ನಾಳೆಯಿಂದ (ಸೆ.18) ವಿಶೇಷ ಅಧಿವೇಶನ ಶುರು, ಅಜೆಂಡಾ ಏನು?
ಬೆಂಗಳೂರು, ಸೆಪ್ಟಂಬರ್ 17: ಸೋಮವಾರ ಸೆಪ್ಟಂಬರ್ 18ರಿಂದ ಐದು ದಿನಗಳ ಸಂಸತ್ತಿನ 'ವಿಶೇಷ ಅಧಿವೇಶನ' (Parliament Special Session) ಆರಂಭವಾಗಲಿದೆ. 'ಸಂವಿಧಾನ ಸಭೆ' ಯೊಂದಿಗೆ ಮೊದಲ ದಿನದ ಸಂಸತ್ತಿನ ಕಲಾಪಗಳು ಪ್ರಾರಂಭವಾಗಲಿವೆ. ಸಂಸತ್ತಿನ 75 ವರ್ಷಗಳ ಪ್ರಯಾಣದ ಚರ್ಚೆಯೊಂದಿಗೆ ವಿಶೇಷ ಅಧಿವೇಶನವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ- ಡಿಸೆಂಬರ್ 9, 1946 ರಂದು ಸಭೆ ಸೇರಿದ ಮೊದಲ ಸಭೆ.
ಕೇಂದ್ರ ಸರ್ಕಾರ ಸಂಸತ್ತಿ ಅಧಿವೇಶನದ ಕಾರ್ಯವಿಧಾನದ ತಾತ್ಕಾಲಿಕ ಕಾರ್ಯಸೂಚಿ ಬಿಡುಗಡೆಗೊಳಿಸಿದೆ. ಅದರ ಪ್ರಕಾರ, ವಿಶೇಷ ಅಧಿವೇಶನ ಆರಂಭದ ಮೊದಲು ಕೇಂದ್ರವು ಸರ್ವಪಕ್ಷ ಸಭೆ ನಡೆಸಲಿದೆ. ಈ ಸಭೆಯಲ್ಲಿ ನಾಯಕರು ಅಜೆಂಡಾ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ಗೌರಿಗಣೇಶ ಹಬ್ಬದ ಸಂಸತ್ತಿನ ವಿಶೇಷ ಅಧಿವೇಶನವು ಎರಡನೇ ದಿನ ಸೆಪ್ಟೆಂಬರ್ 19ರಂದು ಮಂಗಳವಾರ ಹಳೆಯ ಸಂಸತ್ತಿನ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಔಪಚಾರಿಕವಾಗಿ ಸ್ಥಳಾಂತರಗೊಳ್ಳಲಿದೆ. ವಿಶೇಷ ಅಧಿವೇಶನ ಸೆಪ್ಟೆಂಬರ್ 22 ರಂದು ಮುಕ್ತಾಯಗೊಳ್ಳಲಿದೆ.
ಈ ವಿಶೇಷ ಸಂಸತ್ತು ಅಧಿವೇಶನ: ಕಾರ್ಯಸೂಚಿಯಲ್ಲಿ ಏನಿದೆ?
ಹಿಂದಿನಿಂದ ನಡೆದು ಸಂಸತ್ತಿನ 75 ವರ್ಷಗಳ ಸುದೀರ್ಘ ಪ್ರಯಾಣದ ಚರ್ಚೆಯ ಹೊರತಾಗಿ, ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತಾಧಿಕಾರಿಗಳ ನೇಮಕ, ಸೇವಾ ಷರತ್ತು ಹಾಗೂ ಅಧಿಕಾರದ ಅವಧಿ ನಿಯಂತ್ರಣ ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳು ಅಧಿವೇಶನದಲ್ಲಿ ಸರ್ಕಾರದ ಶಾಸಕಾಂಗ ವ್ಯವಹಾರದ ಭಾಗವೇ ಆಗಿದೆ.
