ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಪ್ರಿನ್ಸಿಪಾಲ್, ಡ್ರೈವರ್ ಲೈಂಗಿಕ ದೌರ್ಜನ್ಯ

ಹೈದರಾಬಾದ್ ಅಕ್ಟೋಬರ್ 19: ಹೈದರಾಬಾದ್‌ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ 4 ವರ್ಷದ ಬಾಲಕಿಯ ಮೇಲೆ ಆಕೆಯ ಪ್ರಿನ್ಸಿಪಾಲ್ ಹಾಗೂ ಡ್ರೈವರ್ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಕೆಳ ಶಿಶುವಿಹಾರದ ವಿದ್ಯಾರ್ಥಿನಿಯಾಗಿದ್ದಳು.

ಚಾಲಕ ರಜಿನಿಕುಮಾರ್ ಕಳೆದ ಎರಡು ತಿಂಗಳಿನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಪೋಷಕರು ತಮ್ಮ ಮಗಳ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸೋಮವಾರ, ಅವಳು ಖಿನ್ನತೆಗೆ ಒಳಗಾಗಿದ್ದಳು ಮತ್ತು ಅಳುತ್ತಿದ್ದಳು ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಚಾಲಕ ಡಿಜಿಟಲ್ ಕ್ಲಾಸ್ ರೂಮ್‌ಗೆ ಬರುತ್ತಲೇ ಇರುತ್ತಾನೆ ಮತ್ತು ಮಕ್ಕಳಿಗೆ ತೊಂದರೆ ನೀಡುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ. ಅನೇಕ ಮಕ್ಕಳು ಅವನಿಗೆ ಹೆದರುತ್ತಿದ್ದರು ಎಂದು ಪೊಲೀಸರು ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಪ್ರಕಾರ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

4-year-old girl sexually assaulted by Hyderabad school principal driver

ಇಂಡಿಯಾ ಟುಡೆ ಟಿವಿಯೊಂದಿಗೆ ಮಾತನಾಡಿದ ಬಾಲಕಿಯ ತಾಯಿ, "ನನ್ನ ಮಗಳು ಖಿನ್ನತೆಗೆ ಒಳಗಾಗಿದ್ದಳು ಮತ್ತು ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆಗೀಡಾಗಿದ್ದಳು. ಅವನನ್ನು (ಆರೋಪಿಯನ್ನು) ಸಾರ್ವಜನಿಕವಾಗಿ ಬೆತ್ತಲೆಯಾಗಿ ಹೊಡೆಯಬೇಕು. ಕೂಡಲೇ ಪ್ರಾಂಶುಪಾಲರನ್ನು ವಜಾಗೊಳಿಸಬೇಕು'' ಎಂದು ಆಕ್ರೋಶ ಹೊರಹಾಕಿದ್ದಾರೆ.

"ನಾವು ಶಾಲೆಗೆ ಪಾವತಿಸಿದ ದೇಣಿಗೆಯನ್ನು ಹಿಂತಿರುಗಿಸಬೇಕು. ಏಕೆಂದರೆ ನಾವು ನಮ್ಮ ಮಗಳನ್ನು ಮತ್ತೆ ಆ ಶಾಲೆಗೆ ಕಳುಹಿಸುವುದಿಲ್ಲ. ಇದು ಪ್ರತಿಷ್ಠಿತ ಶಾಲೆಯಾಗಿರಬಹುದು. ಆದರೆ ಪ್ರಿನ್ಸಿಪಾಲ್ ಒಬ್ಬ ಕಾಮುಕ. ಅಂತಹ ಘೋರ ಅಪರಾಧವನ್ನು ಮಾಡಲು ಯಾರೂ ಧೈರ್ಯ ಮಾಡದ ರೀತಿಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು "ಎಂದು ಪೋಷಕರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+