8th Pay Commission ಮೇಲೆ ಸರ್ಕಾರಿ ನೌಕರರಿಗೆ ಯಾಕಿಷ್ಟು ನಿರೀಕ್ಷೆಗಳಿವೆ?, ಕಾರಣಗಳು & ವೇತನ-ಭತ್ಯೆ ಅಪ್ಡೇಟ್ಸ್
8th Pay Commission Updates: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ 8ನೇ ವೇತನ ಆಯೋಗದ ಮೇಲೆ ಕೇಂದ್ರ ಸರ್ಕಾರಿ ನೌಕರರು ಅಪಾರ ನಿರೀಕ್ಷೆಗಳೂ ಇಟ್ಟುಕೊಂಡು ಕೂತಿದ್ದಾರೆ. ಕೇಂದ್ರ ಬಜೆಟ್ ಮಂಡನೆಗೆ ಎರಡು ತಿಂಗಳು ಮಾತ್ರವೇ ಬಾಕಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಎಂಟನೇ ವೇತನ ಆಯೋಗ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಇದು ಜಾರಿ ಆದರೆ ಸರ್ಕಾರಿ ನೌಕರರ ವೇತನದಲ್ಲಿ, ಪಿಂಚಣಿ ಮತ್ತು ತುಟ್ಟಿ ಭತ್ಯೆ ಹೆಚ್ಚಳದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಬಜೆಟ್ ಮಂಡನೆ 2025 ಹೊತ್ತಿಗೆ ಶಿಫಾರಸು ಪರಿಗಣಿಸುವ ನಿರೀಕ್ಷೆಗಳು ದಟ್ಟವಾಗಿದೆ.
ಕೇಂದ್ರ ಬಜೆಟ್‌ನಲ್ಲಿ 8ನೇ ವೇತನ ಆಯೋಗ ಜಾರಿ ಘೋಷಣೆ ಆದಲ್ಲಿ ಮುಂದಿನ ವರ್ಷದಿಂದಲೇ ಮಹತ್ವದ ಬದಲಾವಣೆಗಳು ಆಗಲಿವೆ. ಸರ್ಕಾರ ಕೈಗೊಳ್ಳಲಿರುವ ನಿರ್ಧಾರದ ಮೇಲೆ ಒಂದು ಕೋಟಿಗೂ ಹೆಚ್ಚು ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತವರ ಕುಟುಂಬ ಸದಸ್ಯರ ಆರ್ಥಿಕ ಸುಧಾರಣೆ ಅಡಗಿದೆ. ಈ ಕಾರಣದಿಂದ ನೌಕರರು ಎಂಟನೇ ವೇತನ ಆಯೋಗದ ಅಪ್ಡೇಟ್‌ಗಾಗಿ ಬಕಪಕ್ಷಗಳಂತೆ ಕಾಯುತ್ತಿದ್ದಾರೆ.

ವೇತನ ಹೆಚ್ಚಳದ ಫಿಟ್‌ಮೆಟ್ ಅಂಶ
8ನೇ ವೇತನ ಆಯೋಗದಡಿ ಮೂಲ ವೇತನ ಹೆಚ್ಚಿಸಲು ಫಿಟ್‌ಮೆಟ್ ಅಂಶವನ್ನು ಗಮನಿಸುವ ಸರ್ಕಾರದ ಮುಂದೆ ಈ ಬಾರಿ 2.86ರ ಪಿಂಟ್ ಮೆಂಟ್ ಅಂಶ ಪರಿಗಣಿಸಲು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಮಂಡಳಿ (NC-JCM) ಶಿಫಾರಸು ಮಾಡಿದೆ. ಈ ಶಿಫಾರಸು ಸ್ವೀಕರಿಸಿದರೆ ಫಿಟ್ ಮೆಂಟ್ ಅಂಶ 2.86ಕ್ಕೆ ಏರಿಕೆ ಆಗಲಿದೆ. ಅದರಿಂದ ವೇತನ, ತುಟ್ಟಿಭತ್ಯೆ, ಇನ್ನಿತರ ಭತ್ಯೆ ಸೌಲಭ್ಯಗಳು ಏರಿಕೆ ಆಗುವ ಸಾಧ್ಯತೆಗಳು ಇವೆ.
