• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವಿಎಂ ವಿರೋಧಿಸಿ 21 ವಿಪಕ್ಷಗಳು ಸಲ್ಲಿಸುವ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

|

ನವದೆಹಲಿ, ಮಾರ್ಚ್ 14: ಲೋಕಸಭೆ ಚುನಾವಣೆ 2019ರ ಹೊಸ್ತಿಲಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ವಿರೋಧಿಸಿ 21 ವಿಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ(ಮಾ.15)ದಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.

ಭಾರತದಲ್ಲಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಗಳು ಹ್ಯಾಕ್ ಮಾಡಬಹುದು ಎಂದು ಸ್ವಯಂಘೋಷಿತ ಸೈಬರ್ ತಜ್ಞರೊಬ್ಬರು ಸವಾಲು ಹಾಕಿರುವ ಸಂದರ್ಭದಲ್ಲೇ ಮುಂದಿನ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಆಗ್ರಹ ಕೇಳಿ ಬಂದಿದೆ. ಆದರೆ, ಎಲ್ಲಾ ಬೇಡಿಕೆ, ಆಗ್ರಹಗಳನ್ನು ತಳ್ಳಿ ಹಾಕಿರುವ ಕೇಂದ್ರ ಚುನಾವಣಾ ಆಯೋಗ, ಇವಿಎಂ ಸುರಕ್ಷಿತವಾಗಿದ್ದು, ಯಾವುದೇ ಕಾಲಕ್ಕೂ ಮತಪತ್ರಗಳ ಬಳಕೆ ಮಾಡುವುದಿಲ್ಲ.

ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?

'ಇವಿಎಂನಲ್ಲಿ ಚುನಾವಣೆ ನಡೆದರೆ ಮತಎಣಿಕೆ ವೇಳೆ 50% ಮತ ಎಣಿಕೆ ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ)ನಲ್ಲಿ ನಡೆದರೆ ಉಳಿದ 50% ವಿವಿಪ್ಯಾಟ್‌(Voter Verified Paper Trail Audit Machines) ಯಂತ್ರದಲ್ಲಿ ನಡೆಯಬೇಕು, ಈ ಸಾಧನಗಳಿಗೆ ಇನ್ನು ಹೆಚ್ಚಿನ ಸುರಕ್ಷತೆ ಬೇಕು' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ವಾದಿಸಿದ್ದಾರೆ.

ಕಾಂಗ್ರೆಸ್‌ನ ಗುಲಾಂನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಟಿಡಿಪಿಯ ಚಂದ್ರಬಾಬು ನಾಯ್ಡು, ಎನ್‌ಸಿಪಿಯ ಮಜಿದ್ ಮೆನನ್, ಡೆರೆಕ್ ಓಬ್ರಿಯನ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಸೇರಿದಂತೆ ಹಲವು ಮುಖಂಡರಿದ್ದ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೊರಾ ಅವರನ್ನು ಫೆಬ್ರವರಿ ತಿಂಗಳಿನಲ್ಲಿ ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿ ಚರ್ಚಿಸಿದ್ದರು.

ವಿವಾದ ಏನೇ ಇರಲಿ, ಇವಿಎಂ ತಯಾರಕ ಕಂಪನಿಗಂತೂ ಭರ್ಜರಿ ಲಾಭ

2014ರ ಲೋಕಸಭೆ ಚುನಾವಣೆ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲು ಮತಯಂತ್ರಗಳ ದುರುಪಯೋಗವೇ ಕಾರಣ, ಇವಿಎಂ ಹ್ಯಾಕ್ ಮಾಡಿದ್ದರಿಂದ ಬಿಜೆಪಿಗೆ ಲಾಭವಾಯಿತು. ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರು ಈ ರಹಸ್ಯವನ್ನು ಹೊರಹಾಕುವ ಭೀತಿ ಎದುರಾಗಿದ್ದರಿಂದ ಅವರನ್ನು ಹತ್ಯೆ ಮಾಡಲಾಯಿತು ಎಂದು ಸೈಬರ್ ತಜ್ಞ ಶುಜಾ ಅವರು ಲಂಡನ್ನಿನ ಹ್ಯಾಕಥಾನ್ ನಲ್ಲಿ ನೀಡಿದ ವಿವರಗಳನ್ನು ಚುನಾವಣಾ ಆಯೋಗದ ಮುಖ್ಯಸ್ಥ ಸುನಿಲ್ ಅವರು ತಳ್ಳಿ ಹಾಕಿದ್ದಾರೆ.

2014ರ ಲೋಕಸಭೆ ಚುನಾವಣೆ, 2017ರ ಉತ್ತರಪ್ರದೇಶ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಗೆಲುವು ಸಾಧಿಸಿತ್ತು ಎಂದು ಕಾಂಗ್ರೆಸ್, ಎಎಪಿ, ಬಿಎಸ್ ಪಿ, ಟಿಡಿಪಿ,ಎಸ್ಪಿ, ಎನ್ ಸಿಪಿ, ಎಡಪಕ್ಷಗಳು ಆರೋಪಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Less than a month before the national elections, 21 opposition parties have approached the Supreme Court, asking for Electronic Voting Machines would be tinker-proof. The court will hear their petitions tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more