ಕೋಲ್ಕತ್ತಾದಲ್ಲಿ ಮೂವರು ಅಲ್ ಕೈದಾ ಶಂಕಿತ ಉಗ್ರರ ಬಂಧನ

Posted By:
Subscribe to Oneindia Kannada

ಕೋಲ್ಕತ್ತಾ, ನವೆಂಬರ್ 21: ಮೂವರು ಶಂಕಿತ ಅಲ್ ಕೈದಾ ಉಗ್ರಗಾಮಿಗಳನ್ನು ಕೋಲ್ಕತ್ತಾದಲ್ಲಿ ಮಂಗಳವಾರ ಬಂಧಿಸಲಾಗಿದೆ. ಕೋಲ್ಕತ್ತಾ ನಿಲ್ದಾಣದಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆ ಪೈಕಿ ಇಬ್ಬರು ಬಾಂಗ್ಲಾದೇಶೀಯರು ಹಾಗೂ ಇನ್ನೊಬ್ಬ ಕೋಲ್ಕತ್ತಾ ಸಮೀಪದ ಬಶಿರಾತ್ ನವನು ಎಂದು ತಿಳಿದುಬಂದಿದೆ.

ಐವರು ಲಷ್ಕರ್ ಎ ತೋಯ್ಬಾ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಈ ಮೂವರು ಭಯೋತ್ಪಾದಕರು ಮತ್ತು ಕೋಲ್ಕತ್ತಾ ನಿಲ್ದಾಣದಲ್ಲಿ ಮಂಗಳವಾರ ಮಧಾಹ್ನ ವಶಕ್ಕೆ ಪಡೆಯಲಾಗಿದೆ ಎಂದು ವಿಶೇಷ ಕಾರ್ಯಪಡೆಯವರು ಮಾಹಿತಿ ನೀಡಿದ್ದಾರೆ. ಬಂಧಿತರ ಬಳಿ ಅಲ್ ಕೈದಾ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಜೆಹಾದಿ ವಿವರಗಳು, ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ದೊರೆತಿದೆ.

Terrorists

ಕೋಲ್ಕತ್ತಾದಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಕಾರಣಕ್ಕೆ ಈ ಮೂವರು ಬಂದಿದ್ದರೆ ಎಂಬ ಬಗ್ಗೆ ವಿಶೇಷ ಕಾರ್ಯ ಪಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಆದರೆ ಬಂಧಿತರ ಬಳಿ ಬಾಂಬ್ ತಯಾರಿಸುವುದು ಹೇಗೆ? ಭಯೋತ್ಪಾದನಾ ದಾಳಿಯ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂಬ ಬಗೆಗಿನ ವಿವರಗಳು ಪತ್ತೆಯಾಗಿವೆ. ಈ ಮಾಹಿತಿಗಳನ್ನು ಲ್ಯಾಪ್ ಟಾಪ್ ನಲ್ಲಿ ಸಂಗ್ರಹಿಸಿದ್ದರು ಎಂದು ಗೊತ್ತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 suspected Al Qaeda terrorists are arrested in Kolkata.They have been captured from Kolkata Station. 2 suspected terrorist are Bangladeshi Nationals and another one is the resident of Bashirhat, Dist North 24 Pgn, close to Kolkata.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