ನಿಕೋಬಾರ್ ದ್ವೀಪದಲ್ಲಿ ಭೂಕಂಪ: 6.0 ತೀವ್ರತೆ ದಾಖಲು
ಮಾಹಾಬುಂದರ್(ನಿಕೋಬಾರ್ ದ್ವೀಪ), ಜನವರಿ 17: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಗುರುವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿದೆ.
ಗುರುವಾರ ಬೆಳಿಗ್ಗೆ ಸುಮಾರು 8:23 ರ ಸಮಯದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಭೂಕಂಪದ ನಂತರ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.
ಘಟನೆಯಲ್ಲಿ ಯಾವುದೇ ಸಾಬವು, ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಳೆದ ಜುಲೈನಲ್ಲಿ ಸತತ ಎರಡು ದಿನ ಅಂಡಮಾನ್ ದ್ವೀಪದಲ್ಲಿ ಬೂಕಂಪ ಸಂಭವಿಸಿದ ಕಾರಣ ಜನರು ಆತಂಕಕ್ಕೀಡಾಗಿದ್ದರು. ಆದರೆ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.
ಕಳೆದ ಸೆಪ್ಟೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ 832 ಮಂದಿ
ಅಸುನೀಗಿದ ಮನಕಲಕುವ ಘಟನೆ ನಡೆದಿತ್ತು.












Click it and Unblock the Notifications