ದೇಶದೊಳಗೆ ಒಳನುಸುಳುವ ಯತ್ನದಲ್ಲಿದ್ದ ಐವರು ಉಗ್ರರ ಹತ್ಯೆ

ಶ್ರೀನಗರ್, ಆಗಸ್ಟ್ 7: ಜಮ್ಮು-ಕಾಶ್ಮೀರದ ಮಚಿಲ್ ವಲಯದಲ್ಲಿ ಉಗ್ರರು ಒಳನುಸುಳುವ ಯತ್ನವನ್ನು ಸೈನಿಕರು ವಿಫಲಗೊಳಿಸಿದ್ದು, ಗಡಿನಿಯಂತ್ರಣ ರೇಖೆಯ ಬಳಿ ಸೋಮವಾರ ಸಂಜೆ ಐವರು ಉಗ್ರರನ್ನು ಭಾರತೀಯ ರಕ್ಷಣಾ ಪಡೆಗಳು ಹೊಡೆದುರುಳಿಸಿವೆ.

"ಪ್ರಮುಖ ಒಳನುಸುಳುವ ಪ್ರಯತ್ನವನ್ನು ಮಚಿಲ್ ವಲಯದಲ್ಲಿ ಇಂದು ವಿಫಲಗೊಳಿಸಲಾಗಿದೆ" ಎಂದು ರಕ್ಷಣಾ ವಕ್ತಾರರು ಶ್ರೀನಗರ್ ನಲ್ಲಿ ಹೇಳಿದ್ದಾರೆ.

"ಉಗ್ರಗಾಮಿಗಳಿಂದ ಐದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ" ಎಂದು ರಕ್ಷಣಾ ಸಚಿವಾಲಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

Terrorist

ಈ ವರ್ಷ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳನುಸುಳುವ ಪ್ರಯತ್ನದಲ್ಲಿ ನಲವತ್ತು ಉಗ್ರಗಾಮಿಗಳನ್ನು ರಕ್ಷಣಾ ಪಡೆಗಳನ್ನು ಹೊಡೆದುರುಳಿಸಿವೆ.

ಈ ಮಧ್ಯೆ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ, ಉರಿ ವಲಯದಲ್ಲಿ ಭಾರತೀಯ ಪೋಸ್ಟ್ ಗಳ ಮೇಲೆ ದಾಳಿ ನಡೆಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+