ಮೇಘಾಲಯ: ಉಳಿದ 5 ಕಾಂಗ್ರೆಸ್ ಶಾಸಕರು ಬಿಜೆಪಿ ಬೆಂಬಲಿತ ಎಂಡಿಎ ಸೇರ್ಪಡೆ

ಗುವಾಹಟಿ ಫೆಬ್ರವರಿ 8: ತೃಣಮೂಲ ಕಾಂಗ್ರೆಸ್(ಟಿಎಂಸಿ) ಗೆ ಮೇಘಾಲಯ ಕಾಂಗ್ರೆಸ್ ಶಾಸಕರು, ಇತರ ಚುನಾಯಿತ ಸದಸ್ಯರು ಮತ್ತು ಕಾರ್ಯಕರ್ತರ ಪಕ್ಷಾಂತರ ಪರ್ವ ಮುಂದುವರಿದಿದೆ. ಮೇಘಾಲಯದಲ್ಲಿ ಉಳಿದಿರುವ ಐದು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನೇತೃತ್ವದ ಮೆಘಾಲಯ ಡೆಮಾಕ್ರಟಿಕ್ ಅಲೈಯನ್ಸ್ (ಎಂಡಿಎ) ಸರ್ಕಾರಕ್ಕೆ ಸೇರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸಿಎಂ ಕಾನ್ರಾಡ್ ಸಂಗ್ಮಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷವು, "ಜಂಟಿ ಶಾಸಕರು ನಿಮ್ಮನ್ನು ಬಲಪಡಿಸಲು MDA (ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್) ಸರ್ಕಾರವನ್ನು ಬೆಂಬಲಿಸಲು ಬಯಸುತ್ತೇವೆ" ಎಂದು ಹೇಳಿದೆ. ಕಾಂಗ್ರೆಸ್ ಶಾಸಕರಾದ ಎಂ ಅಂಪಾರೀನ್ ಲಿಂಗ್ಡೋ, ಮೈರಾಲ್‌ಬೋರ್ನ್ ಸೈಯೆಮ್, ಮೊಹೆಂದ್ರೋ ರಾಪ್ಸಾಂಗ್, ಕಿಮ್ಫಾ ಮಾರ್ಬನಿಯಾಂಗ್ ಮತ್ತು ಪಿಟಿ ಸಾಕ್ಮಿ ಸಿಎಂ ಕಾನ್ರಾಡ್ ಸಂಗ್ಮಾ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ಬಿಜೆಪಿ ಕೂಡ ಆಡಳಿತಾರೂಢ ಎಂಡಿಎ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್ ಶಾಸಕರ ಸೇರ್ಪಡೆಯೊಂದಿಗೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದೇ ಸರ್ಕಾರದ ಭಾಗವಾಗಿಸುವ ವಿಶಿಷ್ಟ ಸಾಧನೆಯನ್ನು ಕಾನ್ರಾಡ್ ಸಂಗ್ಮಾ ಹೊಂದಿದ್ದಾರೆ.

