• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಐಸಿಸಿ ಪುನರ್ ರಚನೆ: 23 ಪತ್ರವೀರರಿಗೆ ಎಲ್ಲರಿಗೂ ಗೇಟ್ ಪಾಸ್ ನೀಡಿದ ಸೋನಿಯಾ

|

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಿದ ಮೇಜರ್ ಸರ್ಜರಿ, ಪಕ್ಷದೊಳಗೆ ಭಾರೀ ಸಂಚಲನವನ್ನು ಮೂಡಿಸಿದೆ. ಹೈಕಮಾಂಡ್ ವಲಯದಲ್ಲಿ ಅತ್ಯಂತ ಆಪ್ತರಾಗಿದ್ದ ಹಿರಿಯ ನಾಯಕರನ್ನು ಆಯಕಟ್ಟಿನ ಸ್ಥಾನದಿಂದ ಸೋನಿಯಾ ಹೊರಗಿಟ್ಟಿದ್ದಾರೆ.

ಎಐಸಿಸಿ ಪುನರ್ ರಚನೆಯನ್ನು ಅವಲೋಕಿಸಿದರೆ, ರಾಹುಲ್ ಗಾಂಧಿಯವರಲ್ಲಿ ಆಪ್ತರಾಗಿರುವ ಹೆಚ್ಚಿನವರಿಗೆ ಮನ್ನಣೆ ಸಿಕ್ಕಿದೆ. ಪಕ್ಷದ ನಿರ್ಣಾಯಕ ಘಟಕವಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲೂ ಆಮೂಲಾಗ್ರ ಬದಲಾವಣೆಯನ್ನು ಸೋನಿಯಾ ಪ್ರಕಟಿಸಿದ್ದಾರೆ.

ಕೆಪಿಸಿಸಿಯಿಂದ ಕೆ.ಸಿ.ವೇಣುಗೋಪಾಲ್ ಔಟ್: ಸಿದ್ದರಾಮಯ್ಯಗೆ ಹಿನ್ನಡೆ?

ಜೊತೆಗೆ, ಚುನಾವಣಾ ಸಮಿತಿಯಲ್ಲೂ ಬದಲಾವಣೆ ತರಲಾಗಿದ್ದು, ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಈ ಸಮಿತಿಯಿಂದ ಔಟ್ ಆಗಿದ್ದಾರೆ. ಕೃಷ್ಣ ಭೈರೇಗೌಡ ಈ ಸಮಿತಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ಇನ್ನು, ದಶಕಗಳಿಂದಲೂ, ಹೈಕಮಾಂಡ್ ಗೆ ನಿಷ್ಟರಾಗಿರುವ ಗುಲಾಂನಬಿ ಆಜಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ನಾಯಕತ್ವ ಬದಲಾವಣೆಯ ಬಗ್ಗೆ ಪತ್ರ ಬರೆದಿದ್ದ/ಪತ್ರಕ್ಕೆ ಸಹಿಹಾಕಿದ್ದ 23 ಪತ್ರವೀರರಲ್ಲಿ, ಒಬ್ಬರನ್ನು ಬಿಟ್ಟು, ಮಿಕ್ಕೆಲ್ಲರಿಗೂ ಸೋನಿಯಾ ಗೇಟ್ ಪಾಸ್ ನೀಡಿದ್ದಾರೆ. ಅವರೆಲ್ಲಾ ಯಾರು?ಮುಂದೆ ಓದಿ..

