ಉತ್ತರ ಪ್ರದೇಶದಲ್ಲಿ ಠೇವಣಿ ಕಳೆದುಕೊಂಡ 50% ಬಿಜೆಪಿ ಅಭ್ಯರ್ಥಿಗಳು!

Posted By:
Subscribe to Oneindia Kannada

ಲಕ್ನೋ, ಡಿಸೆಂಬರ್ 7: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಯ ಚುನಾವಣೆ ಡಿ.1 ರಂದು ಹೊರಬೀಳುತ್ತಿದ್ದಂತೆಯೇ ಬಿಜೆಪಿ ಗೆಲುವಿನ ಸಂತಸದಲ್ಲಿ ಬೀಗಿದ್ದು ನಿಜ. ಆದರೆ 16 ಮೇಯರ್ ಸ್ಥಾನಗಳಲ್ಲಿ 14 ನ್ನು ಬಿಜೆಪಿ ಗೆದ್ದರೂ, ತನ್ನ ಸಾಮರ್ಥ್ಯವನ್ನು ಬಿಜೆಪಿ ಮತ್ತೊಮ್ಮೆ ಒರೆಗೆಹಚ್ಚುವ ಸಂದರ್ಭ ಉತ್ತರ ಪ್ರದೇಶದಲ್ಲಿ ಸೃಷ್ಟಿಯಾಗಿದೆ.

ಯುಪಿ: 16ರಲ್ಲಿ 12 ಮೇಯರ್ ಸ್ಥಾನ ಗೆದ್ದ ಬಿಜೆಪಿ, ಬಿಎಸ್ಪಿಗೆ 2 ಸ್ಥಾನ

ಬಿಜೆಪಿಯು ಈ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಇವರಲ್ಲಿ ಶೇ.50 ರಷ್ಟು ಅಭ್ಯರ್ಥಿಗಳು ಠೇವಣಿ ಸಹ ಗಳಿಸಲಾಗದೆ ಇರುವುದು ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಸಾಕ್ಷಿ.

ಒಟ್ಟು 3,656 ಸೀಟುಗಳಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ. ಕೆವಲ ಬಿಜೆಪಿ ಮಾತ್ರವಲ್ಲ, ಬಿಎಸ್ ಪಿ, ಎಸ್ ಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಬಿಜೆಪಿಗಿಂತ ಹೆಚ್ಚು ಸೀಟುಗಳಲ್ಲಿ ಠೇವಣಿ ಕಳೆದುಕೊಂಡಿದ್ದರೂ, ಅಭೂತಪೂರ್ವ ಜಯಗಳಿಸಿರುವ ಕಾರಣಕ್ಕೆ ಬಿಜೆಪಿಯ ಗೆಲುವು ಮತ್ತು ಶೇ.50 ರಷ್ಟು ಸೀಟುಗಳಲ್ಲಿ ಠೇವಣಿ ಕಳೆದುಕೊಂಡ ಇಬ್ಬಗೆಯ ಸನ್ನಿವೇಶ ಬಿಜೆಪಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ನಿಕಷಕ್ಕೆ ಹಚ್ಚುವ ಅಗತ್ಯವನ್ನು ಸಾರಿ ಹೇಳಿದೆ.

ಡಿ.1 ರಂದು ಬಿಡುಗಡೆಯಾದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಒಟ್ಟು 16 ಮೇಯರ್ ಸ್ಥಾನಗಳಲ್ಲಿ 14 ನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಬೀಗಿತ್ತು.

ವೋಟ್ ಶೇರ್ ಲೆಕ್ಕದಲ್ಲೂ ಬಿಜೆಪಿಗೆ ಹಿನ್ನಡೆ

ವೋಟ್ ಶೇರ್ ಲೆಕ್ಕದಲ್ಲೂ ಬಿಜೆಪಿಗೆ ಹಿನ್ನಡೆ

ವೋಟ್ ಶೇರ್ ಲೆಕ್ಕದಲ್ಲೂ ಬಿಜಿಪಿಯ ಸಾಧನೆ ಕಳಪೆಯೇ. ನಗರ ಸಭೆ ಚುನಾವಣೆಯಲ್ಲಿ ಒಟ್ಟು 30.8 ಪ್ರತಿಶತ ವೋಟ್ ಶೇರ್ ಅನ್ನಷ್ಟೇ ಗಳಿಸುವ ಮೂಲಕ ಬಿಜೆಪಿ ಕಳಪೆ ಸಾಧನೆ ಮೆರೆಯಿತು. ಎಸ್ ಪಿ 30.8, ಬಿಎಸ್ ಪಿ18.0, ಕಾಂಗ್ರೆಸ್ 10.0 ವೋಟ್ ಶೇರನ್ನಷ್ಟೇ ಪಡೆಯಲು ಶಕ್ತವಾದವು.

