವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯೋಜಿಸಿದ್ದೆನು ಎಂದು ದೂರುದಾರ ಅರುಣ್ ಧೋಮ್ ಪೊಲೀಸರಿಗೆ ತಿಳಿಸಿದ್ದರು.
ಆದರೆ, ಸೋಮವಾರ ಬೆಳಗ್ಗೆ ಧೋಮ್ ಎಚ್ಚರಗೊಂಡು ನೋಡಿದಾಗ 400 ಕೆಜಿ ತೂಕದ ಬೆಲೆಬಾಳುವ ತರಕಾರಿಯ 20 ಕ್ರೇಟ್‌ಗಳು ನಾಪತ್ತೆಯಾಗಿದ್ದವು. ಆಗ ತನ್ನ ಟೊಮೇಟೊ ಕಳ್ಳತನವಾಗಿದೆ ಎಂದು ತಿಳಿದ ನಂತರ ಧೋಮ್ ಶಿರೂರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.












Click it and Unblock the Notifications