83 ಜನರಿಗೆ ಪಂಗನಾಮ ಹಾಕಿದ್ದ ಫ್ಯಾಷನ್ ಡಿಸೈನರ್ ಬಂಧನ
ಕೊಚ್ಚಿ, ಜುಲೈ 03 : ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 83 ಮಂದಿಗೆ ವಂಚಿಸಿದ 21 ವರ್ಷದ ಯುವತಿಯನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಗಲ್ಫ್ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ 83 ಜನರಿಂದ ಸುಮಾರು 45 ಲಕ್ಷ ರು. ಪೀಕಿದ್ದ ಕೇರಳದ ತ್ರಿಶೂರ್ ಮೂಲದ ಕೃಷ್ಣೆಂದು ಹಾಗೂ ಆಕೆಯ ಸಹವರ್ತಿ ಜಿನ್ಸನ್ (27) ಎಂಬುರವನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಜಿನ್ಸನ್ ಜ್ಯುವೆಲ್ಲರಿ ಶಾಪ್ ವೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಕೃಷ್ಣೆಂದು ಕಂಪನಿಯೊಂದರಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ಾಳೆ.

ಫೇಸ್‌ಬುಕ್ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಬಲೆಗೆ ಹಾಕಿಕೊಂಡು, ಗಲ್ಫ್ ದೇಶಗಳಲ್ಲಿ ಉತ್ತಮ ಸಂಬಳದ ಉದ್ಯೋಗಗಳ ಆಮಿಷ ತೊರಿಸಿ ಪ್ರತಿಯೊಬ್ಬರಿಂದ 53,000 ರೂಪಾಯಿಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 83 ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಅವರಿಗೆ ಕೆಲಸ ಸಿಗದ ವೇಳೆ ತಾವು ಮೋಸ ಹೋದ ಬಗ್ಗೆ ಅರಿವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಉದ್ಯೋಗದ ನೆಪದಲ್ಲಿ ಆಕೆಗೆ ಕರೆ ಮಾಡಿ ಪೊಲೀಸರು ನಗದು ಹಣವನ್ನು ಖುದ್ದಾಗಿ ಬಂದು ಸಂಗ್ರಹಿಸುವಂತೆ ಹೇಳಿ ಠಾಣೆಗೆ ಕರೆಸಿಕೊಂಡ ಪೊಲೀಸರು ನಂತರ ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ಯುವತಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ.












Click it and Unblock the Notifications