ಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು
ನವದೆಹಲಿ, ಆಗಸ್ಟ್ 23: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3ಲಕ್ಷದ ಗಡಿ ದಾಟಿದೆ. ಒಂದೇ ದಿನ 69,239 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
24 ಗಂಟೆಗಳಲ್ಲಿ 912 ಮಂದಿ ಮೃತಪಟ್ಟಿದ್ದಾರೆ. ಒಟ್ಟು 30,44,941 ಪ್ರಕರಣಗಳಿವೆ. ಅದರಲ್ಲಿ 22,80,567 ಮಂದಿ ಗುಣಮುಖರಾಗಿದ್ದಾರೆ. 7,07,668 ಸಕ್ರಿಯ ಪ್ರಕರಣಗಳಿವೆ. 56,706 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆಗಸ್ಟ್ 22ರವರೆಗೆ 3,52,92,220 ಮಾದರಿಯನ್ನು ಪರೀಕ್ಷಿಸಲಾಗಿದೆ. ಶನಿವಾರ 8,01,147 ಮಾದರಿಯನ್ನು ಪರೀಕ್ಷಿಸಲಾಯಿತು ಎಂದು ಇಂಡಿಯನ್ ಕೌನ್ಸಿಲ್ ಮೆಡಿಕಲ್ ರಿಸರ್ಚ್ ತಿಳಿಸಿದೆ.












Click it and Unblock the Notifications