ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಸಾವು: ಶೇ.47ರಷ್ಟು ಮಂದಿ ವಯಸ್ಸು 60ಕ್ಕಿಂತ ಕಡಿಮೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಕೊರೊನಾಸೋಂಕಿನಿಂದ ಸಾವನ್ನಪ್ಪಿರುವವರಲ್ಲಿ ಶೇ.47ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

'ಶೇ 53ರಷ್ಟು ಕೋವಿಡ್ ಮರಣಗಳು 60 ಮತ್ತು ಅದಕ್ಕಿಂತ ಮೇಲಿನ ವಯಸ್ಸಿನವರದ್ದಾಗಿದ್ದರೆ, 45-60 ವರ್ಷ ವಯಸ್ಸಿನ ಶೇ.35ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ. 26-44 ವಯಸ್ಸಿನವರಲ್ಲಿ ಶೇ.10ರಷ್ಟು ಸಾವು ಸಂಭವಿಸಿದೆ.

18-25 ವಯಸ್ಸಿನವರಲ್ಲಿ ಹಾಗೂ 17ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತಲಾ ಶೇ.1ರಷ್ಟು ಮರಣ ಸಂಭವಿಸಿದೆ, 60 ವರ್ಷಕ್ಕಿಂತ ಮೇಲಿನವರಲ್ಲಿ ಅನ್ಯ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದವರ ಸಾವಿನ ಪ್ರಮಾಣ ಶೇ 24.6ರಷ್ಟಿದ್ದರೆ ಇತರೆ ಯಾವುದೇ ಸಮಸ್ಯೆ ಇಲ್ಲದವರ ಮರಣ ಪ್ರಮಾಣ ಶೇ 4.8ರಷ್ಟಿದೆ.

Corona Death

ಆರೋಗ್ಯ ಸಚಿವಾಲಯವು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಪೈಕಿ ಶೇ 47ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಎರಡನೇ ಬಾರಿಯ ಕೊರೊನಾ ಸೋಂಕು ತಂದೊಡ್ಡುವ ಅಪಾಯಗಳುಎರಡನೇ ಬಾರಿಯ ಕೊರೊನಾ ಸೋಂಕು ತಂದೊಡ್ಡುವ ಅಪಾಯಗಳು

ಒಟ್ಟು ಸಾವಿನ ಪ್ರಮಾಣದಲ್ಲಿ ಶೇ 17.9ರಷ್ಟು ಇತರ ಆರೋಗ್ಯ ಸಮಸ್ಯೆ ಹೊಂದಿರುವವರದ್ದಾಗಿದ್ದರೆ ಕೊವಿಡ್‌ನಿಂದ ಮಾತ್ರ ಸಾವಿಗೀಡಾದವರ ಪ್ರಮಾಣ ಶೇ 1.2ರಷ್ಟಿದೆ ಎಂದು ಭೂಷಣ್ ತಿಳಿಸಿದ್ದಾರೆ.

Recommended Video

Muniratna ಅವರಿಗೆ ಟಿಕೆಟ್ ಸಿಕ್ಕಿದರೂ ಸಮಸ್ಯೆ ಮಾತ್ರ ತಪ್ಪಲಿಲ್ಲ | Oneindia Kannada

ಮೃತರ ಪೈಕಿ ಶೇ 70ರಷ್ಟು ಪುರುಷ ಸೋಂಕಿತರು ಹಾಗೂ ಶೇ 30ರಷ್ಟು ಮಹಿಳಾ ಸೋಂಕಿತರು ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

English summary
Nearly 47 percent of COVID-19 deaths in the country have been reported among people under the age of 60, the center said on Tuesday and warned against any laxity against caution, saying that winter Respiratory diseases increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X