ಜಾರ್ಖಂಡ್: ಬುಡಕಟ್ಟು ಮಹಿಳೆಯನ್ನು ಕೊಂದು 18 ತುಂಡುಗಳನ್ನಾಗಿಸಿದ ಪತಿಯ ಬಂಧನ
ರಾಂಚಿ, ಡಿ. 18: ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ 22 ವರ್ಷದ ಬುಡಕಟ್ಟು ಮಹಿಳೆಯ ಮೃತದೇಹ 12 ತುಂಡುಗಳಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
22 ವರ್ಷದ ಬುಡಕಟ್ಟು ಮಹಿಳೆ ರೂಬಿಕಾ ಪಹಾಡಿಯನ್ನು ಆಕೆಯ ಪತಿ ಕೊಂದು 18 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಯ ಮೃತ ದೇಹದ 12 ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂತ್ರಸ್ತೆಯ ಪತಿಯನ್ನು ಶಂಕಿತ ಎಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದಿಲ್ದಾರ್ ಅನ್ಸಾರಿ ಎಂದು ಗುರುತಿಸಲಾಗಿದೆ.
Rubika Pahadi was the 2nd wife of Dildar Ansari, he already had a wife. This was the cause of their personal dispute. Due to this, they murdered her and chopped her into pieces. The probe reveals the involvement of her husband. A probe is on: Sudarshan Prasad Mandal, DIG Santhal pic.twitter.com/C4iy08x01v
— ANI (@ANI) December 18, 2022
ಮಹಿಳೆಯ ದೇಹದ ಕೆಲವು ಭಾಗಗಳು ಇನ್ನೂ ಕಾಣೆಯಾಗಿವೆ. ನಾಪತ್ತೆಯಾಗಿರುವ ದೇಹದ ಭಾಗಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಸಂತ್ರಸ್ತೆ ಆರೋಪಿಯ ಎರಡನೇ ಪತ್ನಿಯಾಗಿದ್ದಾರೆ.

ಸಾಹಿಬ್‌ಗಂಜ್‌ನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ದೇಹದ 12 ಭಾಗಗಳು ಪತ್ತೆಯಾಗಿವೆ. ದೇಹದ ಕೆಲವು ಭಾಗಗಳು ಇನ್ನೂ ಕಾಣೆಯಾಗಿವೆ. ಅವುಗಳನ್ನು ಹುಡುಕಲಾಗುತ್ತಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆ ಆರೋಪಿಯ ಎರಡನೇ ಪತ್ನಿ ಎಂದು ಸಾಹಿಬ್‌ಗಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
"ರೂಬಿಕಾ ಪಹಾಡಿ ದಿಲ್ದಾರ್ ಅನ್ಸಾರಿಯ 2 ನೇ ಪತ್ನಿ, ಅವರಿಗೆ ಈಗಾಗಲೇ ಪತ್ನಿ ಇದ್ದರು. ಇದು ಅವರ ವೈಯಕ್ತಿಕ ವಿವಾದಕ್ಕೆ ಕಾರಣವಾಗಿತ್ತು. ಇದರಿಂದಾಗಿ ಆಕೆಯನ್ನು ಕೊಲೆ ಮಾಡಿ ತುಂಡುತುಂಡಾಗಿ ಕತ್ತರಿಸಿದ್ದಾರೆ. ತನಿಖೆಯಲ್ಲಿ ಆಕೆಯ ಪತಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಯುತ್ತಿದೆ" ಎಂದು ಡಿಐಜಿ ಸುದರ್ಶನ್ ಪ್ರಸಾದ್ ಮಂಡಲ್ ಹೇಳಿದ್ದಾರೆ.
ಸಂತ್ರಸ್ತೆ ರೂಬಿಕಾ ಪಹಾಡಿ ಎಂದು ಗುರುತಿಸಲಾಗಿದ್ದು, ವರದಿಗಳ ಪ್ರಕಾರ ಸುಮಾರು 10 ರಿಂದ 15 ದಿನಗಳ ಹಿಂದೆ ದಿಲ್ದಾರ್ ಅನ್ಸಾರಿಯನ್ನು ವಿವಾಹವಾಗಿದ್ದರು. ಮೊದಲ ಪತ್ನಿಯಿದ್ದರೂ ಎರಡನೇ ವಿವಾಹವಾಗಿದ್ದರು. ಇದು ಮನೆಯಲ್ಲಿ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಶುಕ್ರವಾರ ರಾತ್ರಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಬೊರಿಯೊ ಸಂತಾಲಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡದ ಹಿಂದೆ ಮಾನವ ದೇಹದ ಭಾಗವೊಂದು ಪತ್ತೆಯಾಗಿದ್ದು, ನಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಇದಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications