ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ 400 ಮೊಹಲ್ಲಾ ಕ್ಲಿನಿಕ್‌ಗಳ ಲೋಕಾರ್ಪಣೆ

ಚುನಾವಣೆ ವೇಳೆ ಕೊಟ್ಟ ಭರವಸೆಯಂತೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಪಂಜಾಬ್‌ನಲ್ಲಿ 400ಕ್ಕೂ ಹೆಚ್ಚು ಆಮ್ ಆದ್ಮಿ ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಿದರು.

|
Google Oneindia Kannada News

ಅಮೃತಸರ, ಜನವರಿ 27: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಪಂಜಾಬ್‌ನಲ್ಲಿ 400ಕ್ಕೂ ಹೆಚ್ಚು ಆಮ್ ಆದ್ಮಿ ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಿದರು.

400 ಹೊಸ ಆಮ್ ಆದ್ಮಿ ಚಿಕಿತ್ಸಾಲಯಗಳು ರಾಜ್ಯದಲ್ಲಿನ ಈ ನೆರೆಹೊರೆಯ ಆರೋಗ್ಯ ಕೇಂದ್ರಗಳ ಒಟ್ಟು ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುತ್ತವೆ. ಪಂಜಾಬ್ ಸರ್ಕಾರವು ಕೇವಲ 10 ತಿಂಗಳಲ್ಲಿ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿರುವುದನ್ನು ತಿಳಿಸಲು ನನಗೆ ಸಂತೋಷವಾಗಿದೆ. ಈ ಮೂಲಕ ನಾವು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್

ಭಗವಂತ್ ಮಾನ್ ಅವರು ಇನ್ನೂ ಒಂದು 'ಕೇಜ್ರಿವಾಲ್ ಕಿ ಗ್ಯಾರಂಟಿ' (ಕೇಜ್ರಿವಾಲ್ ಗ್ಯಾರಂಟಿ) ಪೂರೈಸಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. 2022 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಂಜಾಬ್ ಜನತೆಗೆ ಪಕ್ಷದ ಭರವಸೆಗಳನ್ನು ನೀಡುವಾಗ ನಾವು ನುಡಿದಂತೆ ನಡೆದಿದ್ದೇವೆ. ಪಂಜಾಬ್‌ನಲ್ಲಿ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಸೌಲಭ್ಯಗಳು ಬರಲಿವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

400 Mohalla Clinics Inaugurated in Punjab

ಪಕ್ಷದ ಎಲ್ಲಾ ಭರವಸೆಗಳನ್ನು ಪೂರೈಸಲಾಗುವುದು ಮತ್ತು ಪಂಜಾಬ್ ಜನತೆಯು ಇದಕ್ಕಾಗಿ ತಾಳ್ಮೆಯಿಂದ ಇರಬೇಕು. ಏಕೆಂದರೆ ವಿರೋಧ ಪಕ್ಷದವರು ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಈ ವೇಳೆ ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡುವ ತನ್ನ ಚುನಾವಣಾ ಭರವಸೆಯನ್ನು ಎಎಪಿ ಈಗಾಗಲೇ ಈಡೇರಿಸಿದೆ. ಭಗವಂತ್ ಮಾನ್ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಭಗವಂತ್ ಮಾನ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕಳೆದ 10 ತಿಂಗಳಲ್ಲಿ 26,000 ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ. ಇದು ನಮ್ಮ ಸಾಧನೆ ಎಂದು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದರು.

ಇಲ್ಲಿ ಮೆರಿಟ್ ಆಧಾರದ ಮೇಲೆ ಕೆಲಸ ನೀಡಲಾಗುತ್ತಿದ್ದು, ಗುತ್ತಿಗೆ ನೌಕರರನ್ನೂ ಕಾಯಂಗೊಳಿಸಲಾಗುತ್ತಿದೆ . ಗುಣಮಟ್ಟದ ಶಿಕ್ಷಣಕ್ಕಾಗಿ 36 ಸರ್ಕಾರಿ ಶಾಲಾ ಮುಖ್ಯಸ್ಥರನ್ನು ಸಿಂಗಾಪುರಕ್ಕೆ ತರಬೇತಿಗಾಗಿ ಕಳುಹಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.

English summary
AAP chief Arvind Kejriwal and Punjab Chief Minister Bhagwant Mann inaugurated more than 400 Aam Aadmi clinics in Punjab on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X