ಠೇವಣಿ ಕಳೆದುಕೊಂಡ ಅರ್ಧಕ್ಕಿಂತಲೂ ಹೆಚ್ಚು ಜನ!

ಠೇವಣಿ ಕಳೆದುಕೊಂಡ ಅರ್ಧಕ್ಕಿಂತಲೂ ಹೆಚ್ಚು ಜನ!

ಒಟ್ಟು 12,644 ಸೀಟ್ ಗಳಲ್ಲಿ 8,038 ಸೀಟುಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ತಮ್ಮ ಠೇವಣಿ ಕಳೆದುಕೊಂದಿದ್ದರು. ನಗರ ಪಂಚಾಯತ್ ಸದಸ್ಯರ ಮಟ್ಟದಲ್ಲಿ 664 ಅಭ್ಯರ್ಥಿಗಳು ಗೆದ್ದಿದ್ದರೆ, 1462 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದರು.

16 ಮೇಯರ್ ಸ್ಥಾನಗಳಲ್ಲಿ 14 ಬಿಜೆಪಿಗೆ

16 ಮೇಯರ್ ಸ್ಥಾನಗಳಲ್ಲಿ 14 ಬಿಜೆಪಿಗೆ

ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 16 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗಳಿಸಿದ ಬಿಜೆಪಿ ಈ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿತ್ತು. ಸ್ಥಳೀಯ ಸಂಸ್ಥೆಯ ಗೆಲುವಿಗೂ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಗೆದ್ದಿದ್ದೆಷ್ಟು, ಸೋತಿದ್ದೆಷ್ಟು?

ಗೆದ್ದಿದ್ದೆಷ್ಟು, ಸೋತಿದ್ದೆಷ್ಟು?

ಈ ಚುನಾವಣೆಯಲ್ಲಿದ್ದ ಒಟ್ಟು 12,644 ಸೀಟುಗಳಲ್ಲಿ ಬಿಜೆಪಿ 2366 ಸೀಟುಗಳನ್ನು ಗೆದ್ದರೆ, ಎಸ್ ಪಿ 1260, ಬಿಎಸ್ ಪಿ 703, ಕಾಂಗ್ರೆಸ್ 420 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡವು. ಇವುಗಳಲ್ಲಿ ಬಿಜೆಪಿ 3,656 ಸ್ಥಾನಗಳಲ್ಲಿ ಸೋತರೆ, ಎಸ್ ಪಿ 2,922, ಬಿ ಎಸ್ ಪಿ2910, ಕಾಂಗ್ರೆಸ್ 2,770 ಸ್ಥಾನಗಳಲ್ಲಿ ಸೋತು ಮುಖಭಂಗ ಅನುಭವಿಸಿದವು.

ಉಳಿದ ಪಕ್ಷಗಳದ್ದೂ ಕಳಪೆ ಸಾಧನೆಯೇ!

ಉಳಿದ ಪಕ್ಷಗಳದ್ದೂ ಕಳಪೆ ಸಾಧನೆಯೇ!

ಕೆವಲ ಬಿಜೆಪಿ ಮಾತ್ರವಲ್ಲ, ಬಿಎಸ್ ಪಿ, ಎಸ್ ಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಬಿಜೆಪಿಗಿಂತ ಹೆಚ್ಚು ಸೀಟುಗಳಲ್ಲಿ ಠೇವಣಿ ಕಳೆದುಕೊಂಡಿವೆ. ಎಸ್ ಪಿ 2,922, ಬಿಎಸ್ ಪಿ 2910, ಕಾಂಗ್ರೆಸ್ 2770 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿವೆ. ಇವು ಬಿಜೆಪಿಗಿಂತ ಕಳಪೆ ಪ್ರದರ್ಶನ ತೋರಿವೆಯಾದರೂ, ಬಿಜೆಪಿ ಇಲ್ಲಿ ಅಭೂತಪೂರ್ವ ಜಯಗಳಿಸಿರುವ ಕಾರಣಕ್ಕೆ, ಬಿಜೆಪಿ ಠೇವಣಿ ಕಳೆದುಕೊಂಡಿದ್ದರತ್ತಲೇ ಹೆಚ್ಚು ಚರ್ಚೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even though BJP won civic polls in Uttar Pradesh, almost half, that means 50% of the BJP candidates lost their deposit. The number were even worse in the case of other major parties like BSP, SP and Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