7th Pay Commission: ಶೀಘ್ರದಲ್ಲೇ ಕೇಂದ್ರ ನೌಕರರ ಡಿಎ ಹೆಚ್ಚಳ? ಇಲ್ಲಿದೆ ಇನ್‌ಸೈಡ್ ರಿಪೋರ್ಟ್
ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಕೇಂದ್ರ ಸರ್ಕಾರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಈ ವರದಿ ಓದಿ
ಬೆಂಗಳೂರು, ಮಾರ್ಚ್ 08: ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಕೇಂದ್ರ ಸರ್ಕಾರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್ 8 ಅಥವಾ ಅದರ ನಂತರ ಸರ್ಕಾರವು ಈ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಗಮನಿಸಬೇಕಾದ ಅಂಶವೆಂದರೆ ಡಿಎಯನ್ನು ಪ್ರಸ್ತುತ ಶೇ 38 ರಿಂದ ಶೇ 42 ಕ್ಕೆ ಏರಿಸುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ.
4200 ಗ್ರೇಡ್ ಪೇನಲ್ಲಿ ರೂ 15,500 ಪಡೆಯುವ ಉದ್ಯೋಗಿಯು 7 ನೇ ಕೇಂದ್ರ ವೇತನ ಆಯೋಗದ ಪ್ರಕಾರ (ರೂ 15,500 x 2.57) ಒಟ್ಟು ರೂ 39, 835 ವೇತನವನ್ನು ಪಡೆಯುತ್ತಾನೆ.

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುತ್ತದೆ. ಇದರ ಆಧಾರದ ಮೇಲೆ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಲೇಬರ್ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ವಿಭಾಗವಾಗಿದೆ.
ಸುದ್ದಿಸಂಸ್ಥೆ ಪಿಟಿಐನೊಂದಿಗೆ ಮಾತನಾಡಿದ ಆಲ್ ಇಂಡಿಯಾ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, 'ಡಿಸೆಂಬರ್ 2022 ರ ಗ್ರಾಹಕ ಬೆಲೆ ಸೂಚ್ಯಂಕವನ್ನು ಜನವರಿ 31, 2023 ರಂದು ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳವು ಶೇಕಡಾ 4.23 ರಷ್ಟಿದೆ. ಆದರೆ ದಶಮಾಂಶ ಬಿಂದುವನ್ನು ಮೀರಿ ಡಿಎ ಹೆಚ್ಚಳವನ್ನು ಸರ್ಕಾರ ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.
ಡಿಕೆ ಹೆಚ್ಚಳ ಕುರಿತ ಪ್ರಮುಖಾಂಶಗಳು
ಪ್ರಸ್ತುತ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 38 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

ತುಟ್ಟಿಭತ್ಯೆಯಲ್ಲಿ ಕೊನೆಯ ಪರಿಷ್ಕರಣೆಯನ್ನು ಸೆಪ್ಟೆಂಬರ್ 28, 2022 ರಂದು ಮಾಡಲಾಗಿದೆ. ಇದು ಜುಲೈ 1, 2022 ರಿಂದ ಜಾರಿಗೆ ಬಂದಿತು.
ಜೂನ್, 2022 ರ ಅವಧಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ಕೇಂದ್ರವು ನಾಲ್ಕು ಶೇಕಡಾವಾರು ಪಾಯಿಂಟ್‌ಗಳಿಂದ 38 ಶೇಕಡಾಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.
ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಒದಗಿಸಲಾಗಿದೆ.

ತುಟ್ಟಿಭತ್ಯೆಯನ್ನು ಶೇಕಡಾ 38 ರಿಂದ ಶೇಕಡಾ 42 ಕ್ಕೆ ಹೆಚ್ಚಿಸಿದರೆ, ನೌಕರರ ವೇತನದ ಮೇಲಿನ ತುಟ್ಟಿಭತ್ಯೆ ಕೂಡ ಹೆಚ್ಚಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಗಮನಾರ್ಹವಾಗಿ, ಉದ್ಯೋಗಿಯ ವೇತನ ಮ್ಯಾಟ್ರಿಕ್ಸ್‌ನ ಮಟ್ಟವನ್ನು ಅವಲಂಬಿಸಿ ಡಿಎಯನ್ನು ಹೆಚ್ಚಸಲಾಗುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications