• search

ಕಿಡ್ನಿ ವಿಫಲವಾಗಿರುವ 9 ವರ್ಷದ ಈ ಹುಡುಗನನ್ನು ಬದುಕಿಸಿ ಕೊಡಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ತುಂಬ ಚಟುವಟಿಕೆಯಿಂದ ಇರಬೇಕಾಗಿದ್ದ ಹುಡುಗನನ್ನು ನೋಡಿ ಆ ತಂದೆ-ತಾಯಿ ಕಣ್ಣೀರಿಡುತ್ತಾರೆ. ಎಲ್ಲಿ ಅವನಿಗೆ ತಮ್ಮ ಕಣ್ಣೀರು ಕಂಡರೆ ಅಧೀರನಾಗುತ್ತಾನೋ ಎಂದು ಒಳಗೆ ಸಂಕಟಪಡುತ್ತಾರೆ. ಸಾಯಿಪ್ರಕಾಶ ಎಂಬ ಈ ಹುಡುಗನ ಪೋಷಕರು ಅಸಹಾಯಕರಾಗಿ ನಿಮ್ಮೆದುರು ಕೇಳಿಕೊಳ್ಳುತ್ತಿದ್ದಾರೆ, ಸಹಾಯ ಮಾಡಿ.

  ಸಾಯಿ ಪ್ರಕಾಶ ತುಂಬ ಚಟುವಟಿಕೆಯ ಹುಡುಗ. ಸದಾ ಉತ್ಸಾಹದಿಂದಲೇ ಇರುತ್ತಿದ್ದ. ಒಂಬತ್ತು ವರ್ಷದ ಈ ಹುಡುಗ ಮನೆಯಲ್ಲಿ ಎಲ್ಲರೊಂದಿಗೂ ನಗುನಗುತ್ತಾ ಆಟವಾಡುತ್ತಿದ್ದ. ಅವನ ತಾಯಿ ದುರ್ಗಾದೇವಿ ಹೇಳುವ ಪ್ರಕಾರ: ಸಾಯಿ ಪ್ರಕಾಶ ನಾಲ್ಕು ವರ್ಷ ಇರುವಾಗ ಒಮ್ಮೆ ನೆಲಕ್ಕೆ ಕುಸಿದು ಬಿದ್ದ. ಆ ಕ್ಷಣದಿಂದಲೇ ನಮ್ಮ ಜೀವನದಲ್ಲೂ ಬದಲಾವಣೆಗಳು ಉಂಟಾದವು.

  ಇಲ್ಲಿ ಕ್ಲಿಕ್ ಮಾಡಿ ಹಾಗೂ ಸಾಯಿಪ್ರಕಾಶನಿಗೆ ಸಹಾಯ ಮಾಡಲು ಇಚ್ಛಿಸುವಿರಾದರೆ ಇಲ್ಲಿದೆ ನೋಡಿ ಬ್ಯಾಂಕ್ ಡಿಟೇಲ್ಸ್

  9 year old Sai’s battle to get his kidney transplant

  ಮಗನ ಅನಾರೋಗ್ಯದ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಅವನು ತೀವ್ರವಾದ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂದು ಹೇಳಿದರು.

  ಅಂದಿನಿಂದಲೇ ಸಾಯಿಪ್ರಕಾಶನಿಗೆ ಪೋಷಕರು ಸೂಕ್ತ ಚಿಕಿತ್ಸೆ ಹಾಗೂ ಔಷಧವನ್ನು ಕೊಡಿಸುತ್ತಾ ಬಂದಿದ್ದಾರೆ. ನಿಗದಿತವಾಗಿ ತಪಾಸಣೆ ಮಾಡಿಸಲಾಗುತ್ತಿದೆ. ಮೊದಮೊದಲು ಇಂಜಕ್ಷನ್ ಎಂದಾಗ ಮಗ ಬಹಳ ಕೋಪ ಮಾಡಿಕೊಳ್ಳುತ್ತಿದ್ದ. ಬೇಡ ಎಂದು ಹಠ ಮಾಡುತ್ತಿದ್ದ. ಆದರೆ ಈಗ ಯಾವುದೇ ನೋವಿಗೂ ಧ್ವನಿ ಎತ್ತುತ್ತಿಲ್ಲ. ಇದನ್ನು ನೋಡುತ್ತಿದ್ದರೆ ಹೃದಯವೇ ಒಡೆದಂತಾಗುತ್ತದೆ.

  ಒಮ್ಮೆ ಸಾಯಿಪ್ರಕಾಶ ಶಾಲೆಯಿಂದ ಬಹುಬೇಗ ಮನೆಗೆ ಹಿಂತಿರುಗಿದ್ದ. ಬಹಳ ಎದೆನೋವು ಹಾಗೂ ಉಸಿರಾಟದ ತೊಂದರೆಯಿಂದ ದಣಿದಿದ್ದ. ಕಾಲುಗಳು ಊದಿಕೊಂಡಿದ್ದವು. ಆಸ್ಪತ್ರೆಯೊಂದಕ್ಕೆ ಕರೆದೊಯ್ದೆವು. ಆಗ ವೈದ್ಯರು ಮೂತ್ರಪಿಂಡವು ವಿಫಲವಾಗಿದೆ ಎಂದರು. ಜೊತೆಗೆ ಮೂತ್ರಪಿಂಡದ ಕಸಿ ಮಾತ್ರವೇ ಇದಕ್ಕೆ ಪರಿಹಾರ ಎಂದರು.

  9 year old Sai’s battle to get his kidney transplant

  ಮೂತ್ರಪಿಂಡದ ಶಸ್ತ್ರ ಚಿಕಿತ್ಸೆಗೆ ನಮಗೆ 15 ಲಕ್ಷ ರುಪಾಯಿ ವೆಚ್ಚವಾಗಲಿದೆ. ಅಷ್ಟು ದೊಡ್ಡ ಮೊತ್ತದ ಹಣವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಸಾಯಿಪ್ರಕಾಶನ ತಾಯಿ ಗೃಹಿಣಿ ಹಾಗೂ ತಂದೆ ಸ್ಥಳೀಯವಾಗಿ ಕೇಬಲ್ ಕೆಲಸ ಮಾಡುತ್ತಾರೆ. ಅವರಿಗೆ 10,000 ರುಪಾಯಿ ತಿಂಗಳ ಆದಾಯ. ಈಗಾಗಲೇ ಮಗನ ಆರೈಕೆಗಾಗಿ 5 ಲಕ್ಷ ರುಪಾಯಿ ಸಾಲ ಪಡೆದಿದ್ದಾರೆ. ಇನ್ನೂ 15 ಲಕ್ಷ ರುಪಾಯಿ ಅಗತ್ಯವಿದೆ.

  ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಸಾಯಿ ಮನೆಯ ಸಣ್ಣ- ಪುಟ್ಟ ಕೆಲಸವನ್ನು ಮಾಡುತ್ತಿದ್ದ. ಪಾಲಕರು ಮನೆಯಿಂದ ಆಚೆ ಹೋದರೆ ಮನೆಯಲ್ಲಿ ತನ್ನ ಪ್ರೀತಿಯ ತಮ್ಮನನ್ನು ನೋಡಿಕೊಳ್ಳುತ್ತಿದ್ದ. ಇಂತಹ ಮುದ್ದು ಮಗನಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಇವನ ಆರೋಗ್ಯ ಸುಧಾರಣೆಗೆ ಸೂಕ್ತ ಚಿಕಿತ್ಸೆ ಕೊಡಿಸುವಷ್ಟು ಹಣ ನಮ್ಮಲ್ಲಿಲ್ಲ. ಇದು ನಮ್ಮ ದುರ್ದೈವ ಎಂದು ಪೋಷಕರು ಕಣ್ಣೀರು ಇಡುತ್ತಾರೆ.

  ಶಾಲೆಗೆ ಹೋಗುವುದು ಹಾಗೂ ಓದು ಎಂದರೆ ಅವನಿಗೆ ಬಲು ಪ್ರೀತಿ. ಅವನ ಆ ಪ್ರೀತಿಯ ವಿದ್ಯಾಭ್ಯಾಸ ಮುಂದುವರಿಯಬೇಕು, ಆರೋಗ್ಯ ಸುಧಾರಣೆಯಾಗಬೇಕು ಎನ್ನುವುದೊಂದೇ ನಮ್ಮ ಆಶಯ. ಇದಕ್ಕಾಗಿ ಅವನಿಗೆ ಮೂತ್ರಪಿಂಡದ ಕಸಿ ಮಾಡಬೇಕಿದೆ. ಅವನ ಈ ಚಿಕಿತ್ಸೆಗೆ 15 ಲಕ್ಷ ರುಪಾಯಿ ಅಗತ್ಯ. ಆ ಹಣವನ್ನು ಹೊಂದಿಸಲು ನಿಮ್ಮ ಕೈ ಜೋಡಿಸಿ ಕೇಳಿಕೊಳ್ಳುತ್ತಿದ್ದೇವೆ. ಸಹಾಯ ಹಸ್ತವನ್ನು ಚಾಚಿ, ನಮ್ಮ ಮಗನನ್ನು ಉಳಿಸಿಕೊಡಿ ಎನ್ನುತ್ತಾರೆ ಸಾಯಿ ಪ್ರಕಾಶನ ತಂದೆ-ತಾಯಿ.

  ಮಾನವೀಯತೆಗೆ ಸಹಾಯ ಮಾಡಲು ಎಲ್ಲರೂ ಕೈಜೋಡಿಸೋಣ. ನಾವು ಮಾಡುವ ಸಣ್ಣ ಸಹಾಯವು ದೊಡ್ಡ ಸಹಕಾರವನ್ನು ಕಲ್ಪಿಸಿಕೊಡುವುದು. ನಮ್ಮ ಸಣ್ಣ ಸಹಾಯ ಸಾಯಿ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದುಕೊಡುವುದು. ನೀವು ಈ ವಿಚಾರವನ್ನು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ ಹಾಗೂ ಸಹಾಯ ನಿಧಿಗೆ ಸಹಾಯ ಮಾಡಲು ಹೇಳಿ. ಇದರಿಂದ ಒಂದು ಪುಟ್ಟ ಮಗುವಿನ ಜೀವನ ಅರಳುವುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Sai’s parents have started a fundraiser for Rs. 15 Lakhs, for their son’s kidney transplant surgery. Let's join hands in helping and serving humanity. Even a small contribution from your end can make a huge difference in the Sai’s life. You can help them by donating to the fundraiser and by sharing their story amongst your family and friends.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more