ಕನಿಷ್ಠ 6 ಕೋಟಿ ಭಾರತೀಯರಿಗೆ ಮಾನಸಿಕ ಆರೋಗ್ಯ ಸಮಸ್ಯೆ

Posted By:
Subscribe to Oneindia Kannada

ದೆಹಲಿ, ಸೆಪ್ಟೆಂಬರ್ 2: ಕನಿಷ್ಠ 6 ಕೋಟಿ ಭಾರತೀಯರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದು ದಕ್ಷಿಣ ಆಫ್ರಿಕಾದ ಜನಸಂಖ್ಯೆಯನ್ನೂ ಮೀರಿಸಿದಂತಾಯಿತು. ಜತೆಗೆ ಜಗತ್ತಿನ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿರುವ ಹಣ ಎರಡೂ ಕಡಿಮೆಯೇ.

1ರಿಂದ 2 ಕೋಟಿ (ಜನಸಂಖ್ಯೆಯ 1ರಿಂದ 2 ಪರ್ಸೆಂಟ್) ಭಾರತೀಯರು ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ನಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, 5 ಕೋಟಿ ಭಾರತೀಯರು (ಜನಸಂಖ್ಯೆಯ 5 ಪರ್ಸೆಂಟ್) ಡಿಪ್ರೆಶನ್, ಆತಂಕದಂಥ ಸಾಮಾನ್ಯ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಈ ಸಂಖ್ಯೆ 2005ರ ಅಂತ್ಯದ ವೇಳೆಗೆ ಇದ್ದದ್ದು ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.[ಸ್ನೇಹಭವನದ ಮಮತೆಯ ಮಡಿಲಲ್ಲಿ ಮಾನಸಿಕ ಅಸ್ವಸ್ಥರು]

6 crore Indians Suffer From Mental Disorders

ಬಾಂಗ್ಲಾದೇಶ್ ಗಿಂತ ಹಿಂದೆ: ಮಾನಸಿಕ ಆರೋಗ್ಯ ರಕ್ಷಣೆಗಾಗಿ ಭಾರತದ ಬಜೆಟ್ ನಲ್ಲಿ ಶೇ 0.06ರಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಈ ಮೊತ್ತ ಬಾಂಗ್ಲಾದೇಶ್ ಗಿಂತ (ಶೇ 0.44) ಕಡಿಮೆ. ಅಭಿವೃದ್ಧಿಶೀಲ ರಾಷ್ಟ್ರಗಳು ಬಜೆಟ್ ನ ಶೇ 4 ರಷ್ಟು ಮೊತ್ತವನ್ನು ಮಾನಸಿಕ ಆರೋಗ್ಯ ಸಂಶೋಧನೆ, ಮೂಲಸೌಕರ್ಯ ಮತ್ತಿತರ ವ್ಯವಸ್ಥೆಗಾಗಿ ಖರ್ಚು ಮಾಡುತ್ತವೆ ಎಂದು 2011ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ತಿಳಿಸಿದೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿ ರಾಜ್ಯ ಸರ್ಕಾರದ ಜವಾಬ್ದಾರಿಗೆ ಬರುವುದರಿಂದ ಕೇಂದ್ರ ಸರ್ಕಾರದ ಬಳಿ ಯಾವುದೇ ಅಂಕಿ-ಅಂಶ ಇಲ್ಲ. ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಮಾತ್ರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವವರ ಸಂಖ್ಯೆಯೇ ಕಡಿಮೆಯಿದೆ. ಅದರಲ್ಲೂ ಜಿಲ್ಲಾ ಮಟ್ಟದಲ್ಲಿ ಈ ಕೊರತೆ ಜಾಸ್ತಿಯಿದೆ.[ರೋಗಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಜೈಲು]

66,200 ಸೈಕಿಯಾಟ್ರಿಸ್ಟ್ ಗಳ ಕೊರತೆ: ಇಡೀ ದೇಶದಲ್ಲಿ 3,800 ಸೈಕಿಯಾಟ್ರಿಸ್ಟ್, 898 ಕ್ಲಿನಿಕಲ್ ಸೈಕಾಲಜಿಸ್ಟ್, 850 ಸೈಕಿಯಾಟ್ರಿಕ್ ಸಮಾಜ ಸೇವಕರು ಮತ್ತು 1,500 ಸೈಕಿಯಾಟ್ರಿಕ್ ನರ್ಸ್ ಗಳು ಇದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ಹತ್ತು ಲಕ್ಷ ಜನಕ್ಕೆ ಮೂವರು ಸೈಕಿಯಾಟ್ರಿಸ್ಟ್ ಗಳಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ 66,200 ಸೈಕಿಯಾಟ್ರಿಸ್ಟ್ ಗಳ ಕೊರತೆಯಿದೆ.

ಇನ್ನು ಜಾಗತಿಕ ಮಟ್ಟದ ಸರಾಸರಿ ಲೆಕ್ಕ ನೋಡುವುದಾದರೆ (ಒಂದು ಲಕ್ಷ ಜನಕ್ಕೆ ಶೇ 21.7 ನರ್ಸ್ ) ಭಾರತದಲ್ಲಿ 2,69,750 ನರ್ಸ್ ಗಳ ಅಗತ್ಯವಿದೆ. ಮಾನಸಿಕ ಸಮಸ್ಯೆಯಿರುವ ವ್ಯಕ್ತಿಗಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಆಗಸ್ಟ್ 8ರಂದು ಮೇಲ್ಮನೆಯಲ್ಲಿ ಅವಿರೋಧವಾಗಿ ಮಸೂದೆ ಅಂಗೀಕಾರವಾಗಿದೆ.[ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ?]

ಈ ಹೊಸ ಬಿಲ್ ಮಾನಸಿಕ ಆರೋಗ್ಯ ಕೇಂದ್ರಗಳಿಗೆ ಕೇಂದ್ರ ನೀಡುತ್ತಿದ್ದ ಅನುದಾನವನ್ನು ತಲಾ 30 ಕೋಟಿಯಿಂದ 33.70 ಕೋಟಿಗೆ ಹೆಚ್ಚಿಸಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವೃತ್ತಿಪರರ ಕೊರತೆ ನೀಗಿಸುವುದಕ್ಕೆ 15 ಮಾನಸಿಕ ಆರೋಗ್ಯ ಶಿಕ್ಷಣ ಕೇಂದ್ರ ಹಾಗೂ 35 ಸ್ನಾತಕೋತ್ತರ ತರಬೇತಿ ವಿಭಾಗಕ್ಕೆ ಅನುದಾನ ನೀಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 6 crore Indians–a number more than the population of South Africa–suffer from mental disorders, the country lags the world in medical professionals, spending on mental-health issues.
Please Wait while comments are loading...