ಭಾರತ: ಕೊರೊನಾವೈರಸ್ 2ನೇ ಅಲೆಗಳಲ್ಲಿ ಪ್ರಾಣ ಬಿಟ್ಟ ವೈದ್ಯರೆಷ್ಟು?

ನವದೆಹಲಿ, ಜೂನ್ 16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಯೋಧರಂತೆ ಹೋರಾಡುತ್ತಿರುವ ವೈದ್ಯರನ್ನು ಮಹಾಮಾರಿ ಅಪಾಯ ತಪ್ಪಿದ್ದಲ್ಲ. ಕೊವಿಡ್-19 ಸೋಂಕಿನ ಎರಡು ಅಲೆಗಳಲ್ಲಿ 730ಕ್ಕೂ ಹೆಚ್ಚು ವೈದ್ಯರು ಪ್ರಾಣಬಿಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘವು ಮಾಹಿತಿ ನೀಡಿದೆ.

ದೇಶದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭವಾದ ದಿನದಿಂದ ಈವರೆಗೂ 730 ವೈದ್ಯರು ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಬಿಹಾರದಲ್ಲಿ ಅತಿಹೆಚ್ಚು ಅಂದರೆ 115 ವೈದ್ಯರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದು, ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ನವದೆಹಲಿಯಲ್ಲಿ 109 ವೈದ್ಯರು ಮೃತಪಟ್ಟಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ62,224 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,07,628 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2542 ಮಂದಿ ಪ್ರಾಣ ಬಿಟ್ಟಿದ್ದಾರೆ.

730 Doctors Died During The Second Wave Of COVID-19, Says Indian Medical Association

ದೇಶದಲ್ಲಿ ಒಟ್ಟು 2,96,33,105 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,83,88,100 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,79,573 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 8,65,432 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅತಿಹೆಚ್ಚು ವೈದ್ಯಕೀಯ ಸಿಬ್ಬಂದಿ ಮೃತಪಟ್ಟ Top 10 ರಾಜ್ಯಗಳು:

1. ಬಿಹಾರ - 115

2. ದೆಹಲಿ - 109

3. ಉತ್ತರ ಪ್ರದೇಶ - 79

4. ಪಶ್ಚಿಮ ಬಂಗಾಳ - 62

5. ರಾಜಸ್ಥಾನ - 43

5. ಜಾರ್ಖಂಡ್ - 39

6. ಆಂಧ್ರ ಪ್ರದೇಶ - 38

7. ತೆಲಂಗಾಣ - 37

8. ಗುಜರಾತ್ - 37

9. ತಮಿಳುನಾಡು - 32

10. ಒಡಿಶಾ - 31

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+