ಹೇಳದೆ ಕೇಳದೆ ರಜಾ ಹಾಕಿದ 59 'ಕೋಬ್ರಾ'ಗಳಿಗೆ ಕಾದಿದೆ ಶಿಕ್ಷೆ

Subscribe to Oneindia Kannada

ಪಾಟ್ನಾ, ಫೆಬ್ರವರಿ 6: ತರಬೇತಿ ಮುಗಿಸಿ ಡ್ಯೂಟಿಗೆ ಬಂದು ಹಾಜರಾಗಬೇಕಾಗಿದ್ದ 'ಕೋಬ್ರಾ' ದಳದ 59 ಕಮಾಂಡೋಗಳು ನಾಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸದಂತೆ ಸಿ.ಆರ್.ಪಿ.ಎಫ್ ಸ್ಪಷ್ಟನೆ ನೀಡಿದೆ. ಕಮಾಂಡೋಗಳು ಮಾಹಿತಿ ನೀಡದೆ ಅವರ ಇಷ್ಟಾನುಸಾರ ರಜೆ ತೆಗೆದುಕೊಂಡಿದ್ದರು. ಅವರೆಲ್ಲರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದೆ.

ಕೇಂದ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್) ಅಧೀನದಲ್ಲಿ ಬರುವ ನಕ್ಸಲ್ ನಿಗ್ರಹ ಪಡೆ 'ಕೋಬ್ರಾ'ದ ಕಾಮಾಂಡೋಗಳು ಇವರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿಯಲ್ಲಿದ್ದ ಕಮಾಂಡೋಗಳು ಬಿಹಾರದ ನಕ್ಸಲ್ ಪೀಡಿತ ಗಯಾ ಪ್ರದೇಶದಲ್ಲಿರುವ '205 ಕೋಬ್ರಾ ಘಟಕ'ದಲ್ಲಿ ಸೋಮವಾರ ಮುಂಜಾನೆ ಬಂದು ಡ್ಯೂಟಿಗೆ ಸೇರಿಕೊಳ್ಳಬೇಕಾಗಿತ್ತು. ಅದು ಅವರೆಲ್ಲರ ಮೊದಲ ಡ್ಯೂಟಿಯಾಗಿತ್ತು. ಆದರೆ ಕಾಂಮಾಂಡೋಗಳಿದ್ದ ರೈಲು ಬಂದಿದ್ದರೆ, 59 ಕಮಾಂಡೋಗಳು ಮಾತ್ರ ನಾಪತ್ತೆಯಾಗಿದ್ದಾರೆ. [ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿ: ಸೇನೆ ಸ್ಪಷ್ಟನೆ]

59 trainee CoBRA commandos go missing from train

ಜಮ್ಮುವಿನಿಂದ ತಮ್ಮ ತರಬೇತಿ ಮುಗಿಸಿ ಕಮಾಂಡೋಗಳು ಪಾಟ್ನಾದತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿಯಿಂದ ಅವರೆಲ್ಲಾ ನಾಪತ್ತೆಯಾಗಿದ್ದಾರೆ ಎಂದು ಸಿ.ಆರ್.ಪಿ.ಎಫ್ ಅಧಿಕಾರಿಗಳು ಹೇಳಿದ್ದಾರೆ. ತಾವು ರೈಲಿನಿಂದ ಇಳಿದು ಹೋಗುವ ಬಗ್ಗೆ ಯಾವ ಮೇಲಾಧಿಕಾರಿಗೂ ಕಮಾಂಡೋಗಳು ಮಾಹಿತಿ ನೀಡಿಲ್ಲ. ಕಮಾಂಡೋಗಳ ಬಳಿ ಯಾವುದೇ ಶಸ್ತ್ತಾಸ್ತ್ರಗಳು ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. [ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ]

ಕಮಾಂಡೋಗಳ ನಾಪತ್ತೆ ಬಗ್ಗೆ ಸಿ.ಆರ್.ಪಿ.ಎಫ್ ಆತಂಕಕ್ಕೆ ಒಳಗಾಗಿದ್ದು ನವದೆಹಲಿಯಲ್ಲಿರುವ ಕೇಂದ್ರ ಕಚೇರಿಯಿಂದ ಪೂರ್ಣ ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆ ವೇಳೆ ತಮ್ಮ ಮೇಲಾಧಿಕಾರಿಗಳಿಗೂ ಮಾಹಿತಿ ನೀಡದೆ ಕಮಾಂಡೋಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಕಮಾಂಡೋಗಳನ್ನು ಅಂದುಕೊಂಡಿದ್ದಕ್ಕಿಂತ ಕೆಲವು ದಿನ ಮೊದಲೇ ಬಿಹಾರದ ಗಯಾಕ್ಕೆ ಕರೆಸಿಕೊಳ್ಳಲಾಗಿತ್ತು. ನಿಗದಿತ ದಿನಕ್ಕಿಂತ ಬೇಗ ಬಂದಿದ್ದರಿಂದ ಕಮಾಂಡೋಗಳು ಕುಟುಂಬಸ್ಥರನ್ನು ನೋಡಲು ಎರಡು ದಿನ ರಜೆ ತೆಗೆದುಕೊಂಡಿದ್ದರು ಎಂದು ಸಿ.ಆರ್.ಪಿ.ಎಫ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗೆರಿಲ್ಲಾ ತಂತ್ರದಲ್ಲಿ ನಕ್ಸಲರನ್ನು ಮತ್ತು ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರನ್ನು ಸದೆ ಬಡಿಯಲು ಸಿ.ಆರ್.ಪಿ.ಎಫ್ ಅಡಿಯಲ್ಲಿ ಕೋಬ್ರಾ ಕಮಾಂಡೋ ತಂಡವನ್ನು 2009ರಲ್ಲಿ ರಚನೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an unusual case 59 trainee commandos of CRPF elite jungle warfare and counter-Maoist squad CoBRA have gone missing from a train just before they were to report for duty.
Please Wait while comments are loading...