ಆಕಾಶ್-3 ಕ್ಷಿಪಣಿ ಪರೀಕ್ಷೆಯಲ್ಲಿ ಫೇಲ್: 3,600 ಕೋಟಿ ರು. ವ್ಯರ್ಥ

ಆಕಾಶ್ ಕ್ಷಿಪಣಿಗಳು ಪರೀಕ್ಷೆಯಲ್ಲಿ ವಿಫಲ. ಮಹಾಲೇಖ ಪಾಲರ ಕಳವಳ. ಸಂಸತ್ತಿಗೆ ಸಲ್ಲಿಸಿರುವ ವರದಿಯಲ್ಲಿ ಆತಂಕ.

ನವದೆಹಲಿ, ಜುಲೈ 29: ಸುಮಾರು 3,600 ಕೋಟಿ ರು.ಗಳನ್ನು ವ್ಯಯಿಸಿ ತಯಾರಿಸಲಾಗಿದ್ದ ಆಕಾಶ್ ಮಾದರಿಯ ಮೂರನೇ ಆವೃತ್ತಿಯ ಕ್ಷಿಪಣಿಗಳು ಪರೀಕ್ಷೆಗಳಲ್ಲಿ ವಿಫಲವಾಗಿವೆ ಎಂದು ಭಾರತದ ಮಹಾಲೇಖಪಾಲರು (ಸಿಎಜಿ) ತಿಳಿಸಿದ್ದಾರೆ.

ಇದರಿಂದಾಗಿ, ಯುದ್ಧದಂಥ ಭೀಕರ ಸಮಯದಲ್ಲಿ ಭಾರತವು ಕ್ಷಿಪಣಿಗಳ ಅಭಾವ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

3,600 Crores Later, Made-In-India Akash Missile Fails Tests, Says Auditor

ಶುಕ್ರವಾರ ಸಂಸತ್ತಿಗೆ ಅವರು ಸಲ್ಲಿಸಿರುವ ಸೇನಾ ಶಸ್ತ್ರಾಸ್ತ್ರಗಳ ಕುರಿತಂತೆ ಇತ್ತೀಚೆಗೆ ನಡೆಸಿರುವ ಆಡಿಟಿಂಗ್ ವಿವರಗಳನ್ನು ಸಲ್ಲಿಸಿದ ಸಿಎಜಿ, ಆಕಾಶ್ ಕ್ಷಿಪಣಿಯ ವೈಫಲ್ಯವನ್ನು ಒತ್ತಿ ಹೇಳಿದ್ದಾರೆ.

ಆಕಾಶ್ ಕ್ಷಿಪಣಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ (ಬಿಇಎಲ್) ತಯಾರಿಸಿದೆ. ಏಳು ವರ್ಷಗಳ ಹಿಂದೆ, ಈ ಕ್ಷಿಪಣಿ ತಯಾರಿಕೆಗೆ ಆದೇಶ ನೀಡಲಾಗಿತ್ತು. ಅಲ್ಲದೆ, ಈ ಕ್ಷಿಪಣಿ ತಯಾರಿಕೆಗಾಗಿ 3,600 ಕೋಟಿ ರು. ವ್ಯಯಿಸಲಾಗಿದೆ. ಆದರೂ, ಕ್ಷಿಪಣಿಯು ಪರೀಕ್ಷೆಯಲ್ಲಿ ವಿಫಲವಾಗಿರುವುದು ಆತಂಕ ಸೃಷ್ಟಿಸಿದೆ ಎಂದರು.

ಈಗಾಗಲೇ ಆಕಾಶ್, ಆಕಾಶ್ ಎಂಕೆ -2 ಕ್ಷಿಪಣಿಗಳು ಯಶಸ್ವಿಯಾಗಿದ್ದು ಅವುಗಳನ್ನು ಭಾರತೀಯ ಸೇನೆ ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಇದೀಗ ಮೂರನೇ ಆವೃತ್ತಿಯಲ್ಲಿ ಸುಮಾರು 6 ಕ್ಷಿಪಣಿಗಳ ತಯಾರಿಕೆಗೆ ಅನುವು ಮಾಡಲಾಗಿತ್ತು. ಆದರೆ, ಅವು ಪರೀಕ್ಷೆಯಲ್ಲಿ ವಿಫಲವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+