ಮಹಾರಾಷ್ಟ್ರದಲ್ಲಿ ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಂದೆ!
ಮುಂಬೈ, ಅಕ್ಟೋಬರ್ 03: ಹೃದಯಕ್ಕೆ ಆಗುವ ಆಘಾತ ಯಾವಾಗ ಯಾರ ಪ್ರಾಣವನ್ನಾದರೂ ಕಿತ್ತುಕೊಳ್ಳಬಹುದು ಎಂಬುದನ್ನು ಸಾಕಷ್ಟು ಉದಾಹರಣೆಗೆಳು ಕಾಣಿಸುತ್ತವೆ. ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಗರ್ಬಾ ಕಾರ್ಯಕ್ರಮವೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
"ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ವಿರಾರ್‌ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆದ ಗಾರ್ಬಾ ಕಾರ್ಯಕ್ರಮವೊಂದರಲ್ಲಿ ಮನೀಶ್ ನಾರಾಪ್ಜಿ ಸೋನಿಗ್ರಾ ನೃತ್ಯ ಮಾಡುವಾಗ ಕುಸಿದು ಬಿದ್ದಿದ್ದರು," ಎಂದು ವಿರಾರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿದು ತಂದೆ ಸಾವು:
ಮನೀಶ್ ಸೋನಿಗ್ರಾ ನೃತ್ಯ ಮಾಡುತ್ತಿರುವಾಗ ಮೃತಪಟ್ಟಿದ್ದು, ಆತನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವಿಷಯವನ್ನು ಅವರ ತಂದೆಗೆ ತಿಳಿಸಲಾಗಿದ್ದು, ಆತನ ತಂದೆ 66 ವರ್ಷದ ನಾರಾಪ್ಜಿ ಸೋನಿಗ್ರಾ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯಲ್ಲಿ ಮಗನ ಮೃತದೇಹವನ್ನು ನೋಡುತ್ತಲೇ ಆಘಾತಗೊಂಡ ತಂದೆ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಂದೆ-ಮಗನ ಮೃತದೇಹ ಮರಣೋತ್ತರ ಪರೀಕ್ಷೆ:
ಮನೀಶ್ ಸೋನಿಗ್ರಾ ಮತ್ತು ನಾರಾಪ್ಜಿ ಸೋನಿಗ್ರಾ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ತಂದೆ-ಮಗನದ್ದು ಸಹಜ ಸಾವು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications