ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಆರ್ಥಿಕತೆಯ ದಿಕ್ಕನ್ನು ಬದಲಿಸಿದ ಆ 9 ಬಜೆಟ್ಟುಗಳು

|
Google Oneindia Kannada News

Recommended Video

ದೇಶದ ಆರ್ಥಿಕತೆಯ ದಿಕ್ಕನ್ನು ಬದಲಿಸಿದ ಆ 9 ಬಜೆಟ್ಟುಗಳು | Oneindia Kannada

ಪ್ರತಿ ದೇಶದ ಪ್ರಗತಿಯನ್ನು ಅಳೆಯುವುದು ಆ ದೇಶದ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ. ಆದ್ದರಿಂದಲೇ ಆಯಾ ದೇಶಗಳು ಮಂಡಿಸುವ ಬಜೆಟ್ ಅದರದೇ ಆದ ಮಹತ್ವವಿದೆ.

ಅದೇ ಕಾರಣದಿಂದಲೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು(ಫೆ.1) ಮಂಡಿಸಲಿರುವ ಕೇಂದ್ರ ಬಜೆಟ್ ಹೆಚ್ಚು ಕುತೂಹಲ ಕೆರಳಿಸಿದೆ. ಪ್ರಸ್ತುತ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣಾವಧು ಬಜೆಟ್ ಇದಾಗಿರುವುದರಿಂದ, 2019 ರಲ್ಲಿ ಲೋಕಸಭಾ ಚುನಾವಣೆಯನ್ನೂ ಎದುರಿಸಬೇಕಾಗಿರುವುದರಿಂದ, ಈ ವರ್ಷ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯೂ ನಡೆಯುವುದರಿಂದ, ಅಪಗದೀಕರಣ, ಜಿಎಸ್ಟಿ ಜಾರಿಯ ನಂತರ ಸರ್ಕಾರಕ್ಕೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಉತ್ತಮ ಅವಕಾಶವೂ ಇದೇ ಆಗಿರುವುದರಿಂದ ಇಂದಿನ ಬಜೆಟ್ ಮೇಲೆ ನಿರೀಕ್ಷೆಗಳ ಮೂಟೆಯೇ ಇದೆ.

ವಿತ್ತ ಸಚಿವ ಜೇಟ್ಲಿಯಿಂದ ಕೇಂದ್ರ ಬಜೆಟ್ 2018 - LIVE ವಿತ್ತ ಸಚಿವ ಜೇಟ್ಲಿಯಿಂದ ಕೇಂದ್ರ ಬಜೆಟ್ 2018 - LIVE

ಈ ಹೊತ್ತಲ್ಲಿ ಭಾರತದ ಆರ್ಥಿಕತೆಯನ್ನು ಬದಲಿಸಿದ ಕೆಲವು ಬಜೆಟ್ ಗಳನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತವೂ ಹೌದು. ಅವುಗಳಲ್ಲಿ 9 ಪ್ರಮುಖ ಬಜೆಟ್ ಗಳನ್ನು ಒನ್ ಇಂಡಿಯಾ ನಿಮ್ಮ ಮುಂದಿಡುತ್ತಿದೆ.

1947: ಸ್ವತಂತ್ರ್ ಭಾರತದ ಮೊದಲ ಬಜೆಟ್

1947: ಸ್ವತಂತ್ರ್ ಭಾರತದ ಮೊದಲ ಬಜೆಟ್

ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು 1947 ಆಗಸ್ಟ್ 15 ರಂದು. ಮಾರ್ಚ್ 31, 1948 ಕ್ಕೆ ಈ ಬಜೆಟ್ ಅವಧಿ ಮುಕ್ತಾಯವಾಗಿತ್ತು. ಆಗಿನ ಬಜೆಟ್ ನ ಒಟ್ಟು ಮೊತ್ತ ಕೇವಲ 171.15 ಕೋಟಿ ರೂ.! ಈ ಬಜೆಟ್ ಅನ್ನು ಮಂಡಿಸಿದ್ದು ಭಾರತದ ಮೊದಲ ವಿತ್ತ ಸಚಿವ ಆರ್ ಕೆ ಷನ್ಮುಖಂ ಚೆಟ್ಟಿ.

1951: ಗಣರಾಜ್ಯ ಭಾರತದ ಮೊದಲ ಭಾರತ

1951: ಗಣರಾಜ್ಯ ಭಾರತದ ಮೊದಲ ಭಾರತ

ನಂತರ 1951 ರಲ್ಲಿ ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಲಾಯಿತು. ಆಗ ವಿತ್ತ ಸಚಿವರಾಗಿದ್ದವರು ಜಾನ್ ಮಥೈ. ಈ ಸಮಯದಲ್ಲಿ ಯೋಜನಾ ಆಯೋಗವು ದೇಶದ ಯಾವ ಯಾವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕುರಿತು ಯೋಜನೆ ರೂಪಿಸಿತು. ಯೋಜನಾ ಆಯೋಗ(ಈಗ ನೀತಿ ಆಯೋಗ)ದ ಮೊದಲ ಅಧ್ಯಕ್ಷರಾಗಿದ್ದವರು ಜವಹರಲಾಲ್ ನೆಹರು.

1968: ಜನ ಕೇಂದ್ರಿತ ಬಜೆಟ್

1968: ಜನ ಕೇಂದ್ರಿತ ಬಜೆಟ್

1968 ರಲ್ಲಿ ಮೊರಾರ್ಜಿ ದೇಸಾಯಿ ಅವರು ಮಂಡಿಸಿದ ಬಜೆಟ್ ಜನಕೇಂದ್ರಿತ ಬಜೆಟ್ ಎಂಬ ಖ್ಯಾತಿ ಗಳಿಸಿತ್ತು. ಈ ಸಮಯದಲ್ಲಿ ತೆರಿಗೆ ವಿಧಾನದಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಯಿತು. 10 ಕೇಂದ್ರ ಬಜೆಟ್ ಗಳನ್ನು ಮಂಡಿಸಿದ ಏಕೈಕ ಕೇಂದ್ರ ಸಚಿವರು ಎಂಬ ಖ್ಯಾತಿಯನ್ನು ದೇಸಾಯಿ ಅವರು ಪಡೆದಿದ್ದಾರೆ.

1973: ಕಪ್ಪು ಬಜೆಟ್

1973: ಕಪ್ಪು ಬಜೆಟ್

1973 ಫೆಬ್ರವರಿ 1 ರಂದು ವಿತ್ತ ಸಚಿವ ಯಶವಂತ್ ರಾವ್ ಬಿ ಚಾವನ್ ಮಂಡಿಸಿದ ಬಜೆಟ್ ಕಪ್ಪು ಬಜೆಟ್ ಎಂಬು ಕರೆಸಿಕೊಂದಿತ್ತು. ಈ ಬಜೆಟ್ ನಲ್ಲಿ ವಿತ್ತೀಯ ಕೊರತೆ 550 ಕೋಟಿ ರೂ ಇತ್ತು. ಈ ಬಜೆಟ್ ನಲ್ಲಿ ಸಾಮಾನ್ಯ ವಿಮಾ ಕಂಪೆನಿಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು.

ಸರಕು ಸೇವಾ ತೆರಿಗೆ ಬದಲಾವಣೆ

ಸರಕು ಸೇವಾ ತೆರಿಗೆ ಬದಲಾವಣೆ

1986 ಫೆಬ್ರವರಿ 28 ರಂದು ವಿತ್ತ ಸಚಿವ ವಿಪಿ ಸಿಂಗ್ ಮಂಡಿಸಿದ ಬಜೆಟ್ ಹಲವು ಪರೋಕ್ಷ ತೆರಿಗೆ ನಿಯಮಗಳಲ್ಲಿ ಬದಲಾವಣೆ ತಂದಿತ್ತು. ತೆರಿಗೆ ನಿಯಮದಲ್ಲಿ ಈ ಸಮಯದಲ್ಲಾದ ಬದಲಾವಣೆಯೇ ಮುಂದೆ ಜಿಎಸ್ಟಿ ಪರ್ವ ಆರಂಭವಾಗುವುದಕ್ಕೂ ನೆರವಾಯಿತು.

ತೆರಿಗೆ ಕಳ್ಳರಿಗೆ ಕಡಿವಾಣ ಹಾಕಿದ 1987ರ ಬಜೆಟ್

ತೆರಿಗೆ ಕಳ್ಳರಿಗೆ ಕಡಿವಾಣ ಹಾಕಿದ 1987ರ ಬಜೆಟ್

ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಹಲವು ಲಾಭದಾಯಕ ಕಂಪನಿಗಳನ್ನು ತೆರಿಗೆ ಸೂರಿನಡಿ ತಂದ ಮಹತ್ವದ ಬಜೆಟ್ ಇದು. ತೆರಿಗೆ ಕಳ್ಳರನ್ನು ಪತ್ತೆ ಮಾಡಿ ಹಿಡಿದಿದಿದ್ದೇ ಮುಂದೆ ಸರ್ಕಾರಕ್ಕೆ ಬಹುಮುಖ್ಯ ಆದಾಯದ ಮೂಲವಾಯಿತು.

1991ರ ಮನಮೋಹನ್ ಸಿಂಗ್ ಬಜೆಟ್

1991ರ ಮನಮೋಹನ್ ಸಿಂಗ್ ಬಜೆಟ್

ನರಸಿಂಹರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ 1991 ರಲ್ಲಿ ಮಂಡಿಸಿದ ಬಜೆಟ್ ಯುಗಪರಿವರ್ತಿಸಿದ ಬಜೆಟ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ರಫ್ತು ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿ, ಆಮದಿಗೆ ಕಡಿಮೆ ಮಹತ್ವ ನೀಡಲು ಈ ಬಜೆಟ್ ನಲ್ಲಿ ನಿರ್ಧರಿಸಲಾಯಿತು. ಇದರಿಂದ ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆ ದೊರಕಲು ಸಹಾಯವಾಯಿತು.

2000ನೇ ಇಸವಿಯ ಶತಮಾನದ ಬಜೆಟ್!

2000ನೇ ಇಸವಿಯ ಶತಮಾನದ ಬಜೆಟ್!

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಫೆಬ್ರವರಿ 29, 2000 ದಲ್ಲಿ ಮಂಡಿಸಿದ ಬಜೆಟ್ ಶತಮಾನದ ಬಜೆಟ್ ಅನ್ನಿಸಿತು. ಭಾರತವನ್ನು ಸಾಫ್ಟ್ ವೇರ್ ಅಭಿವೃದ್ಧಿಯ ತಾಣವನ್ನಾಗಿ ಬದಲಿಸುವುದಕ್ಕಾಗಿ ಈ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಯಿತು.

English summary
Finance Minister Arun Jaitlely will present Union Budget for the financial year 2018-19 today(Feb 1st). Here we are remebering 9 budgets which helped shape Indian economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X