72 ಗಂಟೆಗಳಲ್ಲಿ 61 ಮಕ್ಕಳ ಸಾವು: ಗೋರಖ್ ಪುರದಲ್ಲಿ ಮತ್ತೆ ಮರಣಮೃದಂಗ!
ಕಳೆದ ಎರಡು ವಾರಗಳಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 70 ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡ ಎನ್ಸೆಫಲಿಟಿಸ್ ರೋಗ ತನ್ನ ಮರಣ ಮೃದಂಗವನ್ನು ಮುಂದುವರಿಸಿದೆ.
ಕಳೆದ 72 ಗಂಟೆಗಳಲ್ಲಿ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 61 ಮಕ್ಕಳು ಬಲಿಯಾಗಿದ್ದು, ಇವುಗಳಲ್ಲಿ 7 ಮಕ್ಕಳು ಎನ್ಸೆಫಲಿಟಿಸ್ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಉಳಿದ ಮಕ್ಕಳ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಸರಣಿ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತ್ರತ್ವದ ಉತ್ತರ ಪ್ರದೇಶ ಸರ್ಕಾರ ಬಿಆರ್ ಡಿ ಪ್ರಿನ್ಸಿಪಲ್ ಡಾ.ರಾಜೀವ್ ಮಿಶ್ರಾ ಅವರನ್ನು ಉಚ್ಚಾಟನೆ ಮಾಡಿತ್ತು.
ಆಗಸ್ಟ್ 1 ರಿಂದ ಇಲ್ಲಿಯವರೆಗೆ ಒಟ್ಟು 290 ಮಕ್ಕಳು ಸಾವನ್ನಪ್ಪಿದ್ದು, ಆಸ್ಪತ್ರೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಮಾತೂ ಕೇಳಿಬರುತ್ತಿದೆ.
Recommended Video

ಕರ್ನಾಟಕದ ಕೋಲಾರ ಮತ್ತು ರಾಯಚೂರಿನಲ್ಲೂ ಕಳೆದ ಮೂರು ತಿಂಗಳಲಲ್ಲಿ ತಲಾ 33 ಮತ್ತು 70 ಮಕ್ಕಳು ಸಾವಿಗೀಡಾಗಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications