ಭಾರತದಲ್ಲಿ 24 ಗಂಟೆಯಲ್ಲಿ 64,531 ಕೋವಿಡ್ ಪ್ರಕರಣ

ನವದೆಹಲಿ, ಆಗಸ್ಟ್ 19 : ಭಾರತದಲ್ಲಿ 24 ಗಂಟೆಯಲ್ಲಿ 64,531 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದುವರೆಗೂ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 52,889ಕ್ಕೆ ಏರಿಕೆಯಾಗಿದೆ.

Recommended Video

      MS Dhoniಗೆ ಬಹಳ ವಿಶೇಷ ಗೌರವ ಸಲ್ಲಿಸಲಿದೆ ಮುಂಬೈ ಕ್ರಿಕೆಟ್ | Oneindia Kannada

      ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯಂತೆ ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8 ಗಂಟೆಯ ತನಕ 64,531 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 1092 ಜನರು ಮೃತಪಟ್ಟಿದ್ದಾರೆ.

      ಭಾರತದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 27,67,274ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,76,514 ಎಂದು ಆರೋಗ್ಯ ಸಚಿವಾಲಯ ಹೇಳಿದೆ.

      64,531 New Covid-19 Cases And 1092 Deaths Reported In India In The Last 24 Hours

      ಇದುವರೆಗೂ 20,37,871 ಜನರು ಕೋವಿಡ್ ಸೋಂಕಿನಿಂದಾಗಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 52,889. ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,15,477.

      ಭಾರತದ ಟಾಪ್ 3 ರಾಜ್ಯಗಳು : ಭಾರತದಲ್ಲಿ ಕೋವಿಡ್ ಸೋಂಕಿತರು ಇರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು (3,49,654), ಆಂಧ್ರಪ್ರದೇಶ (3,06,261), ಕರ್ನಾಟಕ (2,40,948).

      ಕರ್ನಾಟಕದಲ್ಲಿ ಮಂಗಳವಾರ 7665 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 8387 ಜನರು ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+