'ದಿ ಅಡ್ವೊಕೇಟ್ಸ್ (ತಿದ್ದುಪಡಿ) ಮಸೂದೆ, 2023' ಮತ್ತು 'ದಿ ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಪಿರಿಯಾಡಿಕಲ್ಸ್ ಬಿಲ್, 2023' ಅನ್ನು ಈಗಾಗಲೇ ರಾಜ್ಯಸಭೆಯು ಕಳೆದ ಆಗಸ್ಟ್ 3 ರಂದು ಅಂಗೀಕರಿಸಿದ್ದು, ಇವು ಮಸೂದೆಗಳ ಪಟ್ಟಿಯಲ್ಲಿವೆ.

ವಕೀಲರ (ತಿದ್ದುಪಡಿ) ಮಸೂದೆ, 2023 ವಕೀಲರ ಕಾಯಿದೆ 1961 ಅನ್ನು ತಿದ್ದುಪಡಿಗೆ ತರುತ್ತದೆ. ಆದರೆ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ, 2023 ಪತ್ರಿಕಾ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ, 1867 ಅನ್ನು ರದ್ದುಗೊಳಿಸುತ್ತದೆ.
'ಪೋಸ್ಟ್ ಆಫೀಸ್ ಬಿಲ್, 2023' ಅನ್ನು ಲೋಕಸಭೆಯ ವ್ಯವಹಾರದಲ್ಲಿ ಪಟ್ಟಿ ಮಾಡಲಾಗಿದೆ. ಈ ಮಸೂದೆಯನ್ನು ಮೊದಲು ರಾಜ್ಯಸಭೆಯಲ್ಲಿ 2023 ಆಗಸ್ಟ್ 10 ರಂದು ಪರಿಚಯಿಸಲಾಯಿತು, ಇದು ಭಾರತೀಯ ಅಂಚೆ ಕಚೇರಿ ಕಾಯಿದೆ, 1898 ಅನ್ನು ರದ್ದುಗೊಳಿಸುತ್ತದೆ.
INDIA ಬ್ಲಾಕ್‌ನ ಎಲ್ಲ ಪಕ್ಷಗಳು ಭಾಗಿ
ಮುಖ್ಯವಾಗಿ ನೂತನ ಮೈತ್ರಿಕೂಟ INDIA ಬ್ಲಾಕ್‌ನ ಒಟ್ಟು 24 ಪಕ್ಷಗಳು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲಿವೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಅಧಿವೇಶ ಬಗ್ಗೆ ಇತ್ತೀಚೆಗೆ ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಅವರು ಒತ್ತಾಯಿಸಿದ್ದಾರೆ. ವಿಪಕ್ಷಗಳ ಜೊತೆ ಚರ್ಚಿಸದೇ ಅಧಿವೇಶನಕ್ಕೆ ನೀರ್ಧರಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ವಿಶೇಷ ಅಧಿವೇಶನವನ್ನು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ಮಾಡದೇ ಕರೆಯಲಾಗಿದೆ. ವಿಪಕ್ಷಗಳಿಗೆ ಅಧಿವೇಶ ಕಾರ್ಯಸೂಚಿ ಬಗ್ಗೆ ಅರಿವಿಲ್ಲದಾಗಿದೆ ಎಂದು ಸೋನಿಯಾ ಗಾಂಧಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಜಾತಿ ಗಣತಿಯ ಅಗತ್ಯತೆ, ಮಣಿಪುರ, ಕೋಮು ಘರ್ಷಣೆಗಳು ಮತ್ತು ಹಣದುಬ್ಬರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸುವಂತೆ ಸೋನಿಯಾ ಗಾಂಧಿ ಅವರು ಒತ್ತಾಯಿಸಿದ್ದಾರೆ. ಇನ್ನೂ ಹಲವು ರಾಜ್ಯಗಳು ಹಾಗೂ ಕೇಂದ್ರದ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ಆಗಬೇಕಿದೆ ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಿರುಗೇಟು ನೀಡಿ ಪ್ರತಿಕ್ರಿಯಿಸಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications