ಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆ

ನವದೆಹಲಿ, ಜುಲೈ 21: ಆಕ್ಸ್‌ಫರ್ಡ್ ವಿವಿಯ ಕೊರೊನಾ ಲಸಿಕೆ ಸಂಪೂರ್ಣ ಯಶಸ್ವಿಯಾದಲ್ಲಿ ಭಾರತಲ್ಲಿಯೇ ಉತ್ಪಾದನೆಯಾಗಲಿದೆ. ಭಾರತಕ್ಕೆ ಉತ್ಪಾದನೆಯ ಅರ್ಧದಷ್ಟು ಲಸಿಕೆ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50 ಭಾರತದ ಬಳಕೆಗೆ ಮೀಸಲಾಗಿರಲಿದೆ ಎಂದು ಸಂಸ್ಥೆ ಮುಖ್ಯಸ್ಥ ಆದಾರ್​ ಪೂನಾವಾಲಾ ಹೇಳಿದ್ದಾರೆ.

ನವೆಂಬರ್​​- ಡಿಸೆಂಬರ್​ ವೇಳೆಗೆ ಹತ್ತಾರು ಲಕ್ಷ ಡೋಸ್​ ಉತ್ಪಾದನೆಯಾದರೆ, ಮುಂದಿನ ಮಾರ್ಚ್​ ವೇಳೆಗೆ 3-4 ಕೋಟಿ ಡೋಸ್​ ತಯಾರಾಗಲಿದೆ ಎಂದು ಹೇಳಿದ್ದಾರೆ.

ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆದಾರ್​, ಇದನ್ನು ಸರ್ಕಾರವೇ ನಿರ್ಧರಿಸಲಿದೆ. ಆರಂಭದಲ್ಲಿ ಹಿರಿಯರು, ಹೆಚ್ಚು ಅಪಾಯದಲ್ಲಿರುವವರು ಹಾಗೂ ಮುಂಚೂಣಿಯಲ್ಲಿದ್ದು, ಕೋವಿಡ್​ ರೋಗಿಗಳಿಗೆ ಆರೈಕೆ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ನೀಡುವುದು ನ್ಯಾಯಯುತ ಹಂಚಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

50 Percent Of Oxford Covid Vaccines Will Be For India

ಭಾರತದಲ್ಲಿ ರೋಗಿಗಳು ಈ ಲಸಿಕೆಗೆ ಹಣವನ್ನು ಪಾವತಿಸುವುದು ಬೇಡ ಸರ್ಕಾರ ಖರೀದಿ ಮಾಡಿ ಜನರಿಗೆ ಉಚಿತವಾಗಿ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿರುವ ಇಲ್ಲಿನ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಇದರ ಉತ್ಪಾದನೆಯಲ್ಲಿ ತೊಡಗಲಿದೆ. ಆಕ್ಸ್​ಫರ್ಡ್​ ವಿವಿ ಸಹಭಾಗಿತ್ವದಲ್ಲಿ ಇದನ್ನು ಉತ್ಪಾದಿಸುತ್ತಿರುವ ಅಸ್ಟ್ರಾಜೆನೆಕಾ ಕಂಪನಿ ಸಿರಂ ಇನ್​ಸ್ಟಿಟ್ಯೂಟ್​ಗೆ ಉತ್ಪಾದನಾ ಪರವಾನಗಿ ನೀಡಿದೆ. ಈ ಸಂಸ್ಥೆ ಉತ್ಪಾದಿಸಿದ ಲಸಿಕೆಯಲ್ಲಿ ಶೇ.50 ಭಾರತದ ಬಳಕೆಗೆ ಸಿಗಲಿದೆ. ಇನ್ನುಳಿದದ್ದು ಬೇರೆ ದೇಶಗಳಿಗೆ ಹಂಚಿಕೆಯಾಗಲಿದೆ.

ಜನರು ಇದನ್ನು ಖರೀದಿಸುವ ಅಗತ್ಯ ಎದುರಾಗದು. ಏಕೆಂದರೆ ಸರ್ಕಾರವೇ ಇದನ್ನು ಖರೀದಿಸಿ ಉಚಿತವಾಗಿ ಹಂಚಲಿದೆ. ಕೋವಿಡ್​ ಸಂಕಷ್ಟ ಕಾಲದಲ್ಲಿ ಸರ್ಕಾರ ಈ ಹೊಣೆಗಾರಿಕೆ ನಿಭಾಯಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+