ಜಾರ್ಖಂಡ್: ಐವರು ಎನ್‌ಜಿಒ ಕಾರ್ಯಕರ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಪಾಟ್ನಾ, ಜೂನ್ 22: ಮಾನವ ಕಳ್ಳಸಾಗಾಣಿಕೆ ಕುರಿತಂತೆ ಬುಡಕಟ್ಟು ಜನಾಂಗದವರಲ್ಲಿ ಜಾಗೃತಿ ಮೂಡಿಸುತ್ತಿದ್ದ ಬೀದಿ ನಾಟಕ ತಂಡವೊಂದರ ಐವರು ಮಹಿಳಾ ಕಲಾವಿದರ ಮೇಲೆ ಶಸ್ತ್ರ ಸಜ್ಜಿತ ತಂಡವೊಂದು ಸಾಮೂಹಿಕ ಅತ್ಯಾಚಾರ ನಡೆಸಿ ಅದನ್ನು ಚಿತ್ರೀಕರಿಸಿದ ಘಟನೆ ಜಾರ್ಖಂಡ್‌ ನಲ್ಲಿ ಇತ್ತೀಚೆಗೆ ನಡೆದಿದೆ.

ಸ್ವಯಂ ಸೇವಾ ಸಂಸ್ಥೆಯೊಂದರ 11 ಜನರ ತಂಡ ಜಾರ್ಖಂಡ್ ರಾಜ್ಯದ ಬುಡಕಟ್ಟು ಜನರಲ್ಲಿ ಮಾನವ ಕಳ್ಳಸಾಗಾಣಿಕೆ ಕುರಿತಂತೆ ಜಾಗೃತಿ ಮೂಡಿಸುವ ಅಭಿಯಾನವನ್ನು ಆರಂಭಿಸಿದೆ.ಇದರ ಭಾಗವಾಗಿ 11 ಜನರ ತಂಡ ಜನರಲ್ಲಿ ಜಾಗೃತಿ ಮೂಡಿಸುವಾಗ ತಡೆವೊಡ್ಡಿದ ಶಸ್ತ್ರ ಸಜ್ಜಿತ ತಂಡವೊಂದರ ದುಷ್ಕರ್ಮಿಗಳು ಆ ಪೈಕಿ ಐವರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅದನ್ನು ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಖಂಡ್‌ನ ಖುಂಟಿ ಜಿಲ್ಲೆಯ ಕೋಚಂಗ್ ಬಳಿಯ ಯರ್ಕೀಸ್‌ ಎಂಬಲ್ಲಿ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯ ಸ್ವಯಂಸೇವಾ ತಂಡ ಬೀದಿ ನಾಟಕ ಆಯೋಜಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಕೇಢವಲ 52 ಕಿ.ಮೀ ದೂರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

5 NGO workers gang-raped at gunpoint in Jharkhand village

ಬುಡಕಟ್ಟು ಜನಾಂಗದವರಲ್ಲಿ ಜಾಗೃತಿ ಮೂಡಿಸುವ ಬೀದಿನಾಟಕ ನಡೆಯುತ್ತಿದ್ದ ಸಂದರ್ಭದಲ್ಲಿ ಬೈಕ್‌ಮೇಲೆ ಬಂದ ದುಷ್ಕರ್ಮಿಗಳು ಬೀದಿ ನಾಟಕ ತಂಡದ ಮೇಲೆ ಹಲ್ಲೆ ನಡೆಸಿದರು. ನಾಟಕ ಪ್ರದರ್ಶಿಸುತ್ತಿದ್ದ ಕಲಾವಿದರ ಪೈಕಿ ಐವರು ಮಹಿಳೆಯರನ್ನು ಈ ವೇಳೆ ಬಂದೂಕು ತೋರಿಸಿ ಬೆದರಿಸಿ ದೂರುದ ಪ್ರದೇಶಕ್ಕೆ ಕರೆದೊಯ್ದು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಐವರ ಪೈಕಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳಾಗಿದ್ದಾರೆ. ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದನ್ನು ಬಹಿರಂಗಗೊಳಿಸಿದರೆ ವಿಡಿಯೋ ಚಿತ್ರೀಕರಣವನ್ನು ವೆಬ್‌ಸೈಟ್‌ ಮೂಲಕ ಬಿಡುಗಡೆ ಮಾಡುವುದಾಗಿ ಸಂತ್ರಸ್ತ ಮಹಿಳೆಯರನ್ನು ಬೆದರಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಅಶ್ವಿನ್ ಕುಮಾರ್ ಸಿನ್ಹಾ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಕುರಿತಂತೆ ವೈದ್ಯಕೀಯ ಮಂಡಳಿಗೆ ಮಾಹಿತಿಯನ್ನು ನೀಡಿದ್ದಾರೆ. ಸಂತ್ರಸ್ತ ಮಹಿಳೆಯರ ಆರೋಗ್ಯ ತಪಾಸಣೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ಘಟನೆಯ ಹಿಂದೆ ಹತಲ್‌ಘಡಿ ಎಂಬ ಬುಡಕಟ್ಟು ಸಂಸ್ಥೆಯೊಂದರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದು ಪ್ರಜಪ್ರಭುತ್ವ ಸರ್ಕಾರದ ಮೇಲೆ ವಿಶ್ವಾಸವಿಡದೆ ಪತಲ್‌ಘಡಿ ಎಂಬ ಬುಡಕಟ್ಟು ಜೀವನ ಪದ್ಧತಿಯನ್ನೇ ಈಗಲೂ ಪಾಲಿಸಬೇಕೆಂಬ ಸಂವಿಧಾನ ವಿರೋಧಿ ನೀಡಿಯನ್ನು ಈ ಪದ್ಧತಿ ಹೊಂದಿದೆ.

ಈ ಪದ್ಧತಿಯನ್ನು ಅನುಸರಿಸುತ್ತಿರುವ ಪತಲ್‌ಘಡಿ ಎಂಬ ಬುಡಕಟ್ಟು ಜನಾಂಗ ಸ್ಥಳೀಯರಲ್ಲಿ ಭಯ ಮೂಡಿಸಲು ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+