ನೌಕರರ ವೇತನ, ಪಿಂಚಣಿ ಹೆಚ್ಚಳಕ್ಕೆ ಮಾನದಂಡವಾಗಿರುವ ಈ ಪಿಟ್‌ಮೆಂಟ್ ಅಂಶವು 7ನೇ ವೇತನ ಆಯೋಗದಡಿ ಭತ್ಯೆ, ವೇತನ ಹೆಚ್ಚಿಸುವಾಗ 2.57ರಷ್ಟು ಪರಿಗಣಿಸಲಾಗಿತ್ತು. ಇದರಿಂದಾಗಿ ಕನಿಷ್ಠ ಮೂಲ ವೇತನ ರೂ.7,000 ರಿಂದ ರೂ 18,000 ವರೆಗೆ ಏರಿಕೆ ಕಂಡಿತ್ತು. ಹೀಗಾಗಿ ಮುಂದಿನ ವರ್ಷ 2.86 ಫಿಟ್‌ಮೆಂಟ್ ಅಂಶ ಪರಿಗಣಿಸಿ ಹೆಚ್ಚಳಕ್ಕೆ ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ. ಇದು ಸಾಧ್ಯವಾದಲ್ಲಿ ಕನಿಷ್ಠ ಮೂಲ ವೇತನ 18,000 ರೂ.ದಿಂದ 51,480ಕ್ಕೆ ಹೆಚ್ಚಾಗಲಿದೆ.
8ನೇ ವೇತನ ಆಯೋಗದ ಮೇಲೆ ಯಾಕಿಷ್ಟು ನಿರೀಕ್ಷೆಗಳು
8ನೇ ವೇತನ ಆಯೋಗ ಜಾರಿಯಾದರೆ ವೇತನ ಹಾಗೂ ಪಿಂಚಣಿಯಲ್ಲಿನ ಬದಲಾವಣೆಗಳ ಜೊತೆಗೆ ತುಟ್ಟಿ ಭತ್ಯೆ (ಡಿಎ) ಹಾಗೂ ಇತರ ಆರ್ಥಿಕ ಸೌಲಭ್ಯಗಳು ಪರಿಷ್ಕರಣೆಗೊಳ್ಳುವ ನಿರೀಕ್ಷೆ ಇದೆ. ನೌಕರರಿಗೆ ಹಣದುಬ್ಬರ ಎದುರಿಸಲು ತುಟ್ಟಿಭತ್ಯೆ ಪರಿಣಾಮಕಾರಿ ಅಂಶವಾಗಿದೆ. ಡಿಎ ಪ್ರತಿ ಆರು ತಿಂಗಳಿಗೊಮ್ಮೆಯಂತೆ ವರ್ಷಕ್ಕೆ ಎರಡು ಭಾರಿ ಹೆಚ್ಚಾಗಲಿದೆ.
ಹೀಗಾಗಿ ಎಂಟನೇ ವೇತನ ಆಯೋಗದ ಜಾರಿ ಕುರಿತು ಕೇಂದ್ರ ಸರ್ಕಾರ ಅಪ್ಡೇಟ್ ನೀಡದಿದ್ದರೂ ನೌಕರರು ಕಾಯುತ್ತಿದ್ದಾರೆ. ಇದಕ್ಕೆ ಇನ್ನೊಂದು ಮುಖ್ಯ ಕಾರಣವೇನೆಂದರೆ, ಪ್ರತಿ ಹತ್ತು ವರ್ಷಕ್ಕೊಮ್ಮೆ ಹೊಸ ಆಯೋಗ ಜಾರಿ ಆಗುತ್ತಿದೆ. ಹಾಲಿ 7ನೇ ವೇತನ ಆಯೋಗ ಕೊನೆಗೊಳ್ಳಲು ಒಂದು ವರ್ಷ ಬಾಕಿ ಇದೆ. 2026ರಂದು ಕೊನೆಗೊಳ್ಳುವ ಮೊದಲು 8ನೇ ವೇತನ ಆಯೋಗ ಪ್ರಕ್ರಿಯೆಗಳೂ ಸುಮಾರು ಒಂದೂವರೆ ವರ್ಷದಿಂದಲೇ ಆರಂಭವಾಗಬೇಕಿರುತ್ತದೆ. ಹೀಗಾಗಿ ನೌಕರರ ಚಿತ್ತ ಎಂಟನೇ ವೇತನ ಆಯೋಗದ ಜಾರಿಯ ಮೇಲಿದೆ.












Click it and Unblock the Notifications