ದೆಹಲಿಯಿಂದ ಐರ್ಲೆಂಡ್‌ಗೆ ತೆರಳಲಿದ್ದಾರೆ ಕೇರಳದ 55 ನರ್ಸ್‌ಗಳು
ನವದೆಹಲಿ, ಜೂನ್ 01 : ವಂದೇ ಭಾರತ್ ಮಿಷನ್ ಅಡಿ ದೆಹಲಿಯಿಂದ ಐರ್ಲೆಂಡ್‌ಗೆ ಏರ್ ಇಂಡಿಯಾ ವಿಮಾನ ಇಂದು ಸಂಚಾರ ನಡೆಸಲಿದೆ. ಕೇರಳದ 55 ನರ್ಸ್‌ಗಳು ಈ ವಿಮಾನದಲ್ಲಿ ಐರ್ಲೆಂಡ್‌ಗೆ ತೆರಳಲಿದ್ದಾರೆ.
ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ನರ್ಸ್‌ಗಳು ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ಇನ್ನೂ ಕೆಲವರು ಈಗ ಕೆಲಸಕ್ಕೆ ಸೇರಿದ್ದು, ಮೊದಲ ಬಾರಿಗೆ ಅಲ್ಲಿಗೆ ತೆರಳುತ್ತಿದ್ದಾರೆ. ಏಪ್ರಿಲ್ 10ರಂದು ತೆರಳಬೇಕಿದ್ದ ಎಲ್ಲರೂ ಲಾಕ್ ಡೌನ್ ಪರಿಣಾಮ ತಡವಾಗಿ ಹೊರಡುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಯಿತು. ಆದ್ದರಿಂದ, ನರ್ಸ್‌ಗಳ ಪ್ರಯಾಣ ವಿಳಂಬವಾಗಿತ್ತು. ಈಗ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಲಿದ್ದಾರೆ.

ದುಬೈ, ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದ ಟೀನಾ ಮ್ಯಾಥ್ಯೂ ಐರ್ಲೆಂಡ್‌ಗೆ ಹೋಗುತ್ತಿದ್ದಾರೆ. 4 ವರ್ಷದ ಮಗನನ್ನು ಕೇರಳದಲ್ಲಿಯೇ ಬಿಟ್ಟು ಹೋಗುತ್ತಿದ್ದು, ಆಕೆಯ ಪೋಷಕರು ಮಗುವನ್ನು ನೋಡಿಕೊಳ್ಳಲಿದ್ದಾರೆ.
ಸೌಮ್ಯಾ ಮ್ಯಾಥ್ಯೂ ಎಂಬ ನರ್ಸ್ ಸಹ ಐರ್ಲೆಂಡ್‌ಗೆ ವಾಪಸ್ ಆಗುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. 55 ಜನರು ಸಹ ಏಪ್ರಿಲ್ 10ರಂದು ಐರ್ಲೆಂಡ್‌ಗೆ ಹೋಗಬೇಕಿತ್ತು. ಆದರೆ, ಲಾಕ್ ಡೌನ್ ಪರಿಣಾಮ ಜೂನ್ 1ರಂದು ಹೊರಡಲಿದ್ದಾರೆ.
ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 55 ಜನರು ಪ್ರಯಾಣ ಮಾಡಲಿದ್ದಾರೆ. ಐರ್ಲೆಂಡ್ ತಲುಪುತ್ತಿದ್ದಂತೆ 14 ದಿನಗಳ ಕಾಲ ಎಲ್ಲರೂ ಕ್ವಾರಂಟೈನ್‌ನಲ್ಲಿರಬೇಕು. ಬಳಿಕ ಎಲ್ಲರೂ ಕೆಲಸ ಆರಂಭಿಸಲಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿದೇಶಗಳಲ್ಲಿ ಭಾರತದ ಅದರಲ್ಲೂ ಕೇರಳದ ನರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಕೆಯಲ್ಲಿ ಶೇ 30, ಯುಸ್‌ನಲ್ಲಿ ಶೇ 15 ಮತ್ತು ಆಸ್ಟ್ರೇಲಿಯಾದಲ್ಲಿ ಶೇ 12ರಷ್ಟು ಕೇರಳಿಗರು ನರ್ಸ್‌ಗಳಾಗಿ ದುಡಿಯುತ್ತಿದ್ದಾರೆ.












Click it and Unblock the Notifications