7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ ಹೆಚ್ಚಳದ ಅಪ್ಡೇಟ್ಸ್: DA ಶೇ.57ಕ್ಕೆ ಏರಿಕೆ

ನವದೆಹಲಿ, ಜನವರಿ 15: ದೇಶದಲ್ಲಿ ಜಾರಿಯಲ್ಲಿರುವ 7ನೇ ವೇತನ ಆಯೋಗಡಿ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ತುಟ್ಟಿಭತ್ಯೆ (DA hike) ಮತ್ತು ತುಟ್ಟಿ ಪರಿಹಾರ (DR Hike) ಹೆಚ್ಚಳ ಘೋಷಣೆ ಮಾಡಲಿದೆ. ಪ್ರತಿ ವರ್ಷದಂತೆ 2024ರ ಜನವರಿ ತಿಂಗಳಿನ ತುಟ್ಟಿಭತ್ಯೆ ಏರಿಕೆ ಘೋಷಣೆಗಾಗಿ ಒಂದು ಕೋಟಿ ನೌಕರರು ಉತ್ಸುಕರಾಗಿದ್ದಾರೆ. AICPI ಸೂಚ್ಯಂಕದ ಆಧಾರದ ಮೇಲೆ ಹೆಚ್ಚಳವಾಗಲಿದೆ.

ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ಸರ್ಕಾರಿ ನೌಕರಿಗೆ ಗುಡ್ ನ್ಯೂಸ್ ನೀಡಲಿದೆ. ತುಟ್ಟಿಭತ್ಯೆ ಈ ಭಾರಿಯು ಶೇಕಡಾ 3-4ರಷ್ಟು ಏರಿಕೆ ಮಾಡುವ ಸಂಭವವಿದೆ. ಹೀಗಾದಲ್ಲಿ, ತುಟ್ಟಿಭತ್ಯೆ ಒಟ್ಟು ಪ್ರಮಾಣವು ಶೇಕಡಾ 53 ರಿಂದ 56 ಇಲ್ಲವೇ 57ಕ್ಕೆ ಹೆಚ್ಚಾಗುತ್ತದೆ. ಇದರಿಂದ ನೌಕರರಿಗೆ ವಿವಿಧ ಭತ್ಯೆಗಳು ಏರಿಕೆ ಆಗಲಿವೆ. ಸರ್ಕಾರದ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

7th Pay Commission Central will Announce DA Hike for January 2025 DA May Reach 56 percent

ಪ್ರತಿ ಆರು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ಘೋಷಣೆ ಆಗುತ್ತದೆ. ಈ ಬಾರಿಯ ಏರಿಕೆಯು ನೌಕರರ ಮಾಸಿಕ ಮೂಲ ವೇತನದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಲಿದೆ. ಪಿಂಚಣಿ ಪಡೆಯುವ ಪಿಂಚಣಿದಾರರ ಪಿಂಚಣಿಯಲ್ಲೂ ಮಹತ್ವದ ಬದಲಾವಣೆ ತರಲಿದೆ.

ಪ್ರತಿ ವರ್ಷ ಜನವರಿ ಮತ್ತು ಜುಲೈ ಗೆ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಏರಿಕೆ ಮಾಡಲಾಗುತ್ತದೆ. ಜನವರಿ ಹೆಚ್ಚಳವನ್ನು ಮಾರ್ಚ್‌ ತಿಂಗಳಲ್ಲಿ, ಜುಲೈ ಏರಿಕೆಯನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಆಗುತ್ತದೆ. 2024ರ ಜನವರಿಯಲ್ಲಿ ಶೇಕಡಾ 4ರಷ್ಟು ಡಿಎ ಏರಿಕೆ ಮಾಡಿದ್ದರಿಂದ ತುಟ್ಟಿಭತ್ಯೆ ಒಟ್ಟು ಪ್ರಮಾಣ ಶೇ.50ಕ್ಕೆ ತಲುಪಿತ್ತು. ನಂತರ ಜುಲೈ ಏರಿಕೆ (ಶೇ.3) ಸೇರಿ ಶೇ.53ಕ್ಕೆ ತಲುಪಿದೆ.

