ಭಾರತದಲ್ಲಿ 3.69 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ
ನವದೆಹಲಿ, ಮೇ 02; ಭಾನುವಾರ ಭಾರತದಲ್ಲಿ 3,69,957 ಹೊಸ ಕೋವಿಡ್ ಪ್ರಕರಣಗಳು ರಾತ್ರಿ 11.30ರ ತನಕ ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 3,455 ಜನರು ಮೃತಪಟ್ಟಿದ್ದಾರೆ.
ದೇಶದಲ್ಲಿ ಇದುವರೆಗೂ 1,99,19,900 ಕೋವಿಡ್ ಪ್ರಕರಣಗಳು ದಾಖಲಾಗಿವೆ. 2,18,909 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 56,647 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಶೇ 16ರಷ್ಟು ಹೊಸ ಪ್ರಕರಣ ರಾಜ್ಯದ್ದಾಗಿದೆ.
ಕರ್ನಾಟಕದಲ್ಲಿ 37,773. ಕೇರಳದಲ್ಲಿ 31,959 ಹೊಸ ಪ್ರಕರಣಗಳು ದಾಖಲಾಗಿದ್ದವು. ಮೇ 1ರಂದು ಮಹಾರಾಷ್ಟ್ರದಲ್ಲಿ 669, ಉತ್ತರ ಪ್ರದೇಶದಲ್ಲಿ 288 ಮತ್ತು ಕರ್ನಾಟಕದಲ್ಲಿ 217 ಜನರು ಮೃತಪಟ್ಟಿದ್ದರು.

ಮೇ 1ರ ತನಕ ದೇಶದಲ್ಲಿ 18,04,954 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಮೇ 1ರ ಶನಿವಾರ 19 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆದಿದೆ. ಇದುವರೆಗೂ ದೇಶದಲ್ಲಿ 29.01 ಕೋಟಿ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.
ಮೇ 2ರ ಬೆಳಗ್ಗೆ 7 ಗಂಟೆಯ ತನಕ 18.26 ಲಕ್ಷ ಕೋವಿಡ್ ವಿರುದ್ಧದ ಲಸಿಕೆಯನ್ನು ನೀಡಲಾಗಿದೆ. ಕಳೆದ 24 ಗಂಟೆಯಲ್ಲಿಯೇ 9 ಲಕ್ಷ ಲಸಿಕೆ ಕೊಡಲಾಗಿದೆ. 15.68 ಲಕ್ಷ ಡೋಸ್ ಲಸಿಕೆಯನ್ನು ಇದುವರೆಗೂ ನೀಡಲಾಗಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಲಸಿಕೆ ನೀಡುವ ಪ್ರಮಾಣ ಕಳೆದ 15 ದಿನಗಳಿಂದ ಕಡಿಮೆಯಾಗುತ್ತಿದೆ. ಮೊದಲು ಪ್ರತಿದಿನ 32.69 ಲಕ್ಷ ಡೋಸ್ ಲಸಿಕೆಯನ್ನು ಪ್ರತಿದಿನ ನೀಡಲಾಗುತ್ತಿತ್ತು. ಏಪ್ರಿಲ್ 30ರಂದು ಕೇವಲ 23.72 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ.
ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಹಲವು ರಾಜ್ಯಗಳಲ್ಲಿ ಹೊಸ ಪ್ರಕರಣ ಹೆಚ್ಚಾಗುತ್ತಿರುವುದು ದೇಶದ ಕೋವಿಡ್ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಿದೆ.












Click it and Unblock the Notifications