ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ: ತಿಳಿಯಬೇಕಾದ 5 ಸಂಗತಿ

Posted By:
Subscribe to Oneindia Kannada

ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಇಂದು(ಆಗಸ್ಟ್ 7) ಸಂಭವಿಸುತ್ತಿದೆ. ರಾತ್ರಿ 10:52 ಕ್ಕೆ ಗ್ರಹಣ ಆರಂಭವಾಗಲಿದ್ದು, 12:48 ರವರೆಗೆ ಗ್ರಹಣ ಕಾಣಿಸಿಕೊಳ್ಳಲಿದೆ. ಪ್ರತಿ ರಾತ್ರಿಗೂ ಬೆಳ್ಳನೆ ಬೆಳಕು ನೀಡುವ ಚಂದಾಮಾಮ ಇಂದು ಕೆಲಕಾಲ ಶಾಪಗ್ರಸ್ಥನಾದಂತೆ ಕಾಣಲಿದ್ದಾನೆ.

ಹನ್ನೆರಡು ರಾಶಿಯವರ ಮೇಲೆ ಚಂದ್ರ ಗ್ರಹಣದ ಪರಿಣಾಮಗಳು..

ಬರಿಗಣ್ಣಿನಲ್ಲಿ ನೋಡಬಹುದಾದ ಈ ಗ್ರಹಣ 11:50 ರ ಸಮಯದಲ್ಲಿ ಚಂದ್ರನ ಬಹುಪಾಲನ್ನು ಆವರಿಸಲಿದೆ ಬೆಂಗಳೂರಿನ ಜವಹರಲಾಲ್ ನೆಹರೂ ಪ್ಲಾನೆಟೇರಿಯಂ(ಜೆಎನ್ ಪಿ) ನಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರಗ್ರಹಣ ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಆಕಾಶದಲ್ಲಿ ಮೋಡವಿದ್ದರೆ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಕಾಶದಲ್ಲಿ ಮೋಡವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಪ್ಲಾನೆಟೇರಿಯಂ ಗೆ ಬರುವಂತೆ ಜೆಎನ್ ಪಿ ಮನವಿ ಮಾಡಿದೆ.

ಸಣ್ಣಕಥೆ : ಗ್ರಹಣ

ಮೂಢನಂಬಿಕೆಗಳು, ಸಂಪ್ರದಾಯಗಳು, ವೈಜ್ಞಾನಿಕ ಕಾರಣಗಳು ಎನ್ನುತ್ತ ಚಂದ್ರ ಗ್ರಹಣಕ್ಕೆ ಭಾರತೀಯರು ತರಹೇವಾರಿ ಅರ್ಥವನ್ನು ನೀಡಿದ್ದಾರೆ. ಈ ವರ್ಷದ ಮೊದಲ ಭಾಗಶಃ ಚಂದ್ರ ಗ್ರಹಣದ ಕುರಿತು ಕೆಲವು ಉಪಯುಕ್ತ ಮಾಹಿತಿ ಇಲ್ಲಿವೆ...(ಚಿತ್ರ ಕೃಪೆ: ಪಿಟಿಐ)

ಶ್ರಾವಣ ಹುಣ್ಣಿಮೆಯಂದು ಗ್ರಹಣದ ಶಾಪ

ಶ್ರಾವಣ ಹುಣ್ಣಿಮೆಯಂದು ಗ್ರಹಣದ ಶಾಪ

ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ಇಂದು (ಆಗಸ್ಟ್ 7) ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ.

ಭಾಗಶಃ ಚಂದ್ರಗ್ರಹಣ

ಭಾಗಶಃ ಚಂದ್ರಗ್ರಹಣ

ರಾತ್ರಿ 10:52 ಕ್ಕೆ ಗ್ರಹಣ ಆರಂಭವಾಗಲಿದ್ದು, 11:50ರವರೆಗೆ ಇರಲಿದೆ. ಖಗೋಳದಲ್ಲಿ ಈ ಗ್ರಹಣ ಒಂದು ರಮಣೀಯ ದೃಶ್ಯವನ್ನು ಸೃಷ್ಟಿಸಲಿದ್ದು, ಇದನ್ನು ಭಾಗಶಃ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಬರಿಗಣ್ಣಿನಲ್ಲೇ ನೋಡಬಹುದು

ಬರಿಗಣ್ಣಿನಲ್ಲೇ ನೋಡಬಹುದು

ಈ ಗ್ರಹಣ ಭಾರತದ ಎಲ್ಲ ಪ್ರದೇಶಗಳಿಂದಲೂ ಬರಿಗಣ್ಣಿಗೆ ಕಾಣಿಸಲಿರುವುದು ಮತ್ತೊಂದು ವಿಶೇಷ. ಏಷ್ಯಾ, ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾ ಖಂಡಗಳಲ್ಲೂ ಗ್ರಹಣ ಕಾಣಿಸಿಕೊಳ್ಳಲಿದೆ.

ಸೂರ್ಯ ಚಂದ್ರರ ನಡುವೆ ಭೂಮಿ ಬಂದು...

ಸೂರ್ಯ ಚಂದ್ರರ ನಡುವೆ ಭೂಮಿ ಬಂದು...

ಸೂರ್ಯ, ಭೂಮಿ ಮತ್ತು ಚಂದ್ರ ಸರಳರೇಖೆಯಲ್ಲಿದ್ದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇದ್ದಾಗ, ಸೂರ್ಯ ಕಿರಣದಿಂದ ಉಂಟಾಗುವ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಗ್ರಹಣ ಸಂಭವಿಸುತ್ತದೆ.

Lunar Eclipse is on August 7th-8th : Watch Video To Know The Procedures | Oneindia Kannada
2018 ರ ಜನರಿಯಲ್ಲಿ ಖಗ್ರಾಸ ಚಂದ್ರಗ್ರಹಣ

2018 ರ ಜನರಿಯಲ್ಲಿ ಖಗ್ರಾಸ ಚಂದ್ರಗ್ರಹಣ

ಮುಂದಿನ ಚಂದ್ರಗ್ರಹಣ ಜನವರಿ 31, 2018 ರಂದು ಸಂಭವಿಸಲಿದ್ದು, ಇದು ಖಗ್ರಾಸ ಚಂದ್ರಗ್ರಹಣವಾಗಿರಲಿದೆ. ಇದನ್ನೂ ಸಹ ಭಾರತದ ಎಲ್ಲೆಡೆಯಿಂದಲೂ ನೋಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There will be a partial lunar eclipse on August 7th. The eclipse can be seen all over the India. Here are 5 things you must know about first partial lunar eclipse of the year 2017.
Please Wait while comments are loading...