ಮಾನಸ ಸರೋವರ ಯಾತ್ರೆಯಲ್ಲಿ 2, ಅಮರನಾಥದಲ್ಲಿ 3 ಯಾತ್ರಿಗಳ ಸಾವು
ಶ್ರೀನಗರ, ಜುಲೈ 3: ಅಮರನಾಥ ಯಾತ್ರೆ ವೇಳೆ ಮೂವರು ಭಕ್ತಾದಿಗಳು ಹಾಗೂ ಮಾನಸ ಸರೋವರ ಯಾತ್ರೆಯಲ್ಲಿ ಇಬ್ಬರು ಸೇರಿ ಒಟ್ಟು 5 ಜನರು ಸಾವನ್ನಪ್ಪಿದ್ದಾರೆ.
ಅಮರನಾಥ ಗುಹೆಗೆ ತೆರಳುವ ದಾರಿಯಲ್ಲಿ ಇಂದು ಇಬ್ಬರು ಆಂಧ್ರ ಪ್ರದೇಶದವರು ಮತ್ತು ಉತ್ತರಾಖಂಡದ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಅಮರನಾಥ ಯಾತ್ರೆ ವೇಳೆ ಈ ಬಾರಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
75 ವರ್ಷ ವಯಸ್ಸಿನ ಆಂಧ್ರ ಪ್ರದೇಶದ ಫಿವಲಯಂಗೆ ಸೇರಿದ ತೋಟ ರಾಧನಂ ಎಂಬ ಮಹಿಳೆ ಹೃದಯ ಸ್ಥಂಬನದಿಂದ ಬಾಲ್ತಾಲ್ ನಲ್ಲಿ ಸಾವನ್ನಪ್ಪಿದ್ದಾರೆ. 65 ವರ್ಷದ ರಾಧಾ ಕೃಷ್ಣ ಶಾಸ್ತಿ ಆಂಧ್ರ ಪ್ರದೇಶದ ಅನಂತಪುರಂಗೆ ಸೇರಿದವರಾಗಿದ್ದು, ಅವರು ಸಂಗಂನಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ.
ಉತ್ತರಾಖಂಡ್ ನ ಪುಷ್ಕರ್ ಜೋಶಿ ಬ್ರಾರಿಮಾರ್ಗ್ ಮತ್ತು ರೈಲ್ ಪತ್ರಿ ನಡುವಿನ ದಾರಿಯಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಹೀಗೆ ಮೂರು ಯಾತ್ರಿಗಳು, ಓರ್ವ ಬಿಎಸ್ಎಫ್ ಅಧಿಕಾರಿ, ಓರ್ವ ಡೋಲಿ ಹಾಗೂ ಮತ್ತೋರ್ವ ಯಾತ್ರೆಯ ಸ್ವಯಂ ಸೇವಕ ಸೇರಿ ಆರು ಜನರು ಈ ಬಾರಿಯ ಅಮರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಾನ ಸರೋವರ ಯಾತ್ರೆಯಲ್ಲಿ ಇಬ್ಬರ ಸಾವು
ಭಾರತದಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿದ್ದ ಇಬ್ಬರು ನೇಪಾಳದಲ್ಲಿ ಸಾವನ್ನಪ್ಪಿದ್ದಾರೆ. ಇವರು ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.











Click it and Unblock the Notifications