5 Remaining Congress MLAs Announce to Join BJP-Backed MDA

ಕಳೆದ ವರ್ಷ ನವೆಂಬರ್‌ನಲ್ಲಿ ಮೇಘಾಲಯದಲ್ಲಿ ಕಾಂಗ್ರೆಸ್​ನ ಮಾಜಿ ಮುಖ್ಯಮಂತ್ರಿ ಮುಕುಲ್​ ಸಂಗ್ಮಾ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್​ ಸೇರುವ ಮೂಲಕ ಪಕ್ಷಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದ್ದರು. ಅಲ್ಲಿ ಇದ್ದ 18 ಕಾಂಗ್ರೆಸ್​ ಶಾಸಕರಲ್ಲಿ 12 ಮಂದಿ ಟಿಎಂಸಿಗೆ ಪಕ್ಷಾಂತರಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಮುಕುಲ್​ ಸಂಗ್ಮಾ ಮೇಘಾಲಯದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಇವರು ಮತ್ತು ಮೇಘಾಲಯ ಪ್ರದೇಶ ಕಾಂಗ್ರೆಸ್​ ಸಮಿತಿ ಮುಖ್ಯಸ್ಥ ವಿನ್ಸೆಂಟ್​ ಎಚ್​.ಪಾಲಾ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಪ್ರದೇಶ ಕಾಂಗ್ರೆಸ್​ ಕಮಿಟಿಗೆ ವಿನ್ಸೆಂಟ್​ ಎಚ್​.ಪಾಲಾ ಮುಖ್ಯಸ್ಥರಾಗಿ ನೇಮಕರಾದಾಗಿನಿಂದಲೂ ಮುಕುಲ್​ ಸಂಗ್ಮಾ ಅಸಮಾಧಾನಗೊಂಡಿದ್ದರು. ಈ ವೇಳೆ ಮುಕುಲ್ ಸಂಗ್ಮಾ ಮತ್ತು ವಿನ್ಸೆಂಟ್​ರನ್ನು ಭೇಟಿಯಾಗಿದ್ದ ರಾಹುಲ್​ ಗಾಂಧಿ ಇಬ್ಬರ ಬೇಡಿಕೆಗಳನ್ನೂ ಆಲಿಸಿ ಮಾತುಕತೆ ನಡೆಸಿದ್ದರು.

ನಾನು ಕಾಂಗ್ರೆಸ್​​ನ ಶಾಸಕಾಂಗ ಪಕ್ಷದ ನಾಯಕನಾಗಿದ್ದರೂ, ವಿನ್ಸೆಂಟ್​ ಎಚ್​.ಪಾಲಾರನ್ನು ನೇಮಕ ಮಾಡುವಾಗ ಒಂದು ಮಾತು ನನ್ನನ್ನು ಕೇಳಲಿಲ್ಲ ಎಂದು ಮುಕುಲ್ ಸಂಗ್ಮಾ ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದರು. ಅದಾದ ಬಳಿಕ ಅವರು ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಅದರಂತೆ ಮುಕುಲ್ ಸಂಗ್ಮಾ ಒಟ್ಟು 11 ಶಾಸಕರೊಟ್ಟಿಗೆ ಟಿಎಂಸಿ ಸೇರ್ಪಡೆಯಾಗಿದ್ದರು. ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್​ ಪ್ರಮುಖ ವಿರೋಧಪಕ್ಷವಾಗಿ ಹೊರಹೊಮ್ಮಿತ್ತು.

ಇನ್ನು ತೃಣಮೂಲ ಕಾಂಗ್ರೆಸ್​ಗೆ ಸೇರುವ ಊಹಾಪೋಹದ ಬಗ್ಗೆ ಹಿಂದೊಮ್ಮೆ ಪ್ರತಿಕ್ರಿಯೆ ನೀಡಿದ್ದ ಮುಕುಲ್ ಸಂಗ್ಮಾ, ನಾನು ಮತ್ತು ಬಂಡಾಯವೆದ್ದಿರುವ ಶಾಸಕರು ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದಾದ ಬಳಿಕವಷ್ಟೇ ಟಿಎಂಸಿ ಸೇರುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಟಿಎಂಸಿ ರಾಷ್ಟ್ರಮಟ್ಟದಲ್ಲಿ ತನ್ನ ಪಕ್ಷವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದು ಮೇಘಾಲಯದಲ್ಲಿ 2023ರಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಮೇಘಾಲಯದಲ್ಲಿ ಉಳಿದಿರುವ ಐದು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ.

ಮೇಘಾಲಯದಲ್ಲಿ 2012ರಲ್ಲಿ ಟಿಎಂಸಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು. 60 ಸೀಟುಗಳ ಪೈಕಿ 35ರಲ್ಲಿ ಅದು ಸ್ಪರ್ಧಿಸಿತ್ತು. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೆ ಟಿಎಂಸಿಯ ಹಾದಿ ಸುಗಮಗೊಳಿಸಲು ಹಾಗೂ ಸಂಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬರಲು ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಈಗಾಗಲೇ ಶಿಲ್ಲಾಂಗ್‌ನಲ್ಲಿ ಬೀಡು ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+