ಪಕ್ಷದ ವರ್ಚುಯಲ್ ಸಭೆಯಲ್ಲಿ ರಾಹುಲ್ ಗಾಂಧಿ ಆಕ್ಷೇಪ

ಪಕ್ಷದ ವರ್ಚುಯಲ್ ಸಭೆಯಲ್ಲಿ ರಾಹುಲ್ ಗಾಂಧಿ ಆಕ್ಷೇಪ

ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮತ್ತು ಮರು ಸಂಘಟನೆಗೆ ಆಗ್ರಹಿಸಿ 23 ಹಿರಿಯ ಕಾಂಗ್ರೆಸ್ ಮುಖಂಡರು, ಸೋನಿಯಾ ಗಾಂಧಿಗೆ ಪತ್ರವನ್ನು ಬರೆದಿದ್ದರು. ಅದರಲ್ಲಿ ಕುಟುಂಬ ರಾಜಕಾರಣದಿಂದ ಹೊರಬರಬೇಕು ಎನ್ನುವ ಕೂಗೂ ಸೇರಿತ್ತು ಎಂದು ಹೇಳಲಾಗಿತ್ತು. ಪಕ್ಷದ ವರ್ಚುಯಲ್ ಸಭೆಯಲ್ಲಿ ರಾಹುಲ್ ಗಾಂಧಿ ಕೆಲವು ನಾಯಕರ ವಿರುದ್ದ ಬೇಸರವನ್ನೂ ವ್ಯಕ್ತ ಪಡಿಸಿದ್ದರು.

ಕೆಲವು ಪಕ್ಷದ ಹಿರಿಯ ನಾಯಕರು ಬಿಜೆಪಿಗೆ ಸಹಕರಿಸುತ್ತಿದ್ದಾರೆ

ಕೆಲವು ಪಕ್ಷದ ಹಿರಿಯ ನಾಯಕರು ಬಿಜೆಪಿಗೆ ಸಹಕರಿಸುತ್ತಿದ್ದಾರೆ

ಕೆಲವು ಪಕ್ಷದ ಹಿರಿಯ ನಾಯಕರು ಬಿಜೆಪಿಗೆ ಸಹಕರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಕಪಿಲ್ ಸಿಬಲ್, ಗುಲಾಂನಬಿ ಆಜಾದ್, ವೀರಪ್ಪ ಮೊಯ್ಲಿ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು. ಈಗ, ಪತ್ರ ಬರೆದ 23 ಕಾಂಗ್ರೆಸ್ಸಿಗರಲ್ಲಿ, ಮುಕುಲ್ ವಾಸ್ನಿಕ್ ಒಬ್ಬರನ್ನು ಬಿಟ್ಟು, ಮಿಕ್ಕೆಲ್ಲರನ್ನೂ ಬಹುತೇಕ ಕೈಬಿಡಲಾಗಿದೆ. ಪತ್ರ ಬರೆದಿದ್ದ 23 ಮುಖಂಡರ ಹೆಸರು, ಮುಂದಿನ ಸ್ಲೈಡಿನಲ್ಲಿ..

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬದಲಾವಣೆ

23 ಪತ್ರವೀರರಿಗೆ ಎಲ್ಲರಿಗೂ ಗೇಟ್ ಪಾಸ್

23 ಪತ್ರವೀರರಿಗೆ ಎಲ್ಲರಿಗೂ ಗೇಟ್ ಪಾಸ್

ಗುಲಾಂನಬಿ ಆಜಾದ್, ಆನಂದ್ ಸಿಂಗ್, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ವಿವೇಕ್ ಠಂಕಾ, ಜಿತಿನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೇಂದ್ರ ಕೌರ್ ಭಟ್ಟಲ್, ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚೌಹಾಣ್, ಪಿ.ಜೆ.ಕುರಿಯನ್, ಅಜಯ್ ಸಿಂಗ್. ಮುಂದುವರಿಯುತ್ತಾ..

ಸಂಘಟನೆಯಲ್ಲಿ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದರು

ಸಂಘಟನೆಯಲ್ಲಿ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದರು

ರೇಣುಕಾ ಚೌಧುರಿ, ಮಿಲಿಂದ್ ದಿಯೋರಾ, ರಾಜ್ ಬಬ್ಬರ್, ಅರವಿಂದರ್ ಸಿಂಗ್ ಲವ್ಲಿ, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರಸಾದ್ ಸಿಂಗ್, ಕುಲದೀಪ್ ಶರ್ಮಾ, ಯೋಗಾನಂದ್ ಶಾಸ್ತ್ರಿ, ಸಂದೀಪ್ ದೀಕ್ಷಿತ್. ಇವರೆಲ್ಲಾ ನಾಯಕತ್ವ ಮತ್ತು ಸಂಘಟನೆಯಲ್ಲಿ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದರು.

English summary
23 Senior Congress Leaders Who Wrote Letter To Sonia Gandhi Not Considered In AICC Revamp,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X