India Weather Alert: ಚಂಡಮಾರುತ ಪ್ರಸರಣ! ಈ ಭಾಗಗಳಲ್ಲಿ ಭಾರೀ ಮಳೆ ಸಂಭವ, ಶಾಲೆಗಳಿಗೆ ರಜೆ ಸಾಧ್ಯತೆ
India Weather: ಮುಂಗಾರು ಮಳೆ ಆರ್ಭಟ ಕೆಲವು ಭಾಗಗಳಲ್ಲಿ ಕ್ಷಿಣಿಸಿದರೆ, ಮತ್ತೆ ಒಂದಷ್ಟು ಭಾಗಗಳಲ್ಲಿ ವ್ಯಾಪಕವಾಗಿ ಸಕ್ರಿಯವಾಗಿದೆ. ಇದಕ್ಕೆ ಬದಲಾಗುತ್ತಿರುವ ಹವಾಮಾನ ವೈಪರೀತ್ಯಗಳು ಕಾರಣವೆಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ವಿವಿಧೆಡೆ ಹವಾಮಾನ ವೈಪರೀತ್ಯಗಳು ಘಟಿಸಿವೆ. ಕಾರಣ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಈ ಸಂಬಂಧ ಕೆಲವು ಕಡೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ.
ಪಾಕಿಸ್ತಾನ ಆಗ್ನೇಯ ಭಾಗದಲ್ಲಿ ಹಾಗೂ ರಾಜಸ್ಥಾನದ ಭೂ ಮೇಲ್ಮೈನಲ್ಲಿ ವಾಯುಭಾರ ಕುಸಿತ ಸಂಭವಿಸಿದೆ. ಇದು ಗಂಟೆಗೆ 05 ಕಿ.ಮೀ. ವೇಗದಲ್ಲಿ ಪಶ್ಚಿಮ-ನೈಋತ್ಯ ದಿಕ್ಕಿಗೆ ಚಲಿಸುತ್ತಿದೆ. ಇದು ತನ್ನ ಮೂಲ ಸ್ಥಾನದಿಂದ ಹೈದರಾಬಾದ್ ದಿಕ್ಕಿನತ್ತ ಸುಮಾರು 50 ಕಿ.ಮೀ. ವೇಗದಲ್ಲಿ, ಪಡಿಡಾನ್ ನಿಂದ 130 ಕಿ.ಮೀ ಆಗ್ನೇಯಕ್ಕೆ ಭಾಗಕ್ಕೆ ಚಲಿಸುವ ನಿರೀಕ್ಷೆ ಇದೆ.

ಮುಂಗಾರು ಸ್ಟ್ರಫ್ ಬಿರುಗಾಳಿಯು ಸರಾಸರಿ ಸಮುದ್ರ ಮಟ್ಟದಿಂದ ಆಗ್ನೇಯ ಪಾಕಿಸ್ತಾನ, ಅಜ್ಮೀರ್, ಆಗ್ರಾ, ಪ್ರಯಾಗರಾಜ್, ರಾಂಚಿ, ದಿಘಾ ಮತ್ತು ಅಲ್ಲಿಂದ ಪೂರ್ವಕ್ಕೆ ಈಶಾನ್ಯ ಬಂಗಾಳಕೊಲ್ಲಿಯತ್ತ ಬೀಸುತ್ತಿದೆ. ಈ ವಾಯುವ್ಯ ವಾಯುವ್ಯ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಪಾಕಿಸ್ತಾನದ ಮೇಲೆ ವಾಯುವ್ಯ ರಾಜಸ್ಥಾನದವರೆಗೆ ಸಾಗಲಿದೆ. ಇದು ಸಮುದ್ರ ಮಟ್ಟದಿಂದ 3.1 ಕಿ.ಮೀ. ಎತ್ತರದಲ್ಲಿದೆ.
ಮತ್ತೊಂದು ಚಂಡಮಾರುತ ಪರಿಚಲನೆಯು ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿದ್ದು, ಅದು ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿಗಳಿಗೆ ಹೊಂದಿಕೊಂಡಿದೆ. ಇದು ಸಮುದ್ರ ಮೇಲ್ಮೈನಿಂದ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದೆ ತನ್ನ ಸ್ಥಾನದಿಂದ ದಕ್ಷಿಣ ಭಾಗದತ್ತ ವಾಲಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಭಾರೀ ಮಳೆ ನಿರೀಕ್ಷೆ
ಇದರ ಪ್ರಭಾವದಿಂದಾಗಿ ಮಣಿಪುರ, ನಾಗಾಲ್ಯಾಂಡ್, ಮಿಜೋರಾಮ್, ತ್ರಿಪುರ ಗಳಲ್ಲಿ ಮುಂದಿನ ಮೂರು ದಿನ ಅತ್ಯಧಿಕ ಮಳೆ ಆಗಲಿದೆ. ಇದೇ ವೇಳೆ ಮಧ್ಯ ಪ್ರದೇಶ, ಉತ್ತರ ಪ್ರದೇಶ ಕೆಲವು ಭಾಗಗಳಲ್ಲಿ, ಬಿಹಾರ್, ಮೇಘಾಲಯ, ಅಸ್ಸಾಂ, ಒಡಿಶಾ, ಆಂಧ್ರ ಪ್ರದೇಶ, ಜಾರ್ಖಂಡ, ತೆಲಂಗಾಣ ಭಾಗಗಳಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಬಹುದೆಂದು ಹೇಳಲಾಗುತ್ತಿದೆ.
ಶಾಲೆ-ಕಾಲೇಜುಗಳಿಗೆ ರಜೆ ಸಾಧ್ಯತೆ
ಈಗಾಗಲೇ ಅರುಣಾಚಲ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ಹಾಗೂ ಇತರ ಭಾಗಗಳಲ್ಲಿ ಮಳೆ ಆಗಿ ಪ್ರವಾಹ, ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಇದೀಗ ಮೇಲಿನ ಭಾರೀ ಮಳೆ ಪ್ರದೇಶಗಳಲ್ಲೂ ಮತ್ತದೇ ನಷ್ಟ ಉಂಟಾಗುವ ಸಾಧ್ಯತೆ ಇದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಣಿಪುರ, ಅಸ್ಸಾಂ, ತ್ರಿಪುರ, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳ ಮಳೆ ನಿರೀಕ್ಷಿತ ಪ್ರದೇಶಗಳ ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ. ಇದು ಆಯಾ ಜಿಲ್ಲಾಡಳಿತ, ಸರ್ಕಾರದ ನಿರ್ಧಾರದ ಮೇಲೆ ಅವಲಂಬಿಸಿದೆ.












Click it and Unblock the Notifications