7th Pay Commission Central will Announce DA Hike for January 2025 DA May Reach 56 percent

ಡಿಎ ಶೇಕಡಾ 57ಕ್ಕೆ ತಲುಪುವ ಸಾಧ್ಯತೆ

ಕಳೆದ ವರ್ಷದಂತೆ 2025ರಲ್ಲೂ ಸರ್ಕಾರ ಶೇಕಡಾ 3 ಇಲ್ಲವೇ 4ರಷ್ಟು ಏರಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. 4ರಷ್ಟು ಹೆಚ್ಚಾದ್ಲಲಿ ಡಿಎ ಪ್ರಮಾಣ ಶೇಕಡಾ 57ಕ್ಕೆ ತಲುಪಬಹುದು. ಇದು ಜನವರಿಯಿಂದ ಅನ್ಯವಯವಾಗುವಂತೆ ಮುಂದಿನ ಹೋಳಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಲಿದೆ.

2025 ರ ತುಟ್ಟಿಭತ್ಯೆ ಹೆಚ್ಚಳದಿಂದ 46 ಲಕ್ಷ ಕೇಂದ್ರ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ಲಾಭಪಡೆದುಕೊಳ್ಳಲಿದ್ದಾರೆ. ಇದನ್ನು ಏಳನೇ ವೇತನ ಆಯೋಗದಡಿ ಎಐಸಿಐಸಿಐ ಸೂಚ್ಯಂಕ ಡೇಟಾ ಅವಲಂಬಿಸಿ ಹೆಚ್ಚಳಕ್ಕೆ ನಿರ್ಧರಿಸುತ್ತಾರೆ. ಹೆಚ್ಚಳ ವೇಳೆ ಫೀಟ್‌ಮೆಂಟ್ ಅಂಶವು ಮಹತ್ವದ ಪಾತ್ರವಹಿಸುತ್ತದೆ.

ಕಾಲಕಾಲಕ್ಕೆ ಹೆಚ್ಚಾಗುವ ಬೆಲೆ ಏರಿಕೆ, ಹಣದುಬ್ಬರದ ಸಂದರ್ಭದಲ್ಲಿ ಸರ್ಕಾರಿ ನೌಕರರ ಆರ್ಥಿಕ ಸಮತೋಲನ ಕಾಪಾಡಲು ಈ ತುಟ್ಟಿಭತ್ಯೆ ಏರಿಕೆಗಳು ಸಹಾಯವಾಗುತ್ತವೆ. ಹೀಗಾಗಿ ಪ್ರತಿ ಭಾರಿಯು ಏರಿಕೆ ವೇಳೆ ನೌಕರರ ನಿರೀಕ್ಷೆಗಳು ಬಹಳಷ್ಟಿರುತ್ತೆ. ಏಕೆಂದರೆ ಭತ್ಯೆಗಳು ಹೆಚ್ಚಾದಾಗ, ಮೂಲ ವೇತನದಲ್ಲಿ ಕೊಂಚ ಬದಲಾವಣೆ ಆಗುತ್ತದೆ.

ಎಂಟನೇ ವೇತನ ಆಯೋಗ

ಕೇಂದ್ರ ಸರ್ಕಾರದ ಬಜೆಟ್ ಮುಂದಿನ ತಿಂಗಳ ಫೆಬ್ರವರಿ ಮೊದಲ ವಾರ ಮಂಡನೆ ಆಗಲಿದೆ. ಏಳನೇ ವೇತನ ಆಯೋಗದ ಅವಧಿ ಇನ್ನೊಂದು ವರ್ಷ ಇದೆ. ಹೀಗಾಗಿ ಬೆಜಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಅವರು ಎಂಟನೇ ವೇತನ ಆಯೋಗ (8th Pay Commission) ಜಾರಿ ಬಗ್ಗೆ, ಏನಾದರೂ ಅಪ್ಡೇಟ್ ಘೋಷಣೆ ಮಾಡಲಿದ್ದಾರೆ. ಇದು ಜಾರಿಯಾದರೆ ನಮ್ಮ ಮೂಲ ವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರಗಳ ಮೇಲೆ ಪ್ರಭಾವ ಭೀರಲಿದೆ ಎಂದು ಕೇಂದ್ರದ ಒಂದು ಕೋಟಿ ನೌಕರರು ಕಾತರರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+